ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್‌ಗೆ 'ಐಸಿಸಿ ಟಿ ಟ್ವೆಂಟಿ ಕ್ರಿಕೆಟರ್ ಆಫ್ ದಿ ಇಯರ್' ಪ್ರಶಸ್ತಿ

Mohammad Rizwan selected as ICC Mens T20I cricketer of the year 2021

ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪ್ರತಿ ವರ್ಷವೂ ಸಹ ವಿವಿಧ ಕ್ರಿಕೆಟ್ ಮಾದರಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದಂತಹ ಓರ್ವ ಆಟಗಾರನನ್ನು ಆರಿಸಿ ಆತನಿಗೆ ವರ್ಷದ ಉತ್ತಮ ಆಟಗಾರ ಎಂಬ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಅದೇ ರೀತಿ ಇದೀಗ ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ 2021ನೇ ಸಾಲಿನ ಪ್ರಶಸ್ತಿಗಳನ್ನು ಕೂಡಾ ಪ್ರಕಟಿಸಿದ್ದು, ಆಟಗಾರರು ನೀಡಿರುವ ಉತ್ತಮ ಪ್ರದರ್ಶನದ ಆಧಾರದ ಮೇಲೆ ಅರ್ಹ ಕ್ರಿಕೆಟಿಗರನ್ನು ಆರಿಸಿದೆ.

ಭಾರತ ಟೆಸ್ಟ್ ತಂಡದ ನೂತನ ನಾಯಕ ಇವರೇ; ಘೋಷಣೆ ಯಾವಾಗ ಎಂಬುದೂ ಕೂಡ ಫಿಕ್ಸ್: ಬಿಸಿಸಿಐಭಾರತ ಟೆಸ್ಟ್ ತಂಡದ ನೂತನ ನಾಯಕ ಇವರೇ; ಘೋಷಣೆ ಯಾವಾಗ ಎಂಬುದೂ ಕೂಡ ಫಿಕ್ಸ್: ಬಿಸಿಸಿಐ

ಅದರಂತೆ 2021ನೇ ಸಾಲಿನ ಐಸಿಸಿ ಟಿ ಟ್ವೆಂಟಿ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪಾಕಿಸ್ತಾನದ ಬ್ಯಾಟ್ಸ್‌ಮನ್‌ ಮತ್ತು ವಿಕೆಟ್ ಕೀಪರ್ ಆದ ಮೊಹಮ್ಮದ್ ರಿಜ್ವಾನ್ ಅವರನ್ನು ಆಯ್ಕೆ ಮಾಡಿದೆ. ಹೌದು, ಪಾಕಿಸ್ತಾನದ ಪ್ರಮುಖ ಆಟಗಾರರಲ್ಲಿ ಓರ್ವನಾದ ಮೊಹಮ್ಮದ್ ರಿಜ್ವಾನ್ 2021ರ ಪುರುಷರ ವಿಭಾಗದ ಐಸಿಸಿ ಟಿ ಟ್ವೆಂಟಿ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕಳೆದ ವರ್ಷ ಚುಟುಕು ಕದನಗಳಲ್ಲಿ ವಿವಿಧ ತಂಡಗಳ ಹಲವಾರು ಕ್ರಿಕೆಟಿಗರು ಉತ್ತಮ ಪ್ರದರ್ಶನವನ್ನು ನೀಡಿದ್ದು, ಆ ಪ್ರದರ್ಶನಗಳ ಪೈಕಿ ಮೊಹಮ್ಮದ್ ರಿಜ್ವಾನ್ ನೀಡಿದ ಪ್ರದರ್ಶನ ಉತ್ತಮವಾದದ್ದು ಎಂದು ಐಸಿಸಿ ಆರಿಸಿದೆ. ಇನ್ನು ಕಳೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ವೇಳೆ ಅನಾರೋಗ್ಯಕ್ಕೊಳಗಾಗಿದ್ದ ಮೊಹಮ್ಮದ್ ರಿಜ್ವಾನ್ ಐಸಿಯುನಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು, ಮಾರನೇ ದಿನವೇ ಮೈದಾನದಲ್ಲಿ ಬ್ಯಾಟ್ ಹಿಡಿದು ಉತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಹಲವಾರು ಯುವ ಕ್ರಿಕೆಟಿಗರಿಗೆ ಮಾದರಿಯಾಗಿದ್ದರು.

ದ್ರಾವಿಡ್ ಕೇವಲ ಬಿಲ್ಡಪ್ ಕೋಚ್ ಎನಿಸಿಕೊಳ್ಳಬಾರದೆಂದರೆ ಈ ಕೆಲಸ ಮಾಡಲಿ ಎಂದು ಎಚ್ಚರಿಸಿದ ಮಾಜಿ ಕ್ರಿಕೆಟಿಗ!ದ್ರಾವಿಡ್ ಕೇವಲ ಬಿಲ್ಡಪ್ ಕೋಚ್ ಎನಿಸಿಕೊಳ್ಳಬಾರದೆಂದರೆ ಈ ಕೆಲಸ ಮಾಡಲಿ ಎಂದು ಎಚ್ಚರಿಸಿದ ಮಾಜಿ ಕ್ರಿಕೆಟಿಗ!

