ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಿರಿಯ ಮಹಿಳೆಯರ ಟಿ20 ಲೀಗ್: 9 ರನ್ನಿಗೆ ಇಡೀ ತಂಡವೇ ಆಲ್ ಔಟ್!

Mizoram get all out for nine runs in Senior Women T20 League

ಚೆನ್ನೈ, ಫೆಬ್ರವರಿ 22: 9 ರನ್ನಿಗೆ ಇಡೀ ಕ್ರಿಕೆಟ್ ತಂಡವೇ ಔಟಾಗಿರುವ ಅಪರೂಪದ ಪಂದ್ಯಕ್ಕೆ ತಮಿಳುನಾಡಿನ ಪಾಲ್ಮಿರಾ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಿಯು. ಗುರುವಾರ (ಫೆಬ್ರವರಿ 21) ನಡೆದ ಹಿರಿಯ ಮಹಿಳೆಯರ ಟಿ20 ಲೀಗ್ ಪಂದ್ಯದಲ್ಲಿ ಮಿಝೋರಾ ಮಹಿಳಾ ತಂಡ 9 ರನ್ನಿಗೆ ಆಲ್ ಔಟ್ ಆಗುವ ಮೂಲಕ ಆಘಾತ ಅನುಭವಿಸಿತು.

2019ರ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಆಡದಿರಲು ಭಾರತ ಸಿದ್ಧ?!2019ರ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಆಡದಿರಲು ಭಾರತ ಸಿದ್ಧ?!

ಹಿರಿಯ ಮಹಿಳೆಯರ ಟಿ20 ಪಂದ್ಯಕ್ಕಾಗಿ ಮಿಝೋರಾಮ್ ಮತ್ತು ಮಧ್ಯಪ್ರದೇಶ ತಂಡಗಳು ಮೈದಾನಕ್ಕಿಳಿದಿದ್ದವು. ಈ ವೇಳೆ ಇನ್ನಿಂಗ್ಸ್ ಆರಂಭಿಸಿದ ಮಿಝೋರಾಮ್ ತಂಡ ಕೇವಲ 10 ರನ್ನಿಗೆ ಸಂಪೂರ್ಣ ವಿಕೆಟ್ ಒಪ್ಪಿಸಿತು. 10 ರನ್ ಗುರಿ ಬೆನ್ನತ್ತಿದ ಮಧ್ಯಪ್ರದೇಶ ತಂಡ ನಿರಾಯಾಸವಾಗಿ ಪಂದ್ಯ ಗೆದ್ದುಕೊಂಡಿತು.

ಬ್ಯಾಟಿಂಗ್ ಆರಂಭಿಸಿದ ಮಿಝೋರಾಮ್‌ನ 9 ವಿಕೆಟ್‌ಗಳು ತಲಾ 0 ರನ್‌ನೊಂದಿಗೆ ಮುರಿದುಬಿದ್ದವು. ಮಿಝೋರಾಮ್ 13.5 ಓವರ್‌ಗೆ ಇನ್ನಿಂಗ್ಸ್‌ ಮುಗಿಸಿತು. ಇನ್ನೂ ಗಮ್ಮತ್ತಿನ ವಿಷಯವೆಂದರೆ ಮಿಝೋರಾಮ್ ತಂಡ ಮಧ್ಯಪ್ರದೇಶಕ್ಕೆ ನೀಡಿದ 10 ರನ್ ಗುರಿಯೂ ಅದು ಮಿಝೋರಾಮ್ ಆಟಗರ್ತಿಯರ ಶ್ರಮದ ಫಲವಲ್ಲ, ಬದಲಿಗೆ ಆ 10ರಲ್ಲಿ ಅರ್ಧದಷ್ಟು ರನ್ ಮಧ್ಯಪ್ರದೇಶ ತಂಡ ಬೌಲರ್‌ಗಳು ವೈಡ್ ಮೂಲಕ ನೀಡಿದ್ದು!

ಭಾರತ ಪರ ಟಿ20 ಅತ್ಯಧಿಕ ರನ್ ದಾಖಲೆ ಬರೆದ ಶ್ರೇಯಸ್ ಐಯ್ಯರ್!ಭಾರತ ಪರ ಟಿ20 ಅತ್ಯಧಿಕ ರನ್ ದಾಖಲೆ ಬರೆದ ಶ್ರೇಯಸ್ ಐಯ್ಯರ್!

ಪಂದ್ಯವು ಮಧ್ಯಪ್ರದೇಶದ ಬೌಲರ್ ತರಂಗ್ ಝಾ ಅವರ ಪಾಲಿಗೆ ಅವಿಸ್ಮರಣೀಯವೆನಿಸಿತು. ಕಾರಣ, ಝಾ ಅವರು ಎದುರಾಳಿಯ 4 ವಿಕೆಟ್ ಗಳನ್ನು ಪಡೆದರು. ಅಲ್ಲದೆ, ಎಸೆದ ನಾಲ್ಕು ಓವರ್‌ಗಳಲ್ಲಿ 23 ಎಸೆತಗಳು ಡಾಟ್ ಅನ್ನಿಸಿಕೊಂಡಿತು. ತರಂಗ್ ಅವರ ಮಾರಕ ಬೌಲಿಂಗ್‌ನಿಂದಾಗಿಯೇ ಮಿಝೋರಾಮ್ ತಂಡ 5 ಓವರ್‌ ವೇಳೆಗೆ 5 ವಿಕೆಟ್ ಕಳೆದು ಕೇವಲ 2 ರನ್ ಗಳಿಸಿತ್ತು!.

Story first published: Friday, February 22, 2019, 16:23 [IST]
Other articles published on Feb 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X