ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುವರಾಜ್ ಸಿಂಗ್ ವರ್ಕೌಟ್ ವೀಡಿಯೋಗೆ ತರ್ಲೆ ಕಾಮೆಂಟ್ ಮಾಡಿದ ಕೈಫ್

Mohammad Kaif Trolls Yuvraj Singhs Workout Video

ನವದೆಹಲಿ, ಜುಲೈ 9: ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ತಾನು ಫಿಟ್ನೆಸ್ ವರ್ಕೌಟ್ ಮಾಡಿದ್ದ ವೀಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೋಗೆ ಯುವಿಯ ಮಾಜಿ ಸಹ ಆಟಗಾರ ಮೊಹಮ್ಮದ್ ಕೈಫ್ ತರಲೆಯ ಕಾಮೆಂಟ್ ಮಾಡಿದ್ದಾರೆ.

ಇಂಗ್ಲೆಂಡ್ vs ವಿಂಡೀಸ್, Live: ಗೇಬ್ರಿಯಲ್, ಹೋಲ್ಡರ್ ದಾಳಿಗೆ ಇಂಗ್ಲೆಂಡ್ ತತ್ತರಇಂಗ್ಲೆಂಡ್ vs ವಿಂಡೀಸ್, Live: ಗೇಬ್ರಿಯಲ್, ಹೋಲ್ಡರ್ ದಾಳಿಗೆ ಇಂಗ್ಲೆಂಡ್ ತತ್ತರ

ವೀಡಿಯೋವನ್ನು ಶೇರ್ ಮಾಡುವಾಗ ಯುವಿ ಏನನ್ನೂ ಬರೆದುಕೊಂಡಿರಲಿಲ್ಲ. ಆದರೆ ವರ್ಕೌಟ್ ಮಾಡುವ ವೀಡಿಯೋ ಹಂಚಿಕೊಳ್ಳುವ ಹೆಚ್ಚಿನವರು ಮತ್ತೊಬ್ಬರಿಗೆ ಸವಾಲೆಸೆಯುವುದು ಇತ್ತೀಚೆಗೆ ಟ್ರೆಂಡ್ ಆಗಿತ್ತು. ಇದನ್ನೇ ತಮಾಷೆಯಾಗಿ ತೆಗೆದುಕೊಂಡಿರುವ ಕೈಫ್, ಯುವಿಯನ್ನು ಟ್ರೋಲ್ ಮಾಡಿದ್ದಾರೆ.

'ಈಗಿರುವವರಲ್ಲಿ ಈ 6 ಆಟಗಾರರನ್ನು ನನ್ನ ಟೆಸ್ಟ್ ತಂಡಕ್ಕೆ ಆರಿಸುತ್ತಿದ್ದೆ': ಗಂಗೂಲಿ'ಈಗಿರುವವರಲ್ಲಿ ಈ 6 ಆಟಗಾರರನ್ನು ನನ್ನ ಟೆಸ್ಟ್ ತಂಡಕ್ಕೆ ಆರಿಸುತ್ತಿದ್ದೆ': ಗಂಗೂಲಿ

ಯುವಿಯ ವೀಡಿಯೋಗೆ ಕೈಫ್, 'ಭಾಯ್, ಅಬ್ ತುಮ್ ಫಿಟ್‌ನೆಸ್ ಚಾಲೆಂಜ್ ಭೇಜೋ ಮೇರೇಲಿಯೆ' (ಸಹೋದರ, ಈಗ ನೀನು ನನಗೆ ಫಿಟ್ನೆಸ್ ಚಾಲೆಂಜ್ ಹಾಕು) ಎಂದು ಕಾಮೆಂಟ್ ಮಾಡಿದ್ದಾರೆ. ತಂಡದಲ್ಲಿದ್ದು ಜೊತೆಯಾಗಿ ಆಡುತ್ತಿದ್ದಾಗಲೂ ಯುವಿ ಮತ್ತು ಕೈಫ್ ಉತ್ತಮ ಬಾಂಧವ್ಯ ಹೊಂದಿದ್ದರು. ಆಗಲೂ ಇಬ್ಬರೂ ಒಬ್ಬರಿಗೊಬ್ಬರು ತಮಾಷೆ ಮಾಡಿಕೊಳ್ಳುತ್ತಿದ್ದರು.

ತೀರಾ ಇತ್ತೀಚೆಗೆ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತನ್ನ ಅಣ್ಣ ಕೃನಾಲ್ ಪಾಂಡ್ಯಗೆ ಇಂಥದ್ದೇ ವರ್ಕೌಟ್ ವೀಡಿಯೊ ಮೂಲಕ ಚಾಲೆಂಜ್ ಹಾಕಿದ್ದರು. ಅದೇ ಹಾರ್ದಿಕ್‌ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೊಂಚ ಕಷ್ಟದ ವರ್ಕೌಟ್ ವೀಡಿಯೊ ಮೂಲಕ ಸವಾಲೆಸಿದಿದ್ದರು. ಈ ಫಿಟ್ನೆಸ್ ಚಾಲೆಂಜ್‌ ಅನ್ನು ತಮಾಷೆಯಾಗಿ ತೆಗೆದುಕೊಂಡಿರುವ ಕೈಫ್, ಯುವಿಯ ಕಾಲೆಳೆದಿದ್ದಾರೆ.

Story first published: Thursday, July 9, 2020, 22:12 [IST]
Other articles published on Jul 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X