ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಆಸ್ಪತ್ರೆಗೆ ತೆರಳುವಾಗ ಉಸಿರೇ ಆಡಲು ಸಾಧ್ಯವಾಗುತ್ತಿರಲಿಲ್ಲ: ಮೊಹಮ್ಮದ್ ರಿಜ್ವಾನ್

Rizwan

ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಭರ್ಜರಿ ಆಟ ಪ್ರದರ್ಶಿಸಿದ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಎರಡು ದಿನಗಳ ಮುಂಚೆ ಐಸಿಯುನಲ್ಲಿ ಇದ್ದರೂ ಎಂಬುದು ಕ್ರಿಕೆಟ್ ಲೋಕವನ್ನೇ ಬೆಚ್ಚಿ ಬೀಳಿಸಿದ್ದಂತು ಸುಳ್ಳಲ್ಲ.

ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ (ನ. 12) ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಾಕ್‌ ವಿರುದ್ಧ ಆಸ್ಟ್ರೇಲಿಯಾ ರೋಚಕ ಗೆಲುವನ್ನ ಕಂಡಿತು. ಈ ಪಂದ್ಯದಲ್ಲಿ
ಟೂರ್ನಮೆಂಟ್‌ನಲ್ಲಿ ಒಂದೇ ಒಂದು ಸೋಲನ್ನ ಕಾಣದ ಪಾಕಿಸ್ತಾನ ಕಾಂಗರೂಗಳ ಎದುರು ಮುಗ್ಗರಿಸಿತ್ತು. ಆದ್ರೆ ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್‌ರ ಬ್ಯಾಟಿಂಗ್ ಯಾರಿಂದಲೂ ಮರೆಯಲು ಸಾಧ್ಯವಿಲ್ಲ.

ಪಾಕಿಸ್ತಾನ ನೀಡಿದ 177 ರನ್‌ಗಳನ್ನ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದ ಪರ ವಾರ್ನರ್, ಮಾರ್ಕಸ್ ಸ್ಟೋಯ್ನೀಸ್, ಮ್ಯಾಥ್ಯೂ ವೇಡ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಒಂದು ಓವರ್ ಇರುವಂತೆಯೇ ಗೆಲುವಿನ ಗೆರೆ ದಾಟಿ ಫೈನಲ್ ಪ್ರವೇಶಿಸಿತು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಪರ ಓಪನರ್‌ಗಳಾದ ಮೊಹಮ್ಮದ್ ರಿಜ್ವಾನ್ ಮತ್ತು ಕ್ಯಾಪ್ಟನ್ ಬಾಬರ್ ಅಜಮ್ ಭದ್ರ ಅಡಿಪಾಯ ಹಾಕಿಕೊಟ್ಟರು. ಬಾಬರ್ 34 ಎಸೆತಗಳಲ್ಲಿ 39 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರೆ, ಮೊಹಮ್ಮದ್ ರಿಜ್ವಾನ್ 52 ಎಸೆತಗಳಲ್ಲಿ 67 ರನ್‌ ದಾಖಲಿಸಿ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ರು.

ಡ್ರೆಸ್ಸಿಂಗ್ ರೂಂನಲ್ಲಿ ಆಸ್ಟ್ರೇಲಿಯಾದ ಸಂಭ್ರಮಾಚರಣೆ ಅಸಹ್ಯ ಹುಟ್ಟಿಸುವಂತಿತ್ತು: ಶೋಯೆಬ್ ಅಕ್ತರ್ಡ್ರೆಸ್ಸಿಂಗ್ ರೂಂನಲ್ಲಿ ಆಸ್ಟ್ರೇಲಿಯಾದ ಸಂಭ್ರಮಾಚರಣೆ ಅಸಹ್ಯ ಹುಟ್ಟಿಸುವಂತಿತ್ತು: ಶೋಯೆಬ್ ಅಕ್ತರ್

ಆದ್ರೆ ಈ ಪಂದ್ಯ ಮುಗಿದ ಬಳಿಕ ಆಶ್ಚರ್ಯಕರ ವಿಷಯ ಹೊರಬಂತು ಮೊಹಮ್ಮದ್ ರಿಜ್ವಾನ್ ಪಂದ್ಯ ಆರಂಭಕ್ಕೂ ಎರಡು ದಿನಗಳ ಹಿಂದೆ ಶ್ವಾಸಕೋಶ ಸೋಂಕಿಗಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ರು ಎಂದು ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಕ್ತರ್ ಬಹಿರಂಗಪಡಿಸಿದ್ರು. ಈತ ನಿಜವಾದ ಹೀರೋ ಎಂದೇ ಬಣ್ಣಿಸಿದ್ರು.

