ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೈದರಾಬಾದ್ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಅಜರುದ್ದೀನ್ ಆಯ್ಕೆ

Mohammed Azharuddin elected Hyderabad Cricket Association president

ಹೈದರಾಬಾದ್, ಸೆ. 27: ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಶುಕ್ರವಾರ(ಸೆ.27)ದಂದು ಹೈದರಾಬಾದ್ ಕ್ರಿಕೆಟ್ ಮಂಡಳಿ(ಎಚ್ ಸಿಎ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ವಿರುದ್ಧ 147-73ರಲ್ಲಿ ಸೋಲು ಕಂಡಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಆಡಳಿತ ಅಧಿಕಾರಿಯಾಗಿ ಮೊದಲ ಬಾರಿಗೆ ಅಜರುದ್ದೀನ್ ಅವರು ಕಾಣಿಸಿಕೊಳ್ಳಲಿದ್ದಾರೆ. ಅದ್ನಾನ್ ಮೊಹಮ್ಮದ್ ಹಾಗೂ ಜೀಶನ್ ಅದ್ನಾನ್ ಮೊಹಮ್ಮದ್ ಅವರು ಅಜರುದ್ದೀನ್ ಹೆಸರನ್ನು ಶಿಫಾರಸು ಮಾಡಿದ್ದರು. ಕಳೆದ ವಾರದಲ್ಲಿ ಅಜರುದ್ದೀನ್ ಅವರು ನಾಮಪತ್ರ ಸಲ್ಲಿಸಿದ್ದರು.

ರಾಯುಡು ನಡೆಸಿಕೊಂಡ ಬಗೆಗೆ ಆಯ್ಕೆ ಸಮಿತಿ ಮೇಲೆ ಅಜರುದ್ದೀನ್ ಗರಂರಾಯುಡು ನಡೆಸಿಕೊಂಡ ಬಗೆಗೆ ಆಯ್ಕೆ ಸಮಿತಿ ಮೇಲೆ ಅಜರುದ್ದೀನ್ ಗರಂ

ಟೀಂ ಇಂಡಿಯಾ ಪರ 99 ಟೆಸ್ಟ್ ಹಾಗೂ 334 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿರುವ ಅಜರುದ್ದೀನ್ ಅವರ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ನಂತರ ಹಲವು ವರ್ಷಗಳ ಕಾಲ ಕಾನೂನು ಸಮರ ನಡೆಸಿ ತಮ್ಮ ಹೆಸರಿಗೆ ಅಂಟಿದ್ದ ಕಳಂಕವನ್ನು ಕಳಚಿ ಹಾಕಿದ್ದರು. 2012ರಲ್ಲಿ ಅವರ ಮೇಲೆ ಹೇರಿದ್ದ ನಿಷೇಧವನ್ನು ಬಿಸಿಸಿಐ ಹಿಂಪಡೆದಿತ್ತು.

2009ರಲ್ಲಿ ಉತ್ತರಪ್ರದೇಶದ ಮುಜಾಫರ್ ಬಾದಿನಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿ ಸಂಸದರಾಗಿದ್ದರು. ಆದರೆ, ಕ್ರಿಕೆತ್ ಮಂಡಳಿ ಆಡಳಿತ ಅಧಿಕಾರಿಯಾಗಲು ಯತ್ನಿಸಿರಲಿಲ್ಲ. ಇತ್ತೀಚೆಗೆ ಅಂಬಟಿ ರಾಯುಡು ಪರ ದನಿಯೆತ್ತಿದ್ದರು.

Story first published: Friday, September 27, 2019, 18:38 [IST]
Other articles published on Sep 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X