ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಫೋಟಕ ಬ್ಯಾಟ್ಸ್ಮನ್ ಶಹಝಾದ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತು!

Mohammad Shahzad suspended from all forms of cricket for a year

ಕಾಬುಲ್, ಆಗಸ್ಟ್ 19: ಅಫ್ಘಾನಿಸ್ತಾನದ ಸ್ಫೋಟಕ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ಮೊಹಮ್ಮದ್ ಶಹಝಾದ್ ಅವರನ್ನು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ (ಎಸಿಬಿ) 12 ತಿಂಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತುಗೊಳಿಸಿದೆ. ಶಹಝಾದ್, ಬೋರ್ಡ್‌ನ ನಿಯಮ ಉಲ್ಲಂಘಿಸಿರುವುದಾಗಿ ಎಸಿಬಿ ಹೇಳಿದೆ.

ಭಾರತ vs ವಿಂಡೀಸ್: ಭಾರತ ತಂಡಕ್ಕೆ ಭದ್ರತಾ ಬೆದರಿಕೆ, ಪಿಸಿಬಿ ಎಚ್ಚರಿಕೆ!ಭಾರತ vs ವಿಂಡೀಸ್: ಭಾರತ ತಂಡಕ್ಕೆ ಭದ್ರತಾ ಬೆದರಿಕೆ, ಪಿಸಿಬಿ ಎಚ್ಚರಿಕೆ!

ಈ ಮೊದಲು ಶಹಝಾದ್ ಅವರನ್ನು ಅನಿರ್ಧಿಷ್ಟಾವಧಿವರೆಗೆ ಅಮಾನತುಗೊಳಿಸುವುದಾಗಿ ಎಸಿಎ ತಿಳಿಸಿತ್ತು. ಆದರೆ ಭಾನುವಾರ (ಆಗಸ್ಟ್ 18) ಅಮಾನತು ಶಿಕ್ಷೆಯ ಅವಧಿಯನ್ನು ಪ್ರಕಟಿಸಿದೆ. ಮೊಹಮ್ಮದ್, ಬೋರ್ಡ್‌ನ ಶಿಸ್ತು ನಿಯಮಗಳನ್ನು ಮೀರಿ ವರ್ತಿಸಿದ್ದಾರೆ ಎಂದು ಕ್ರಿಕೆಟ್‌ ಬೋರ್ಡ್ ತಿಳಿಸಿದೆ.

ಕೆಪಿಎಲ್‌ 2019: ಲಯನ್ಸ್‌ ಗರ್ಜನೆಗೆ ಬೆಚ್ಚಿದ ಮೈಸೂರು ವಾರಿಯರ್ಸ್‌ಕೆಪಿಎಲ್‌ 2019: ಲಯನ್ಸ್‌ ಗರ್ಜನೆಗೆ ಬೆಚ್ಚಿದ ಮೈಸೂರು ವಾರಿಯರ್ಸ್‌

'ಶಹಝಾದ್ ಅವರು ಎಸಿಬಿಯ ಶಿಸ್ತು ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅವರ ನಡೆ ಎಸಿಬಿ ಆಟಗಾರನಲ್ಲಿ ಇರಬೇಕಾದ ನಡೆಯಂತೆ ಇಲ್ಲ. ಶಹಝಾದ್ ಅನೇಕ ಬಾರಿ ವಿದೇಶಕ್ಕೆ ಹೋಗಿ ಬಂದಿದ್ದಾರೆ. ಆ ಮೂಲಕ ವಿದೇಶಿ ಪ್ರಯಾಣಕ್ಕೂ ಮುನ್ನ ಆಟಗಾರನೊಬ್ಬ ಬೋರ್ಡ್ ಅನುಮತಿ ಕೋರಬೇಕನ್ನೋ ನಿಯಮವನ್ನು ಮೀರಿದ್ದಾರೆ,' ಎಂದು ಎಸಿಬಿ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

'ದೇಶದೊಳಗೆ ಆಟಗಾರನ ತರಬೇತಿಗೆ ಬೇಕಾದಂತ ಎಲ್ಲಾ ಅನುಕೂಲಗಳು ಎಸಿಬಿಯಲ್ಲಿದೆ. ಹಾಗಾಗಿ ಅಫ್ಘಾನ್ ಆಟಗಾರರು ತರಬೇತಿಯ ನೆಪದಲ್ಲಿ ವಿದೇಶಕ್ಕೆ ಹೋಗುವ ಅಗತ್ಯವಿಲ್ಲ,' ಎಂದು ಎಸಿಬಿ ವಿವರಿಸಿದೆ. 2019ರ ವಿಶ್ವ ಕಪ್‌ನಲ್ಲಿ ಕೇವಲ 2 ಪಂದ್ಯಗಳ ಬಳಿಕ ಪಾಕಿಸ್ತಾನ ಮೂಲದ ಶಹಝಾದ್ ಅವರನ್ನು ಇಂಗ್ಲೆಂಡ್‌ನಿಂದ ಅಫ್ಘಾನ್‌ಗೆ ಕಳುಹಿಸಲಾಗಿತ್ತು. ಆ ವೇಳೆ ಶಹಝಾದ್ ಬೇಸರ ತೋರಿಕೊಂಡಿದ್ದರು.

Story first published: Monday, August 19, 2019, 12:14 [IST]
Other articles published on Aug 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X