ಇನ್ನು ಮೊಹಮ್ಮದ್ ರಿಜ್ವಾನ್ ಕೇವಲ ಬ್ಯಾಟಿಂಗ್ ಮಾತ್ರವಲ್ಲದೇ ವಿಕೆಟ್ ಕೀಪಿಂಗ್ ವಿಭಾಗದಲ್ಲಿಯೂ ಕೂಡ ಕೊಡುಗೆಯನ್ನು ನೀಡಿದ್ದಾರೆ. ತಮ್ಮ ತಂಡ ಬೌಲಿಂಗ್ ಮಾಡುವ ವೇಳೆ ಸಂಪೂರ್ಣವಾಗಿ ಸ್ಟಂಪ್ ಹಿಂದೆ ನಿಂತು ತಮ್ಮನ್ನು ತಾವು ತೊಡಗಿಸಿಕೊಳ್ಳುವ ವಿಕೆಟ್ ಕೀಪರ್‌ ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದಾರೆ. 2021ರಲ್ಲಿ ಒಟ್ಟು 29 ಟಿ ಟ್ವೆಂಟಿ ಪಂದ್ಯಗಳನ್ನಾಡಿರುವ ಮೊಹಮ್ಮದ್ ರಿಜ್ವಾನ್ 134.89ರ ಸ್ಟ್ರೈಕ್ ರೇಟ್ ಜೊತೆಗೆ 1326 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೇ ವಿಕೆಟ್ ಕೀಪರ್ ಆಗಿ 24 ವಿಕೆಟ್‍ಗಳನ್ನೂ ಸಹ ಮೊಹಮ್ಮದ್ ರಿಜ್ವಾನ್ ಉರುಳಿಸಿದ್ದಾರೆ.

ಇನ್ನು ಕಳೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ವೇಳೆ ಅನಾರೋಗ್ಯದ ನಡುವೆಯೂ ಪಂದ್ಯಗಳಲ್ಲಿ ಭಾಗವಹಿಸಿದ್ದ ಮೊಹಮ್ಮದ್ ರಿಜ್ವಾನ್ ಟೂರ್ನಿಯಲ್ಲಿ ಒಟ್ಟು 281 ರನ್ ಗಳಿಸುವುದರ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದರು. ಈ ಪಟ್ಟಿಯಲ್ಲಿ 289 ರನ್ ಗಳಿಸಿದ್ದ ಹಾಲಿ ಟಿ ಟ್ವೆಂಟಿ ವಿಶ್ವಕಪ್ ಚಾಂಪಿಯನ್ಸ್ ಆಗಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ದ್ವಿತೀಯ ಸ್ಥಾನದಲ್ಲಿದ್ದರೆ, 303 ರನ್ ಗಳಿಸಿರುವ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅಗ್ರಸ್ಥಾನದಲ್ಲಿದ್ದಾರೆ.

Deepak chahar ಆಟ ನೋಡಿ ಅಭಿಮಾನಿಗಳು ಹೇಳಿದ್ದೇನು | Oneindia Kannada

ಇನ್ನು ಕಳೆದ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಪಂದ್ಯವೊಂದರಲ್ಲಿ ಶತಕವನ್ನು ಬಾರಿಸುವ ಮೂಲಕ ಮಿಂಚಿದ್ದ ಮೊಹಮ್ಮದ್ ರಿಜ್ವಾನ್ ವಿಶ್ವಕಪ್ ಟೂರ್ನಿಯಲ್ಲಿ ಅಕ್ಟೋಬರ್ 24ರಂದು ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ್ದ 152 ರನ್‌ಗಳ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೇ ಪಾಕಿಸ್ತಾನ ಬೆನ್ನತ್ತುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಭಾರತ ವಿರುದ್ಧದ ಆ ಪಂದ್ಯದಲ್ಲಿ ತನ್ನ ತಂಡದ ನಾಯಕ ಬಾಬರ್ ಅಜಮ್ ಜತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಮೊಹಮ್ಮದ್ ರಿಜ್ವಾನ್ 55 ಎಸೆತಗಳಲ್ಲಿ 79 ರನ್ ಬಾರಿಸಿದ್ದರು. ಮೊಹಮ್ಮದ್ ರಿಜ್ವಾನ್ ಅವರ ಆ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಕೂಡ ಸೇರಿದ್ದವು. ಅಷ್ಟೇ ಅಲ್ಲದೆ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊಹಮ್ಮದ್ ರಿಜ್ವಾನ್ 52 ಎಸೆತಗಳಿಗೆ 67 ರನ್ ಬಾರಿಸಿ ಮಿಂಚಿದ್ದರು.

Story first published: Monday, January 24, 2022, 10:20 [IST]
Other articles published on Jan 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X