ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಿಸಿಬಿ ವಾಟ್ಸ್‌ಆ್ಯಪ್ ಗ್ರೂಪ್ ತೊರೆದ ಮೊಹಮ್ಮದ್ ಅಮೀರ್, ಹಸನ್ ಅಲಿ

Mohammad Amir, Hasan Ali leave PCB WhatsApp group

ಲಾಹೋರ್, ಮೇ 20: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಕ್ರಿಯೇಟ್ ಮಾಡಿದ್ದ ವಾಟ್ಸ್‌ ಆ್ಯಪ್ ಗ್ರೂಪನ್ನು ಪಾಕಿಸ್ತಾನ ಆಟಗಾರರಾದ ಮೊಹಮ್ಮದ್ ಅಮೀರ್, ಹಸನ್ ಅಲಿ ತೊರೆದಿದ್ದಾರೆ. 2020-21ರ ಆಟಗಾರರ ಕೇಂದ್ರೀಯ ಒಪ್ಪಂದದಿಂದ ಕೈಬಿಟ್ಟ ಬಳಿಕ ಇಬ್ಬರೂ ಆಟಗಾರರು ವಾಟ್ಸ್‌ ಆ್ಯಪ್ ಗ್ರೂಪ್‌ನಿಂದ ಹೊರ ಬಂದಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿನ ಮೈನಸ್‌ಗಳ ವಿವರಿಸಿದ ಮೊಹಮ್ಮದ್ ಕೈಫ್ವಿರಾಟ್ ಕೊಹ್ಲಿ ನಾಯಕತ್ವದಲ್ಲಿನ ಮೈನಸ್‌ಗಳ ವಿವರಿಸಿದ ಮೊಹಮ್ಮದ್ ಕೈಫ್

ಪಿಸಿಬಿಯು ಫಿಟ್ನಸ್‌ಗೆ ಸಂಬಂಧಿಸಿ ಮತ್ತು ಮಾಹಿತಿ ಹಂಚಿಕೊಳ್ಳಲು ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿತ್ತು. ಇತ್ತೀಚೆಗೆ ಪಾಕ್ ಪ್ರಕಟಿಸಿದ ಆಟಗಾರರ ಒಪ್ಪಂದ ಪಟ್ಟಿಯಲ್ಲಿ ಅಮೀರ್ ಮತ್ತು ಹಸನ್ ಹೆಸರುಗಳು ಇರಲಿಲ್ಲ. ಹೀಗಾಗಿ ಅಮೀರ್ ಮತ್ತು ಹಸನ್ ತಾವಾಗೇ ಗ್ರೂಪ್‌ ತೊರೆದಿದ್ದಾರೆ ಎಂದು ಕ್ರಿಕೆಟ್‌ಪಾಕಿಸ್ತಾನ್ ಡಾಟ್ ಕಾಮ್ ಡಾಟ್ ಪಿಕೆ ವರದಿ ಹೇಳಿದೆ.

ಕ್ರಿಕೆಟ್ ಪ್ರೇಮಿಗಳ ಹೃದಯಗೆದ್ದ ಟಾಪ್ 5 ಟಿವಿ ನಿರೂಪಕಿಯರು ಇವರು!ಕ್ರಿಕೆಟ್ ಪ್ರೇಮಿಗಳ ಹೃದಯಗೆದ್ದ ಟಾಪ್ 5 ಟಿವಿ ನಿರೂಪಕಿಯರು ಇವರು!

ಪಾಕ್ ಎಡಗೈ ವೇಗಿ ವಹಾಬ್ ರಿಯಾಝ್ ಕೂಡ ಆಟಗಾರರ ನೂತನ ಒಪ್ಪಂದದ ಪಟ್ಟಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ರಿಯಾಝ್ ಈಗಲೂ ವಾಟ್ಸ್‌ ಆ್ಯಪ್ ಗ್ರೂಪ್‌ನಲ್ಲಿದ್ದಾರೆ. ಕಳೆದ ತಿಂಗಳು ಪಿಸಿಬಿಯು 2020-21ರ ಸೀಸನ್‌ಗಾಗಿ 18 ಆಟಗಾರರನ್ನೊಳಗೊಂಡ ಸೆಂಟ್ರಲ್ ಕಾಂಟ್ರ್ಯಾಕ್ಸ್ ಲಿಸ್ಟ್ ಪ್ರಕಟಿಸಿತ್ತು.

ಏಕದಿನದಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳು!ಏಕದಿನದಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳು!

ಅಂದ್ಹಾಗೆ, ಕೇಂದ್ರೀಯ ಪಟ್ಟಿಯಲ್ಲಿ ತನ್ನ ಹೆಸರು ಕಾಣದಾದಾಗ ಅಸಮಾಧಾನ ತೋರಿ ಹಸನ್ ಅಲಿ ಟ್ವೀಟ್ ಮಾಡಿದ್ದರು. ಆದರೆ ಅದನ್ನು ಆ ಬಳಿಕ ಡಿಲೀಟ್ ಮಾಡಿದ್ದರು. 2019ರ ವಿಶ್ವಕಪ್‌ನಲ್ಲಿ, ಮ್ಯಾಂನ್ಚೆಸ್ಟರ್‌ನಲ್ಲಿ ನಡೆದಿದ್ದ ಭಾರತ vs ಪಾಕಿಸ್ತಾನ ಪಂದ್ಯದಲ್ಲಿ ಹಸನ್ ಕಡೇಯ ಬಾರಿ ಆಡಿದ್ದರು.

Story first published: Wednesday, May 20, 2020, 13:29 [IST]
Other articles published on May 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X