ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶಹಝಾದ್‌ ಹೇಳುತ್ತಿರುವುದು ಸುಳ್ಳು: ಆಫ್ಘನ್‌ ಕ್ರಿಕೆಟ್‌ ಮಂಡಳಿ

Mohammad Shahzad cries foul, ACB CEO says keeper injured

ಲಂಡನ್‌, ಜೂನ್‌ 10: ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಶಹಝಾದ್‌ ಗಾಯಗೊಂಡಿದ್ದು ವಿಶ್ವಕಪ್‌ ಟೂರ್ನಿಯಿಂದಲೇ ಹೊರಬಿದಿದ್ದಾರೆ ಎಂದು ಅಫಘಾನಿಸ್ತಾನ ಕ್ರಿಕೆಟ್‌ ಮಂಡಳಿ (ಎಸಿಬಿ) ಜೂನ್‌ 6ರಂದು ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಆದರೆ, ಈ ವಿಚಾರವಾಗಿ ವಿಡಿಯೊ ಸಂದೇಶದ ಮೂಲಕ ತಮ್ಮ ಅಳಲು ತೋಡಿಕೊಂಡ ಆಫ್ಘನ್‌ ಪಡೆಯ ಅನುಭವಿ ಆಟಗಾರ ಶಹಝಾದ್‌, ತಾವು ಯಾವುದೇ ರೀತಿಯಲ್ಲಿ ಗಾಯಗೊಂಡಿಲ್ಲ. ಅಫಘಾನಿಸ್ತಾನ ಕ್ರಿಕೆಟ್‌ ಮಂಡಳಿ ಬಲವಂತವಾಗಿ ತಮ್ಮನ್ನು ವಿಶ್ವಕಪ್‌ ಟೂರ್ನಿಯಿಂದ ಹೊರದಬ್ಬಿದೆ ಎಂದು ಸೋಮವಾರ ಆರೋಪಿಸಿದ್ದರು.

ಸ್ಫೋಟಕ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ಗೆ ಬಿಸಿಸಿಐನಿಂದಲೇ ಮೋಸ!ಸ್ಫೋಟಕ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ಗೆ ಬಿಸಿಸಿಐನಿಂದಲೇ ಮೋಸ!

ತಮ್ಮನ್ನು ಬಲವಂತದಿಂದ ತಂಡದಿಂದ ಹೊರಹಾಕಲಾಗಿದೆ ಎಂದು ಕಣ್ಣೀರಿಟ್ಟಿರುವ ಶಹಝಾದ್‌ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವ ಮೂಲಕ ಭಾರಿ ಸುದ್ದಿ ಮಾಡಿತ್ತು. ಇದೇ ವೇಳೆ ಶಹಝಾದ್‌ ಅವರ ಬದಲಾಗಿ ಇಕ್ರಮ್‌ ಅಲಿ ಖಿಲಿ ಅಫಘಾನಿಸ್ತಾನ ತಂಡ ಸೇರಿಕೊಳ್ಳಲಿದ್ದಾರೆ ಎಂದು ಎಸಿಬಿ ತನ್ನ ಪ್ರಕಟಣೆ ಮೂಲಕ ತಿಳಿಸಿತ್ತು.

ಭಾರತ ವಿರುದ್ಧದ ಹೀನಾಯ ಸೋಲಿನ ಬಳಿಕ ಫಿಂಚ್‌ ಹೇಳಿದ್ದೇನು?ಭಾರತ ವಿರುದ್ಧದ ಹೀನಾಯ ಸೋಲಿನ ಬಳಿಕ ಫಿಂಚ್‌ ಹೇಳಿದ್ದೇನು?

"ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಗಾಯದ ಸಮಸ್ಯೆ ಕಾರಣ ವಿಶ್ವಕಪ್‌ನಿಂದಲೇ ನನ್ನನ್ನು ಹೊರಗಟ್ಟಿರುವ ಸುದ್ದಿ ತಿಳಿಯಿತು. ನನ್ನ ತಂಡದ ಸಹ ಆಟಗಾರರಿಗೂ ಈ ವಿಚಾರ ತಿಳಿದಿರಲಿಲ್ಲ. ಮಂಡಿ ನೋವು ಇತ್ತಾದರೂ ಅಗತ್ಯದ ವಿಶ್ರಾಂತಿ ತೆಗೆದುಕೊಂಡ ಬಳಿಕ ಚೇತರಿಸಿದ್ದೆ,'' ಎಂದು ಶಹಝಾದ್‌ ಎಸಿಬಿ ವಿರುದ್ಧ ಗಂಭೀರವಾಗಿ ಆರೋಪಿಸಿದ್ದರು.

