ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಿಸಿಬಿ ವರದಿಯಲ್ಲಿ ಕೊರೊನಾ ಪಾಸಿಟಿವ್: ತನ್ನದು ನೆಗೆಟಿವ್ ಎಂದು ಘೋಷಿಸಿಕೊಂಡ ಮೊಹಮ್ಮದ್ ಹಫೀಜ್

Mohammad Hafeez Claims Hes Negative For Covid-19 A Day After Pcb Announces Positive Result

ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಆಟಗಾರರ ಕೊರೊನಾ ವೈರಸ್ ಪರೀಕ್ಷೆಯನ್ನು ನಡೆಸಿದ ಬಳಿಕ ಒಟ್ಟು ಹತ್ತು ಆಟಗಾರರು ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು. ಇದು ಕ್ರಿಕೆಟ್ ಲೋಕದಲ್ಲಿ ಸಂಚಲವನ್ನು ಮೂಡಿಸಿತ್ತು. ಆದರೆ ಅದರಲ್ಲಿ ಪಾಸಿಟಿವ್ ಎಂದು ಬಂದಿದ್ದ ಪಾಕ್ ಕ್ರಿಕೆಟಿಗ ವೈಯಕ್ತಿಕವಾಗಿ ಪರೀಕ್ಷೆ ನಡೆಸಿದಾಗ ಕೊರನಾ ವೈರಸ್ ನೆಗೆಟಿವ್ ಬಂದಿರುವುದಾಗಿ ಘೋಷಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಮೊಹಮದ್ ಹಫೀಸ್ ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ತಿಳಿಸಿದ್ದು ಜೊತೆಗೆ ಪರೀಕ್ಷೆಯ ವರದಿಯನ್ನೂ ಕೂಡ ಈ ಟ್ವೀಟ್ ಜೊತೆಗೆ ಹಂಚಿಕೊಂಡಿದ್ದಾರೆ. ಪಿಸಿಬಿ ಪರೀಕ್ಷೆ ನಡೆಸಿದ ವರದಿಯ ಬಳಿಕ ಎರಡೇ ಅಭಿಪ್ರಾಯ ಪಡೆದುಕೊಳ್ಳಲು ಮುಂದಾಗಿ ಪರೀಕ್ಷಿಸಿದಾಗ ಪಾಸಿಟಿವ್ ವರದಿ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಪಾಕ್ ಕ್ರಿಕೆಟ್‌ ತಂಡಕ್ಕೆ ಗಾಯದ ಮೇಲೆ ಬರೆ, ಇನ್ನೂ 7 ಆಟಗಾರರಿಗೆ ಕೊರೊನಾ!ಪಾಕ್ ಕ್ರಿಕೆಟ್‌ ತಂಡಕ್ಕೆ ಗಾಯದ ಮೇಲೆ ಬರೆ, ಇನ್ನೂ 7 ಆಟಗಾರರಿಗೆ ಕೊರೊನಾ!

ರಿಪೋರ್ಟ್ ಸಹಿತ ಟ್ವೀಟ್

"ನಿನ್ನೆ ಪಿಸಿಬಿ ಪರೀಕ್ಷಾ ವರದಿ ಪಾಸಿಟಿವ್ ಬಂದ ನಂತರ 2 ನೇ ಅಭಿಪ್ರಾಯ ಮತ್ತು ತೃಪ್ತಿಗಾಗಿ ನಾನು ವೈಯಕ್ತಿಕವಾಗಿ ನನ್ನ ಕುಟುಂಬದೊಂದಿಗೆ ಮತ್ತೆ ಪರೀಕ್ಷಿಸಲು ಹೋಗಿದ್ದೆ.ಇಲ್ಲಿ ನಾನು ಮತ್ತು ನನ್ನ ಕುಟುಂಬದ ಎಲ್ಲಾ ಸದಸ್ಯರ ವರದಿಯೂ ನೆಗೆಟಿವ್ ಬಂದಿದೆ. ಅಲ್ಲಾಹನು ನಮ್ಮೆಲ್ಲರನ್ನೂ ಸುರಕ್ಷಿತವಾಗಿರಿಸಲಿ" ಎಂದು ಹಫೀಜ್ ಟ್ವೀಟ್ ಮಾಡಿದ್ದಾರೆ.

