ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಿಥಾಲಿ ರಾಜ್ ಬಿಸಿಸಿಐ ಆಡಳಿತದಲ್ಲಿರಬೇಕು, ಆಕೆ ಅಧಿಕಾರ ನಡೆಸುವುದನ್ನು ಇಷ್ಟಪಡುತ್ತೇವೆ; ಕೈಫ್

Mithali Raj Should Be In The Administration of BCCI Says Mohammad Kaif

ಭಾರತೀಯ ಮಹಿಳಾ ಕ್ರಿಕೆಟ್‌ನ ನಾಯಕಿಯಾಗಿದ್ದ ಮಿಥಾಲಿ ರಾಜ್, ಅಂತಾರಾಷ್ಟ್ರೀಯ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದರು. ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳುತ್ತಿರುವುದಾಗಿ ಮಿಥಾಲಿ ರಾಜ್ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಪ್ರಕಟಿಸಿದರು.

ಈ ಮೂಲಕ ಸುದೀರ್ಘ 23 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಮಿಥಾಲಿ ರಾಜ್ ಪೂರ್ಣ ವಿರಾಮ ನೀಡಿದರು. ಮಿಥಾಲಿ ರಾಜ್ ತಮ್ಮ 16ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದಲ್ಲಿಯೇ ಶತಕ ಸಿಡಿಸಿ ಮಿಂಚಿದ್ದ ಮಿಥಾಲಿ ರಾಜ್, ಬಳಿಕ ಭಾರತ ತಂಡದ ಭಾಗವಾಗಿಬಿಟ್ಟರು. ಮಹಿಳಾ ಕ್ರಿಕೆಟ್‌ನ ಅದೆಷ್ಟೋ ದಾಖಲೆಗಳನ್ನು ಮಿಥಾಲಿ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಮಹಿಳಾ ಆಟಗಾರ್ತಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

ಇನ್ನು ಮಿಥಾಲಿ ರಾಜ್ ವಿದಾಯದ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ಅಧಿಕಾರದ ಸ್ಥಾನದಲ್ಲಿ ಮಿಥಾಲಿ ರಾಜ್ ಅವರನ್ನು ನೋಡಲು ನಾನು ಬಯಸುತ್ತೇನೆ ಎಂದು ಗುರುವಾರ ಹೇಳಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್‌ಗೆ ಟೆಂಪ್ಲೇಟ್ ನೀಡಿದ್ದಾರೆ

ಭಾರತೀಯ ಮಹಿಳಾ ಕ್ರಿಕೆಟ್‌ಗೆ ಟೆಂಪ್ಲೇಟ್ ನೀಡಿದ್ದಾರೆ

"ಮಿಥಾಲಿ ರಾಜ್ ಭಾರತೀಯ ಮಹಿಳಾ ಕ್ರಿಕೆಟ್‌ಗೆ ಟೆಂಪ್ಲೇಟ್ ಅನ್ನು ನೀಡಿದರು, ಅದನ್ನು ಸಾವಿರಾರು ಯುವತಿಯರು ಅನುಸರಿಸಿದ್ದಾರೆ. ಅವರು ಅಧಿಕಾರದ ಸ್ಥಾನದಲ್ಲಿ ಇರಲು ಅರ್ಹರು ಮತ್ತು ಅದನ್ನು ನೋಡಲು ನಾವು ಇಷ್ಟಪಡುತ್ತೇವೆ," ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ತನ್ನ ಕ್ರಿಕೆಟ್ ವೃತ್ತಿಜೀವನದ ಅವಧಿಯಲ್ಲಿ ಮಿಥಾಲಿ ರಾಜ್ ಆರು ವಿಶ್ವಕಪ್‌ಗಳಲ್ಲಿ ಕಾಣಿಸಿಕೊಂಡ ಮೂರನೇ ಕ್ರಿಕೆಟಿಗ ಮತ್ತು ಮೊದಲ ಮಹಿಳಾ ಆಟಗಾತಿಯಾಗಿದ್ದಾಳೆ. ಭಾರತೀಯ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಪಾಕಿಸ್ತಾನದ ಶ್ರೇಷ್ಠ ಜಾವೇದ್ ಮಿಯಾಂದಾದ್ ಅವರ ಪಟ್ಟಿಯನ್ನು ಸೇರಿಕೊಂಡರು.

2015ರಲ್ಲಿ ಪದ್ಮಶ್ರೀ ಗೌರವ, 2021 ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ

2015ರಲ್ಲಿ ಪದ್ಮಶ್ರೀ ಗೌರವ, 2021 ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ

ಮಿಥಾಲಿ ರಾಜ್ ಅವರಿಗೆ ಅರ್ಜುನ ಪ್ರಶಸ್ತಿ (2003), ಪದ್ಮಶ್ರೀ (2015) ಮತ್ತು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ (2021) ನೀಡಿ ಗೌರವಿಸಲಾಗಿದೆ.

ಮಿಥಾಲಿ ರಾಜ್ ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದರು (7805) ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಏಕೈಕ ಭಾರತೀಯ ಮಹಿಳೆ. ಇಂಗ್ಲೆಂಡಿನ ಶಾರ್ಲೆಟ್ ಎಡ್ವರ್ಡ್ಸ್ ನಂತರ ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಎರಡನೇ ಆಟಗಾರ್ತಿ ಮಿಥಾಲಿ ರಾಜ್.

