ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಿಥಾಲಿ ರಾಜ್ ಬಯೋಪಿಕ್ 'ಶಭಾಷ್ ಮಿಥು' ಟ್ರೈಲರ್ ಬಿಡುಗಡೆ

Mithali Rajs biopic Shabhaash Mithu movies trailer released

ಇತ್ತೀಚೆಗಷ್ಟೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿ ತನ್ನ 22 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನಕ್ಕೆ ಪೂರ್ಣವಿರಾಮ ಇಟ್ಟ ಮಿಥಾಲಿ ರಾಜ್ ಅವರ ಬಯೋಪಿಕ್ ಬಾಲಿವುಡ್‌ನಲ್ಲಿ ತಯಾರಾಗಿದೆ. ಮಿಥಾಲಿ ರಾಜ್ ಅವರ ಕ್ರಿಕೆಟ್ ಜೀವನವನ್ನು ತೆರೆಯ ಮೇಲೆ ತರಲು ವಯಾಕಾಮ್ 18 ಪ್ರೊಡಕ್ಷನ್ ಬಂಡವಾಳ ಹೂಡಿ ಸಿದ್ಧವಾಗಿದ್ದು, ಶ್ರೀಜಿತ್ ಮುಖರ್ಜಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ಈ ಚಿತ್ರ ಜುಲೈ 15ರಂದು ದೊಡ್ಡ ಮಟ್ಟದಲ್ಲಿ ತೆರೆಗೆ ಅಪ್ಪಳಿಸಲಿದ್ದು, ಇದಕ್ಕೂ ಮುನ್ನ ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಕ್ರಿಕೆಟ್ ಪ್ರೇಮಿಗಳ ಗಮನವನ್ನು ತನ್ನತ್ತ ಸೆಳೆಯುತ್ತಿದೆ.

ಮಿಥಾಲಿ ರಾಜ್ ಇಂದು ( ಜೂನ್ 20 ) ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಬಯೋಪಿಕ್ 'ಶಭಾಷ್ ಮಿಥು' ಚಿತ್ರದ ಟ್ರೈಲರ್ ಅನ್ನು ಪೋಸ್ಟ್ ಮಾಡಿದ್ದು, ಈಗಾಗಲೇ ಅರವತ್ತು ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇನ್ನು ಈ ಟ್ರೈಲರ್‌ನಲ್ಲಿ ಮಿಥಾಲಿ ರಾಜ್ ಅವರ ಬಾಲ್ಯದ ದಿನಗಳು, ಆಕೆ ಕ್ರಿಕೆಟ್‌ನತ್ತ ಒಲವು ತೋರಿಸಿದ ದೃಶ್ಯಗಳು ಇದ್ದು, ಚಿತ್ರವು ಮಿಥಾಲಿ ರಾಜ್ ಅವರ ಸಂಪೂರ್ಣ ಜೀವನವನ್ನು ತೆರೆ ಮೇಲೆ ತೆರೆದಿಡಲಿದೆ ಎಂಬುದನ್ನು ಊಹಿಸಬಹುದಾಗಿದೆ.

Mithali Raj Retirement : ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್Mithali Raj Retirement : ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್

ಮುಖ್ಯವಾಗಿ ಈ ಟ್ರೈಲರ್‌ನಲ್ಲಿ ಮಹಿಳಾ ಕ್ರಿಕೆಟಿಗರಿಗೆ ಆಗುವ ಅವಮಾನ, ತಿರಸ್ಕಾರ, ಕಡೆಗಣಿಸುವಿಕೆಯ ಅಂಶಗಳ ದೃಶ್ಯಗಳೂ ಸಹ ಇವೆ. ಕ್ರಿಕೆಟ್ ಬೋರ್ಡ್ ಅಧಿಕಾರಿ ಬಳಿ ಮಿಥಾಲಿ ರಾಜ್ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಸರಿಯಾದ ಸವಲತ್ತು ಇಲ್ಲ ಎಂಬ ಕಷ್ಟವನ್ನು ಹೇಳಿಕೊಂಡಾಗ ಆ ಅಧಿಕಾರಿ ಆಚೆ ಇದ್ದ ಗುಮಾಸ್ತನನ್ನು ಕರೆದು ನಾಲ್ಕೈದು ಮಹಿಳಾ ಕ್ರಿಕೆಟಿಗರ ಹೆಸರನ್ನು ಹೇಳು ಎಂದು ಆ ಗುಮಾಸ್ತನಿಗೆ ಪ್ರಶ್ನೆ ಎಸೆಯುತ್ತಾರೆ. ಈ ದೃಶ್ಯವಂತೂ ಸಾಕಷ್ಟು ಸದ್ದು ಮಾಡುತ್ತಿದ್ದು, ಕ್ರಿಕೆಟ್ ಬೋರ್ಡ್‌ಗಳ ಒಳಗಿನ ರಾಜಕೀಯವನ್ನು ಚಿತ್ರ ಬಿಚ್ಚಿಡುವ ಸಾಹಸವನ್ನು ಮಾಡುತ್ತಾ ಎಂಬ ಚರ್ಚೆಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿವೆ.

