ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅದ್ಭುತ ಕ್ಯಾಚ್‌ ಮೂಲಕ ಗತಕಾಲ ನೆನಪಿಸಿದ ಮೊಹಮ್ಮದ್ ಕೈಫ್: ವೀಡಿಯೋ

Mohammad Kaif Takes Stunning Diving Catch In Road Safety World Series
Mohammad Kaif Takes Stunning Diving Catch In Road Safety World Series

ಮುಂಬೈ, ಮಾರ್ಚ್ 11: ಭಾರತದ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಕೈಫ್ ಗತಕಾಲದ ಕ್ರಿಕೆಟ್‌ ಕ್ಷಣಗಳನ್ನು ಮತ್ತೆ ಕಣ್ಣಮುಂದೆ ತಂದಿದ್ದಾರೆ. ರೋಡ್‌ ಸೇಫ್ಟಿ ವರ್ಲ್ಡ್ ಸೀರೀಸ್ 2020 ಟೂರ್ನಿಯಲ್ಲಿ ಇಂಡಿಯಾ ಲೆಜೆಂಡ್ಸ್‌ ಪರ ಮೈದಾನಕ್ಕಿಳಿದಿದ್ದ ಕೈಫ್, ಉತ್ತಮ ಬ್ಯಾಟಿಂಗ್ ಅದ್ಭುತ ಫೀಲ್ಡಿಂಗ್‌ಗಾಗಿ ಗಮನ ಸೆಳೆದರು.

ರಣಜಿ ಟ್ರೋಫಿ: ವಿಚಿತ್ರ ಕ್ಷಣಕ್ಕೆ ಸಾಕ್ಷಿಯಾದ ಸೌರಾಷ್ಟ್ರ-ಬೆಂಗಾಲ್ ಫೈನಲ್ ಪಂದ್ಯ!ರಣಜಿ ಟ್ರೋಫಿ: ವಿಚಿತ್ರ ಕ್ಷಣಕ್ಕೆ ಸಾಕ್ಷಿಯಾದ ಸೌರಾಷ್ಟ್ರ-ಬೆಂಗಾಲ್ ಫೈನಲ್ ಪಂದ್ಯ!

ಮಂಗಳವಾರ (ಮಾರ್ಚ್ 10) ಮುಂಬೈಯ ಡಾ. ಡಿವೈ ಪಾಟಿಲ್ ಸ್ಟೇಡಿಯಂನಲ್ಲಿ ನಡೆದ ಇಂಡಿಯಾ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್ ನಡುವಿನ ಪಂದ್ಯದಲ್ಲಿ ಮೊಹಮ್ಮದ್ ಕೈಫ್, ಆಕರ್ಷಕ ಕ್ಯಾಚ್‌ ಮೂಲಕ ಲಂಕಾ ಬ್ಯಾಟ್ಸ್‌ಮನ್ ಚಮರ ಕಪುಗೆದೆರ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.

17.3ನೇ ಓವರ್‌ನಲ್ಲಿ ಝಹೀರ್ ಖಾನ್ ಎಸೆತಕ್ಕೆ ಚಮರ ಕಪುಗೆದೆರ ಬ್ಯಾಟ್‌ ತಾಗಿದ ಚೆಂಡು ಬೌಂಡರಿ ಗೆರೆ ದಾಟುವುದರಲ್ಲಿತ್ತು. ಅದ್ಭುತ ಫೀಲ್ಡಿಂಗ್‌ಗಾಗಿ ಭಾರತದ ಜಾಂಟಿರೋಡ್ಸ್ ಎಂದು ಕರೆಯಲ್ಪಡುತ್ತಿದ್ದ ಕೈಫ್, ಮಿಂಚಿನ ವೇಗದಲ್ಲಿ ಜಿಗಿದವರೆ ಚೆಂಡನ್ನು ಕ್ಯಾಚ್ ಮಾಡಿದರು. ಇದರಿಂದಾಗಿ ಚಮರ 23 ರನ್‌ಗೆ ನಿರ್ಗಮಿಸಬೇಕಾಯಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ಲೆಜೆಂಡ್ಸ್, 20 ಓವರ್‌ಗೆ 8 ವಿಕೆಟ್ ಕಳೆದು 138 ರನ್ ಮಾಡಿತ್ತು. ಗುರಿ ಬೆನ್ನತ್ತಿದ ಇಂಡಿಯಾ ಲೆಜೆಂಡ್ಸ್‌, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್‌ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತಾದರೂ ಮೊಹಮ್ಮದ್ ಕೈಫ್ 46, ಇರ್ಫಾನ್ ಪಠಾಣ್ 57 (31 ಎಸೆತ) ರನ್‌ನೊಂದಿಗೆ 18.4 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 139 ರನ್ ಮಾಡಿತು.

Story first published: Wednesday, March 11, 2020, 15:35 [IST]
Other articles published on Mar 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X