ಒಡಿಐ ಕ್ರಿಕೆಟ್‌ನಲ್ಲಿ ಯುವರಾಜ್‌ಗೆ ಕೀರ್ತಿ ತಂದ 5 ಪಂದ್ಯಗಳಿವು!ಒಡಿಐ ಕ್ರಿಕೆಟ್‌ನಲ್ಲಿ ಯುವರಾಜ್‌ಗೆ ಕೀರ್ತಿ ತಂದ 5 ಪಂದ್ಯಗಳಿವು!

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಸಿಬಿಯ ಸಿಇಒ ಬೇರೆಯದ್ದೇ ಕಥೆ ಹೇಳಿದ್ದಾರೆ. "ಶಹಝಾದ್‌ ಹೇಳುತ್ತಿರುವುದು ಸುಳ್ಳು. ಅವರ ಗಾಯದ ಸಮಸ್ಯೆಯ ಸಂಪೂರ್ಣ ವಿವರಗಳ ದಾಖಲೆಗಳನ್ನು ಐಸಿಸಿಗೆ ನೀಡಿದ ಬಳಿಕವಷ್ಟೇ ಬದಲಿ ಆಟಗಾರನನ್ನು ನೇಮಕ ಮಾಡಲು ಅನಮತಿ ಪಡೆಯಲಾಗಿದೆ. ಫಿಟ್ನೆಸ್‌ ಇಲ್ಲದ ಆಟಗಾರನೊಂದಿಗೆ ತಂಡ ಆಡಲು ಸಾಧ್ಯವಿಲ್ಲ. ವಿಶ್ವಕಪ್‌ನ ಮುಂದಿನ ಪಂದ್ಯಗಳಲ್ಲಿ ತಾವು ಭಾಗಿಯಾಗದೇ ಇರುವುದಕ್ಕೆ ಅವರಿಗೆ ಅತೀವ ಬೇಸರವಾಗಿದೆ ಎಂಬುದು ನನಗೆ ತಿಳಿದಿದೆ. ಆದರೆ, ಅವರ ಫಿಟ್ನೆಸ್‌ ವಿಚಾರದಲ್ಲಿ ತಂಡ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳಲು ಸಿದ್ದವಿಲ್ಲ,'' ಎಂದು ಸಿಇಒ ಅಸಾದುಲ್ಲಾ ಖಾನ್‌ ಉತ್ತರ ನೀಡಿದ್ದಾರೆ.

ದಾದಾ, ತೆಂಡೂಲ್ಕರ್‌ ಸಾಲಿಗೆ ಸೇರಿದ ಶತಕ ವೀರ ಶಿಖರ್‌ ಧವನ್‌!ದಾದಾ, ತೆಂಡೂಲ್ಕರ್‌ ಸಾಲಿಗೆ ಸೇರಿದ ಶತಕ ವೀರ ಶಿಖರ್‌ ಧವನ್‌!

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶಹಝಾದ್‌ ಸತತ ವೈಫಲ್ಯ ಅನುಭವಿಸಿದ್ದು, ವಿಕೆಟ್‌ಕೀಪಿಂಗ್‌ನಲ್ಲೂ ಅವರು ವಿಫಲರಾಗುತ್ತಿರುವುದು ತಂಡದ ಮ್ಯಾನೇಜ್ಮೆಂಟ್‌ನ ಅಸಮಾಧಾನಕ್ಕೆ ಕಾರಣವಾಗಿದೆ. ಆಫ್ಘನ್‌ ಪಡೆ ವಿಶ್ವಕಪ್‌ನಲ್ಲಿ ಜೂನ್‌ 15ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮುಂದಿನ ಪಂದ್ಯವನ್ನು ಆಡಲಿದ್ದು, ಈವರೆಗೆ ಆಡಿದ ಎಲ್ಲಾ ಪಂದ್ಯಗಳನ್ನು ಸೋತಿದೆ.

Story first published: Monday, June 10, 2019, 22:14 [IST]
Other articles published on Jun 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X