M Rizwan

ಇದೀಗ ಈ ಘಟನೆ ಕುರಿತು ಸ್ವತಃ ಮಾತನಾಡಿರುವ ಮೊಹಮ್ಮದ್ ರಿಜ್ವಾನ್ ಆರೋಗ್ಯದ ಕಾರಣದಿಂದ ತಾವು ಎದುರಿಸಿದ ತೊಂದರೆಗಳನ್ನು ಹೇಳಿಕೊಂಡ ಅವರು, ಇದೀಗ ಇಡೀ ವಿಷಯವನ್ನು ವಿವರವಾಗಿ ತೆರೆದಿಟ್ಟಿದ್ದಾರೆ. ಅವರು ತಂಡಕ್ಕಾಗಿ ಪ್ರದರ್ಶನ ನೀಡಲು ನಿರ್ಧರಿಸಿದರ ಪರಿಣಾಮ, ಅದು ಅವರ ಶೀಘ್ರ ಚೇತರಿಕೆಗೆ ನೆರವಾಯಿತು ಎಂದು ಅವರು ಸೂಚಿಸಿದರು.

''ನನಗೆ ಹುಷಾರಿರಲಿಲ್ಲ, ನಾನು ಆಸ್ಪತ್ರೆಗೆ ಹೋಗುತ್ತಿದ್ದೆ ಮತ್ತು ನನ್ನ ಕುಟುಂಬ ಹೋಟೆಲ್‌ನಲ್ಲಿತ್ತು. ನಾನು ಹೋಟೆಲ್‌ನಲ್ಲಿ ಇಸಿಜಿಗಾಗಿ ಕೆಳಗೆ ಹೋಗಿದ್ದಾಗ, ಆಸ್ಪತ್ರೆಗೆ ತೆರಳಬೇಕಾಯಿತು. ಆಗ ನಾವು ಆಸ್ಪತ್ರೆಗೆ ಹೋದಾಗ ನನಗೆ ಉಸಿರಾಡಲು ಸಾಧ್ಯವಾಗಲಿಲ್ಲ ಎಂದು ನಾನು ಅವರಿಗೆ ಹೇಳಿದೆ. ಮತ್ತು ನನ್ನ ಎರಡು ಟ್ಯೂಬ್‌ಗಳು ಸಹ ಸ್ಥಗಿತಗೊಂಡಿವೆ ಎಂದು ವೈದ್ಯರು ಹೇಳಿದರು. ಅವರು ನನಗೆ ಏನಾಯಿತು ಎಂದು ಪೂರ್ತಿ ಹೇಳುತ್ತಿರಲಿಲ್ಲ. ನಂತರ ನಾನು ನರ್ಸ್‌ಗೆ ಕೇಳಿದೆ ಮತ್ತು ನಾನು 20 ನಿಮಿಷ ತಡವಾಗಿದ್ದರೆ, ಅನಾಹುತವೇ ಆಗುತ್ತಿತ್ತು ಎಂದು ಅವರು ಹೇಳಿದರು.

"ನನಗೆ ವೈದ್ಯರ ಮಾತುಗಳು ಇನ್ನೂ ನೆನಪಿದೆ ಮತ್ತು ನಾನು ಪಾಕಿಸ್ತಾನಕ್ಕಾಗಿ ಸೆಮಿಫೈನಲ್‌ನಲ್ಲಿ ಆಡಬೇಕೆಂದು ಅವರು ಬಯಸುತ್ತಾರೆ ಎಂದು ಹೇಳಿದರು. ಆದರೆ ನಿನ್ನ ಸ್ಥಿತಿ ಚೆನ್ನಾಗಿಲ್ಲ ಅಂತ ಅವರು ಹೇಳಿದಾಗ ಪಂದ್ಯದ ನಂತರ ನನಗೆ ಏನಾದರೂ ಸಂಭವಿಸಿದರೆ, ನಾನು ನಿರಾಶೆಗೊಳ್ಳುವುದಿಲ್ಲ ಏಕೆಂದರೆ ಎಲ್ಲವೂ ಪಾಕಿಸ್ತಾನಕ್ಕಾಗಿ ಎಂದು ನಾನು ಅವರಿಗೆ ಹೇಳಿದೆ. ಇದು ಅವರಿಗೂ ಉತ್ತೇಜನ ನೀಡಿತು ಮತ್ತು ನಂತರ ಅವರು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯವಾಗುವ ಕೆಲಸಗಳನ್ನು ಮಾಡಿದರು "ಎಂದು ಮೊಹಮ್ಮದ್ ರಿಜ್ವಾನ್ ಮಾಧ್ಯಮ ಸಂವಾದದಲ್ಲಿ ಹೇಳಿದರು.

ಡಾ.ಸುಧಾಕರ್ ರಾಂಗ್ ಟ್ರೀಟ್ ಮೆಂಟ್ ನಿಂದ ಬಿಜೆಪಿಗೆ ಭಾರಿ ಮುಜುಗರ | Oneindia Kannada

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಇತ್ತೀಚೆಗಷ್ಟೇ ಅವರು ಕ್ಯಾಲೆಂಡರ್ ವರ್ಷದಲ್ಲಿ 1000 T20 ರನ್ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.

Story first published: Tuesday, November 16, 2021, 10:18 [IST]
Other articles published on Nov 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X