ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊಹಮ್ಮದ್ ರಿಜ್ವಾನ್ ಪಾಕಿಸ್ತಾನ ತಂಡದ ನಾಯಕನಂತೆ ವರ್ತಿಸಬಾರದು: ಶೋಯೆಬ್ ಅಖ್ತರ್

Mohammad Rizwan Not Act As Captain Behind Stumps: Shoaib Akhtar

ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ತಂಡದ ನಾಯಕನಂತೆ ವರ್ತಿಸಬಾರದು ಎಂದು ಪಾಕ್‌ನ ಮಾಜಿ ಬೌಲರ್ ಶೋಯೆಬ್ ಅಖ್ತರ್ ಟೀಕಿಸಿದ್ದಾರೆ.

ಅಕ್ಟೋಬರ್ 30ರಂದು ರಾವಲ್ಪಿಂಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 13 ತಿಂಗಳ ಅವಧಿಯ ನಂತರ ಪಾಕ್‌ ಕ್ರಿಕೆಟ್ ಆಡಿತು. ಈ ಪಂದ್ಯದಲ್ಲಿ ಬಾಬರ್ ಅಜಮ್ ನೇತೃತ್ವದ ತಂಡವು 26 ರನ್‌ಗಳಿಂದ ಗೆಲುವು ದಾಖಲಿಸಿದರು.

ಬ್ರೆಂಡನ್ ಟೇಯ್ಲರ್ ಶತಕ ವ್ಯರ್ಥ: ಪಾಕಿಸ್ತಾನದ ವಿರುದ್ಧ ಹೋರಾಡಿ ಶರಣಾದ ಜಿಂಬಾಬ್ವೆಬ್ರೆಂಡನ್ ಟೇಯ್ಲರ್ ಶತಕ ವ್ಯರ್ಥ: ಪಾಕಿಸ್ತಾನದ ವಿರುದ್ಧ ಹೋರಾಡಿ ಶರಣಾದ ಜಿಂಬಾಬ್ವೆ

ಆದರೆ, ಪಾಕಿಸ್ತಾನದ ಮಾಜಿ ವೇಗದ ಆಟಗಾರ ಶೋಯೆಬ್ ಅಖ್ತರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಅವರು ಸ್ಟಂಪ್‌ನ ಹಿಂದಿನಿಂದ ಬೌಲರ್‌ಗಳಿಗೆ ನಿರಂತರವಾಗಿ ಸಲಹೆ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ರಿಜ್ವಾನ್ ನಾಯಕನಾಗಿ ಕಾರ್ಯನಿರ್ವಹಿಸಲು ಮತ್ತು ಮೈದಾನದಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸಲು ಪ್ರಯತ್ನಿಸುತ್ತಿರುವ ರೀತಿಗೆ ತಾನು ನಿರಾಸೆಗೊಂಡಿದ್ದೇನೆ ಎಂದು ಶೋಯೆಬ್ ಅಭಿಪ್ರಾಯಪಟ್ಟರು.

ಪ್ರಸ್ತುತ ಸನ್ನಿವೇಶದಲ್ಲಿ ಈ ರೀತಿ ವರ್ತಿಸುವ ಬದಲು ರಿಜ್ವಾನ್ ಅವರು ತಂಡದ ನಾಯಕರಾಗುವ ಸಮಯಕ್ಕಾಗಿ ತಾಳ್ಮೆಯಿಂದ ಕಾಯಬೇಕು ಎಂದು ಮಾಜಿ ವೇಗಿ ಹೇಳಿದ್ದಾರೆ. ವಿಶೇಷವೆಂದರೆ, ಅಜರ್ ಅಲಿಯ ಬದಲಿಗೆ ಪ್ರಸ್ತುತ ಸೀಮಿತ ಓವರ್‌ಗಳ ನಾಯಕ ಬಾಬರ್ ಅಜಮ್ ಜೊತೆಗೆ ಪಾಕಿಸ್ತಾನದ ಟೆಸ್ಟ್ ನಾಯಕತ್ವದ ಪ್ರಮುಖ ಸ್ಪರ್ಧಿಗಳಲ್ಲಿ ರಿಜ್ವಾನ್ ಒಬ್ಬನೆಂದು ಪರಿಗಣಿಸಲಾಗುತ್ತಿದೆ.

"ರಿಜ್ವಾನ್ ಕಡಿಮೆ ಮಾತನಾಡಬೇಕು ಮತ್ತು ಸ್ಟಂಪ್‌ಗಳ ಹಿಂದೆ ನಾಯಕನಾಗಿ ವರ್ತಿಸಬಾರದು. ಮುಂದಿನ ದಿನಗಳಲ್ಲಿ ಅವರು ನಾಯಕರಾಗುತ್ತಾರೆ ಆದರೆ ಇದೀಗ ಅವರು ಬೌಲಿಂಗ್ ಮಾಡುವವರಿಗೆ ಎಲ್ಲಿ ಬೌಲಿಂಗ್ ಮಾಡಬೇಕೆಂಬುದರ ಬಗ್ಗೆ ಹೆಚ್ಚಿನ ಸೂಚನೆಗಳನ್ನು ನೀಡುವುದನ್ನು ನಿಲ್ಲಿಸಬೇಕಾಗಿದೆ. ಬ್ಯಾಟ್ಸ್‌ಮನ್ ಏನು ಮಾಡಲು ಪ್ರಯತ್ನಿಸುತ್ತಾನೆ ಎಂಬುದರ ಬಗ್ಗೆ ಅವನಿಗೆ ತಿಳಿಸಿ ಮತ್ತು ಉಳಿದದ್ದನ್ನು ಬೌಲರ್‌ಗೆ ಬಿಡಿ "ಎಂದು ಪಿಟಿವಿ ಸ್ಪೋರ್ಟ್ಸ್‌ನಲ್ಲಿ ಅಖ್ತರ್ ಹೇಳಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ ಎಂಟು ವಿಕೆಟ್ ನಷ್ಟಕ್ಕೆ 281ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟುವಲ್ಲಿ ವಿಫಲಗೊಂಡ ಜಿಂಬಾಬ್ವೆ 255ರನ್‌ಗಳಿಗೆ ಆಲೌಟ್ ಆಯ್ತು. ಇನ್ನು ಎರಡನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ಪಾಕಿಸ್ತಾನಕ್ಕೆ 207ರನ್‌ಗಳ ಗೆಲುವಿನ ಗುರಿ ನೀಡಿದೆ.

Story first published: Monday, November 2, 2020, 10:01 [IST]
Other articles published on Nov 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X