ಇನ್ನು ಮಿಥಾಲಿ ರಾಜ್ ಪಾತ್ರದಲ್ಲಿ ನಟಿ ತಾಪ್ಸಿ ಪನ್ನು ಉತ್ತಮವಾಗಿ ಅಭಿನಯಿಸಿದ್ದು, ಚಿತ್ರ ಬಿಡುಗಡೆಯಾದ ನಂತರ ಜನರ ಮೆಚ್ಚುಗೆ ಗಳಿಸುವುದು ಖಚಿತ ಎಂಬ ವಿಮರ್ಶೆಯನ್ನು ಟ್ರೈಲರ್ ನೋಡಿದ ಕ್ರಿಕೆಟ್ ವ್ಯಕ್ತಪಡಿಸುತ್ತಿದ್ದಾರೆ. ಟ್ರೈಲರ್ ಹಂಚಿಕೊಂಡಿರುವ ಮಿಥಾಲಿ ರಾಜ್ 'ಒಂದು ಆಟ, ಒಂದು ರಾಷ್ಟ್ರ, ಒಂದು ಮಹತ್ವಾಕಾಂಕ್ಷೆ... ನನ್ನ ಕನಸು! ಚಿತ್ರ ತಂಡಕ್ಕೆ ಕೃತಜ್ಞಳಾಗಿರುತ್ತೇನೆ ಮತ್ತು ನನ್ನ ಕಥೆಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಉತ್ಸುಕಳಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

ನಿವೃತ್ತಿ ಘೋಷಿಸಿದ್ದ ಮಿಥಾಲಿ ರಾಜ್ ಈ ರೀತಿ ಬರೆದುಕೊಂಡಿದ್ದರು:

ಇದೇ ತಿಂಗಳ 8ರಂದು ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಮಿಥಾಲಿ ರಾಜ್ ಆ ದಿನದಂದು ಸಾಮಾಜಿಕ ಜಾಲತಾಣದಲ್ಲಿ "ತಂಡವು ಕೆಲವು ಪ್ರತಿಭಾವಂತ ಯುವ ಆಟಗಾರರ ಕೈಯಲ್ಲಿದೆ ಮತ್ತು ಭಾರತೀಯ ಕ್ರಿಕೆಟ್‌ನ ಭವಿಷ್ಯವು ಉಜ್ವಲವಾಗಿರುವುದರಿಂದ ನನ್ನ ಆಟದ ವೃತ್ತಿಜೀವನಕ್ಕೆ ತೆರೆ ಎಳೆಯಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದರು. "ಎಲ್ಲಾ ಪ್ರಯಾಣಗಳಂತೆ, ಇದು ಕೂಡ ಕೊನೆಗೊಳ್ಳಬೇಕು. ಇಂದು ನಾನು ಎಲ್ಲಾ ರೀತಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ದಿನ. ಪ್ರತಿ ಬಾರಿ ನಾನು ಮೈದಾನಕ್ಕೆ ಕಾಲಿಟ್ಟಾಗ, ಭಾರತವನ್ನು ಗೆಲ್ಲಿಸಲು ಸಹಾಯ ಮಾಡುವ ಉದ್ದೇಶದಿಂದ ನಾನು ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ. ತ್ರಿವರ್ಣ ಧ್ವಜವನ್ನು ಪ್ರತಿನಿಧಿಸಲು ನನಗೆ ನೀಡಿದ ಅವಕಾಶವನ್ನು ನಾನು ಯಾವಾಗಲೂ ಗೌರವಿಸುತ್ತೇನೆ." ಎಂದು ಮಿಥಾಲಿ ಪೋಸ್ಟ್ ಮಾಡಿದ್ದರು.

Story first published: Tuesday, June 21, 2022, 9:54 [IST]
Other articles published on Jun 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X