ಮಿಥಾಲಿ ರಾಜ್ 7 ಶತಕ ಮತ್ತು 64 ಅರ್ಧಶತಕ

ಮಿಥಾಲಿ ರಾಜ್ 7 ಶತಕ ಮತ್ತು 64 ಅರ್ಧಶತಕ

ಮೂಲತಃ ರಾಜಸ್ಥಾನದ ಜೋದ್‌ಪುರದ ಈ ದಂತಕತೆ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ದಾಖಲೆಯನ್ನು ನಿರ್ಮಿಸಿದ್ದಾರೆ. ಒಟ್ಟು 211 ಏಕದಿನ ಇನ್ನಿಂಗ್ಸ್ ಆಡಿರುವ ಮಿಥಾಲಿ ರಾಜ್ 7 ಶತಕ ಮತ್ತು 64 ಅರ್ಧಶತಕಗಳ ನೆರವಿನಿಂದ ಒಟ್ಟು 7805 ರನ್ ಕಲೆಹಾಕಿದ್ದಾರೆ. ನಾಯಕಿಯಾಗಿ ಟೀಮ್ ಇಂಡಿಯಾವನ್ನು ಅತಿಹೆಚ್ಚು ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿರುವ ಮಿಥಾಲಿ ರಾಜ್ 155 ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿದ್ದು 89 ಪಂದ್ಯಗಳಲ್ಲಿ ಜಯ, 63 ಪಂದ್ಯಗಳಗಲ್ಲಿ ಸೋಲು ಕಂಡಿದ್ದಾರೆ ಹಾಗೂ ಉಳಿದ ಮೂರು ಪಂದ್ಯಗಳು ಫಲಿತಾಂಶವಿಲ್ಲದೇ ಅಂತ್ಯಗೊಂಡಿವೆ.

ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ ಸಾಧನೆ

ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ ಸಾಧನೆ

2013: ಈ ವರ್ಷ ನಡೆದ ಮಹಿಳಾ ವಿಶ್ವಕಪ್‌ನ ಸಂದರ್ಭದಲ್ಲಿ ಮಿಥಾಲಿ ರಾಜ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವಿಶ್ವದ ನಂಬರ್ 1 ಶ್ರೇಯಾಂಕದ ಆಟಗಾರ್ತಿ ಎನಿಸಿಕೊಂಡರು.

2015: ಭಾರತ ಸರ್ಕಾರ 2015ರಲ್ಲಿ ಭಾರತೀಯ ಕ್ರಿಕೆಟ್‌ಗೆ ನೀಡಿದ ಸೇವೆಗಾಗಿ ಮಿಥಾಲಿ ರಾಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.

2017: ಮಹಿಳಾ ಏಕದಿನ ಇತಿಹಾಸದಲ್ಲಿ 6000 ರನ್‌ಗಳ ಮೈಲಿಗಲ್ಲು ದಾಟಿದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿದರು ಮಿಥಾಲಿ ರಾಜ್.

Kiccha Sudeep ಗೆ ಜೋಸ್ ಬಟ್ಲರ್ ಬ್ಯಾಟ್ ಕೊಟ್ಟಿದ್ಯಾಕೆ??? ಇದಕ್ಕೆ ಸುದೀಪ್ ಏನಂದ್ರು | OneIndia Kannada
2017ರಲ್ಲಿ ವಿಶ್ವಕಪ್‌ನ ಫೈನಲ್‌ಗೆ ತಲುಪಿಸಿದರು

2017ರಲ್ಲಿ ವಿಶ್ವಕಪ್‌ನ ಫೈನಲ್‌ಗೆ ತಲುಪಿಸಿದರು

2017: ಮಿಥಾಲಿ ರಾಜ್ ಭಾರತ ತಂಡದ ನಾಯಕಿಯಾಗಿ ಎರಡನೇ ಬಾರಿಗೆ 2017ರಲ್ಲಿ ವಿಶ್ವಕಪ್‌ನ ಫೈನಲ್‌ಗೆ ತಲುಪಿಸಿದರು. ಈ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 9 ರನ್‌ಗಳ ಅಂತರದಿಂದ ಸೋಲು ಅನುಭವಿಸಿತ್ತು. 2017ರಲ್ಲಿ ಐಸಿಸಿ ಪ್ರಕಟಿಸಿದ ಮಹಿಳಾ ತಂಡದಲ್ಲಿಯೂ ಸ್ಥಾನವನ್ನು ಪಡೆದುಕೊಂಡರು.

2019: ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ 20 ವರ್ಷಗಳನ್ನು ಪೂರೈಸಿದ ಪ್ರಥಮ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ದಾಖಲೆಯನ್ನು ಬರೆದರು.

2022: 22 ವರ್ಷ 274 ದಿನಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಮಿಥಾಲಿ ರಾಜ್ 2022ರ ಜೂನ್ 8ರಂದು ನಿವೃತ್ತಿ ಘೋಷಣೆ ಮಾಡಿದ್ದಾರೆ.

Story first published: Friday, June 10, 2022, 9:46 [IST]
Other articles published on Jun 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X