ಒಟ್ಟು ಹತ್ತು ಆಟಗಾರರ ವರದಿ ಪಾಸಿಟಿವ್

ಒಟ್ಟು ಹತ್ತು ಆಟಗಾರರ ವರದಿ ಪಾಸಿಟಿವ್

ಮೊದಲಿಗೆ ಮೂವರು ಆಟಗಾರರ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂದ ಬಳಿಕ ನಡೆಸಿದ ಉಳಿದ ಆಟಗಾರರ ಪೈಕಿ 7 ಆಟಗಾರರ ವರದಿ ಪಾಸಿಟಿವ್ ಬಂದಿತ್ತು. ಇದರಲ್ಲಿ ಪಾಕಿಸ್ತಾನದ ಅನುಭವಿ ಆಟಗಾರ ಮೊಹಮದ್ ಹಫೀಸ್, ಖಾಶಿಫ್ ಭಟ್ಟಿ, ಮೊಹಮ್ಮದ್ ಹಸ್ನೈನ್, ಫಾಕರ್ ಝಮಾನ್, ಮೊಹಮ್ಮದ್ ರಿಜ್ವಾನ್ ವಾಹಬ್ ರಿಯಾಜ್ ಹಾಗೂ ಇಮ್ರಾನ್ ಖಾನ್ ಹೆಸರು ಸೇರಿತ್ತು.

ಅಚ್ಚರಿ ಮತ್ತು ಅನುಮಾನಕ್ಕೆ ಕಾರಣವಾದ ವರದಿ

ಅಚ್ಚರಿ ಮತ್ತು ಅನುಮಾನಕ್ಕೆ ಕಾರಣವಾದ ವರದಿ

ಕರಾಚಿ, ಲಾಹೋರ್ ಮತ್ತು ಪೇಶಾವರದಲ್ಲಿ ಸೋಮವಾರ ಒಟ್ಟು 35 ಕ್ರಿಕೆಟಿಗರ ಕೊರೊನಾ ವೈರಸ್ ಪರೀಕ್ಷೆಯನ್ನು ನಡೆಸಿತ್ತು. ಆದರೆ ಮೊಹಮದ್ ಹಫೀಸ್ ತನ್ನ ಎರಡನೇ ಕೊರೊನಾ ವೈರಸ್ ಪರೀಕ್ಷೆಯ ವರದಿಯನ್ನು ಬಹಿರಂಗಗೊಳಿಸಿದ್ದು ಸಾಕಷ್ಟು ಅಚ್ಚರಿ ಮತ್ತು ಅನುಮಾನಕ್ಕೆ ಕಾರಣವಾಗಿದೆ.

29 ಆಟಗಾರರ ತಂಡ ಪ್ರಕಟ

29 ಆಟಗಾರರ ತಂಡ ಪ್ರಕಟ

ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಒಟ್ಟು 29 ಆಟಗಾರರ ತಂಡವನ್ನು ಪ್ರಕಟಿಸಿತ್ತು. ಆಟಗಾರರು ಅನಾರೋಗ್ಯಕ್ಕೆ ತುತ್ತಾದರೆ ಅಥವಾ ಕೊರೊನಾ ವೈರಸ್‌ಗೆ ತುತ್ತಾದಂತಾ ಸಂದರ್ಭದಲ್ಲಿ ಬಳಸಿಕೊಳ್ಳಲು ದೊಡ್ಡ ತಂಡವನ್ನು ಪ್ರಕಟಗೊಳಿಸಿತ್ತು. ಅದರಲ್ಲಿ 10 ಆಟಗಾರರ ವರದಿ ಆರಂಭದಲ್ಲೇ ಪಾಸಿಟಿವ್ ಎಂದು ಬಂದಿದೆ.

Story first published: Wednesday, June 24, 2020, 18:54 [IST]
Other articles published on Jun 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X