ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಐಪಿಎಲ್ ಆರಂಭಕ್ಕೆ ಇನ್ನು ಕಾಯಬಾರದು: ಮಿಥಾಲಿ ರಾಜ್

Mithali Raj Wants Women’s Ipl Next Year

ಭಾರತ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಮಹಿಳಾ ಐಪಿಎಲ್‌ನ ಬೇಡಿಕೆಯನ್ನು ಬಿಸಿಸಿಐನ ಮುಂದಿಟ್ಟಿದ್ದಾರೆ. ಮುಂದಿನ ವರ್ಷವೇ ಮಹಿಳಾ ಐಪಿಎಲ್‌ಅನ್ನು ಬಿಸಿಸಿಐ ಆರಂಭ ಮಾಡಬೇಕು ಎಂದು ಮಿಥಾಲಿ ರಾಜ್ ಹೇಳಿದ್ದಾರೆ.

ಮುಂದಿನ ವರ್ಷದಿಂದ ಬಿಸಿಸಿಐ ಮಹಿಳಾ ಐಪಿಎಲ್‌ಅನ್ನು ಆರಂಭ ಮಾಡಲೇಬೇಕು ಎಂದು ನನಗೆ ವೈಯಕ್ತಿಕವಾಗಿ ಅನಿಸುತ್ತಿದೆ ಎಂದು ಮಿಥಾಲಿ ರಾಜ್ ಹೇಳಿದ್ದಾರೆ. ಮೊದಲಿಗೆ ಸಣ್ಣಮಟ್ಟದಲ್ಲಿ ಆರಂಭವಾದರೂ ಪರವಾಗಿಲ್ಲ. ಜೊತೆಗೆ ಆಟದ ನಿಯಮದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು ಮಹಿಳಾ ಐಪಿಎಲ್ ಆರಂಭ ಮಾಡಬೇಕು ಎಂದು ಮಿಥಾಲಿ ರಾಜ್ ಬೇಡಿಕೆಯನ್ನು ಇಟ್ಟಿದ್ದಾರೆ.

ಕೊಹ್ಲಿಯ ನಂತರ ನಾಯಕತ್ವ ರೋಹಿತ್‌ಗೆ ಅಲ್ಲ, ಕನ್ನಡಿಗನಿಗಿದೆ ಭಾರೀ ಪೈಪೋಟಿ!ಕೊಹ್ಲಿಯ ನಂತರ ನಾಯಕತ್ವ ರೋಹಿತ್‌ಗೆ ಅಲ್ಲ, ಕನ್ನಡಿಗನಿಗಿದೆ ಭಾರೀ ಪೈಪೋಟಿ!

ಕಳೆದ ಐಪಿಎಲ್‌ನಲ್ಲಿ ಮೂರು ಮಹಿಳಾ ಕ್ರಿಕೆಟ್ ತಂಡಗಳನ್ನು ರಚಿಸಿ ಪ್ರದರ್ಶನ ಪಂದ್ಯಗಳನ್ನು ಏರ್ಪಡಿಸಲಾಗಿತ್ತು. ಆದರೆ ಪೂರ್ಣ ಪ್ರಮಾನದ ಐಪಿಎಲ್‌ಅನ್ನು ಮುಂದುನ ವರ್ಷವೇ ಆರಂಭಗೊಳಿಸಬೇಕು ಎಂದು ಮಿಥಾಲಿ ಬೇಡಿಕೆಯನ್ನು ಇಟ್ಟಿದ್ದಾರೆ.

ಸದ್ಯ ಭಾರತದಲ್ಲಿ ಮಹಿಳಾ ಕ್ರಿಕೆಟಿಗರ ಕೊರತೆಯಿದೆ. ಆ ಕೊರತೆಯನ್ನು ವಿದೇಶಿ ಆಟಗಾರ್ತಿಯರನ್ನು ಸೇರ್ಪಡೆಗೊಳಿಸುವ ಮೂಲಕ ಸರಿಪಡಿಸಿಕೊಳ್ಳಬಹುದು ಎಂದಿದ್ದಾರೆ ಮಿಥಾಲಿ ರಾಜ್. ತಂಡವೊಂದರಲ್ಲಿ ನಾಲ್ಕು ವಿದೇಶಿ ಆಟಗಾರರನ್ನು ಆಡಿಸುವ ಬದಲಾಗಿ ಐದರಿಮದ ಆರು ವಿದೇಶಿ ಆಟಗಾರ್ತಿಯರಿಗೆ ಅವಕಾಶ ಮಾಡಿಕೊಡುವಂತೆ ಮಿಥಾಲಿ ಸಲಹೆ ನೀಡಿದ್ದಾರೆ.

ಈ ಬಾರಿ 7 ಪಂದ್ಯಗಳ ಮಹಿಳಾ ಟಿ20 ಚಾಲೆಂಜರ್‌ ಟೂರ್ನಿಯನ್ನು ಜೈಪುರದಲ್ಲಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಟೂರ್ನಿಯೂ ರದ್ದಾಗುವ ಸಾಧ್ಯತೆ ಇದೆ.

Story first published: Thursday, March 26, 2020, 15:47 [IST]
Other articles published on Mar 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X