ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊಹಾಲಿಯಲ್ಲಿ ಐಪಿಎಲ್ ಪಂದ್ಯಗಳು ನಡೆಯದ್ದಕ್ಕೆ ಕಾರಣ ಬಹಿರಂಗ

Mohali to not host IPL matches owing to the ongoing Farmers protest in Punjab

ಪಂಜಾಬ್: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಯಾವುದೇ ಪಂದ್ಯಗಳು ಪಂಜಾಬ್‌ನ ಮೊಹಾಲಿ ಸ್ಟೇಡಿಯಂನಲ್ಲಿ ನಡೆಯುತ್ತಿಲ್ಲ. ಪಂಜಾಬ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಈ ಬಾರಿ ಮೊಹಾಲಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿಲ್ಲ ಎಂದು ತಿಳಿದು ಬಂದಿದೆ.

ಐಪಿಎಲ್ 2021: ಈ ಬಾರಿ ಮುಂಬೈನಲ್ಲಿ ಐಪಿಎಲ್ ಪಂದ್ಯಗಳಿಲ್ಲ?ಐಪಿಎಲ್ 2021: ಈ ಬಾರಿ ಮುಂಬೈನಲ್ಲಿ ಐಪಿಎಲ್ ಪಂದ್ಯಗಳಿಲ್ಲ?

ಆರಂಭದಲ್ಲಿ 2021ರ ಐಪಿಎಲ್‌ನ ಎಲ್ಲಾ ಪಂದ್ಯಗಳನ್ನು ಮಹಾರಾಷ್ಟ್ರ ಮತ್ತು ಪೂಣೆ ತಾಣಗಳಲ್ಲಿ ನಡೆಸುವುದಾಗಿ ಬಿಸಿಸಿಐ ಯೋಚಿಸಿತ್ತು ಎಂದು ಹೇಳಲಾಗಿತ್ತು. ಮಹಾರಾಷ್ಟ್ರದ ವಾಂಖೆಡೆ, ಬ್ರಬೋರ್ನ್, ಡಿವೈ ಪಾಟಿಲ್ ಮತ್ತು ರಿಲಯನ್ಸ್ ಸ್ಟೇಡಿಯಂಗಳಲ್ಲಿ ಲೀಗ್ ಪಂದ್ಯಗಳು ನಡೆಸಲು ಮತ್ತು ಅಹ್ಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ಲೇಆಫ್ ಪಂದ್ಯಗಳನ್ನು ನಡೆಸಲು ಯೋಚಿಸಲಾಗಿತ್ತು.

ಆದರೆ ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುಂಬೈ ತಾಣವನ್ನು ಶಾರ್ಟ್‌ಲಿಸ್ಟ್‌ನಿಂದ ಹೊರಗಿಡಲಾಗಿದೆ. ಸದ್ಯಕ್ಕೆ ಅಹ್ಮದಾಬಾದ್, ಬೆಂಗಳೂರು, ಹೈದರಾಬಾದ್, ದೆಹಲಿ, ಕೋಲ್ಕತ್ತಾ, ಚೆನ್ನೈ ತಾಣಗಳನ್ನು ಶಾರ್ಟ್ ಲಿಸ್ಟ್‌ನಲ್ಲಿ ಇಡಲಾಗಿದೆ.

ಗ್ಲೆನ್ ಮ್ಯಾಕ್ಸ್‌ವೆಲ್ ಸಿಕ್ಸ್‌ ಏಟಿನಿಂದ ಮುರಿದ ಕುರ್ಚಿ ಹರಾಜಿಗೆಗ್ಲೆನ್ ಮ್ಯಾಕ್ಸ್‌ವೆಲ್ ಸಿಕ್ಸ್‌ ಏಟಿನಿಂದ ಮುರಿದ ಕುರ್ಚಿ ಹರಾಜಿಗೆ

'ಮೊಹಾಲಿಯಲ್ಲಿ ಪಂದ್ಯ ಆಯೋಜಿಸಿ ಪ್ರತಿಭಟನಾ ನಿರತ ರೈತರು ಸ್ಟೇಡಿಯಂ ಕಡೆಗೆ ಬಂದು ಸಮಸ್ಯೆ ಸೃಷ್ಠಿಯಾಗೋದನ್ನು ನಾವು ಬಯಸುವುದಿಲ್ಲ. ಅದು ವಿಶ್ವದ ಎಲ್ಲಾ ಭಾಗಗಳಿಂದ ಮಾಧ್ಯಮಗಳನ್ನು ಆಕರ್ಷಿಸಲಿದೆ. ಮೊಹಾಲಿ ಸದ್ಯಕ್ಕೆ ತಾಣಗಳ ಸಾರ್ಟ್‌ ಲಿಸ್ಟ್‌ನಲ್ಲಿ ಇಲ್ಲ. ಪಂಜಾಬ್ ಹೊರತುಪಡಿಸಿ ಉಳಿದ ತಾಣಗಳಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ,' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

Story first published: Wednesday, March 3, 2021, 19:48 [IST]
Other articles published on Mar 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X