ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್ ಟಿ20ಗೂ ಮುನ್ನ ಅಜರುದ್ದೀನ್ ಸ್ಟ್ಯಾಂಡ್‌ ಲೋಕಾರ್ಪಣೆ

Mohammad Azharuddin stand to be inaugurated before 1st Ind-WI T20I

ಹೈದರಾಬಾದ್, ಡಿಸೆಂಬರ್ 6: ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾರತ vs ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯ ಆರಂಭಗೊಳ್ಳುವುದಕ್ಕೂ ಮುನ್ನ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೆಸರಿನ, ಸ್ಟೇಡಿಯಂ ಸ್ಟ್ಯಾಂಡ್‌ ಉದ್ಘಾಟನೆಗೊಳ್ಳಲಿದೆ.

'ರಣಹದ್ದು'ಗಳಿಂದ ಯುವ ಕ್ರಿಕೆಟಿಗರ ರಕ್ಷಿಸಬೇಕಿದೆ: ಪೊಲಾರ್ಡ್ ಹೇಳಿದ್ಯಾರಿಗೆ?!'ರಣಹದ್ದು'ಗಳಿಂದ ಯುವ ಕ್ರಿಕೆಟಿಗರ ರಕ್ಷಿಸಬೇಕಿದೆ: ಪೊಲಾರ್ಡ್ ಹೇಳಿದ್ಯಾರಿಗೆ?!

ಭಾರತ-ವಿಂಡೀಸ್ ಮೊದಲ ಟಿ20 ಪಂದ್ಯ ಡಿಸೆಂಬರ್ 6ರಂದು 7 pmಗೆ ಆರಂಭಗೊಳ್ಳಲಿದೆ. ಪಂದ್ಯಕ್ಕೂ ಮುನ್ನ ರಾಜೀವ್ ಗಾಂಧಿ ಸ್ಟೇಡಿಯಂನ ಉತ್ತರ ದಿಕ್ಕಿನಲ್ಲಿರುವ ಅಜರುದ್ದೀನ್ ಸ್ಟ್ಯಾಂಡ್‌ ಲೋಕಾರ್ಪಣೆಗೊಳ್ಳಲಿದೆ. ಸದ್ಯ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಸಿಎ) ಅಧ್ಯಕ್ಷರಾಗಿರುವ ಅಜರುದ್ದೀನ್ ಪಾಲಿಗೆ ಇದು ಸಂತಸದ ವಿಚಾರ.

ಆಟದ ವೇಳೆ ಮ್ಯಾಜಿಕ್, ಕರವಸ್ತ್ರವನ್ನು ಕೋಲಾಗಿಸಿದ ಕ್ರಿಕೆಟಿಗ: ವೀಡಿಯೋಆಟದ ವೇಳೆ ಮ್ಯಾಜಿಕ್, ಕರವಸ್ತ್ರವನ್ನು ಕೋಲಾಗಿಸಿದ ಕ್ರಿಕೆಟಿಗ: ವೀಡಿಯೋ

ಐಎಎನ್‌ಎಸ್‌ ಜೊತೆ ಮಾತನಾಡಿರುವ ಎಚ್‌ಸಿಎ ಅಧಿಕಾರಿಗಳು, 'ನಾರ್ತ್‌ನಲ್ಲಿರುವ ಮೊಹಮ್ಮದ್ ಅಜರುದ್ದೀನ್ ಸ್ಟ್ಯಾಂಡ್‌ ಉದ್ಘಾಟನೆ ಮೂಲಕ ಮೊದಲ ಪಂದ್ಯವನ್ನು ಶುರು ಮಾಡಲಾಗುತ್ತದೆ. ಈ ಸ್ಟ್ಯಾಂಡ್‌ ವಿವಿಎಸ್‌ ಲಕ್ಷ್ಮಣ್ ಪ್ಲೇಯರ್ ಪೆವಿಲಿಯನ್ ಮೇಲ್ಭಾಗದಲ್ಲಿ ಇದೆ. ಕ್ರಿಕೆಟ್‌ ದಂತಕತೆ ಸುನಿಲ್ ಗವಾಸ್ಕರ್ ಅವರು ಸ್ಟ್ಯಾಂಡ್‌ ಉದ್ಘಾಟಿಸಲಿದ್ದಾರೆ,' ಎಂದಿದ್ದಾರೆ.

ನಾಳೆಯಿಂದ ಕ್ರಿಕೆಟ್ ಲೋಕದಲ್ಲಿ ಮಹತ್ವದ ಬದಲಾವಣೆನಾಳೆಯಿಂದ ಕ್ರಿಕೆಟ್ ಲೋಕದಲ್ಲಿ ಮಹತ್ವದ ಬದಲಾವಣೆ

ಮೊಹಮ್ಮದ್ ಅಜರುದ್ದೀನ್, 147 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ 6215 ರನ್ ಬಾರಿಸಿದ್ದಾರೆ. ಇದರಲ್ಲಿ 22 ಶತಕಗಳು, 21 ಅರ್ಧ ಶತಕಗಳು ಸೇರಿವೆ. 308 ಏಕದಿನ ಇನ್ನಿಂಗ್ಸ್‌ಗಳಲ್ಲಿ 9378 ರನ್ ಬಾರಿಸಿದ್ದಾರೆ. ಇದರಲ್ಲಿ 7 ಶತಕ, 58 ಅರ್ಧ ಶತಕಗಳು ಸೇರಿವೆ. 2000ರಲ್ಲಿ ಅಜರ್ ಏಕದಿನಕ್ಕೆ ನಿವೃತ್ತಿ ಘೋಷಿಸಿದ್ದರು.

Story first published: Friday, December 6, 2019, 12:16 [IST]
Other articles published on Dec 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X