ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಂಗೂಲಿ or ಧೋನಿ; ಕೊಹ್ಲಿ or ಸಚಿನ್: ಕೈಫ್ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳು

Mohammed Kaif Tells Who Is The Best India Captain

ಟೀಮ್ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಬಗೆಗಿನ ಹಲವು ಕುತೂಹಲಕಾರಿ ಸಂಗತಿಗಳನ್ನು ಕೈಫ್ ಹಂಚಿಕೊಂಡಿದ್ದಾರೆ. ಅಭಿಮಾನಿಗಳೊಂದಿಗೆ ಮಾತನಾಡಿದ ಕೈಫ್ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ

ಸೌರವ್ ಗಂಗೂಲಿ ಮತ್ತು ಎಂ ಎಸ್ ಧೋನಿ ಮಧ್ಯೆ ಯಾರು ಉತ್ತಮ ನಾಯಕ ಎಂಬುದಕ್ಕೆ ಉತ್ತರವನ್ನು ನೀಡಿದ ಕೈಫ್ ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಮಧ್ಯೆ ಯಾರು ಬೆಸ್ಟ್ ಆಟಗಾರ ಎಂಬುದಕ್ಕೂ ಉತ್ತರವನ್ನು ನೀಡಿದ್ದಾರೆ.

ಟೀಮ್ ಇಂಡಿಯಾದ ಉತ್ತಮ ಬೌಲರ್, ಉತ್ತಮ ಕೋಚ್ ಈ ಎಲ್ಲಾ ವಿಚಾರಗಳ ಬಗ್ಗೆ ಹೆಲೋ ಆಪ್‌ನ ನೇರ ಸಂವಾದದಲ್ಲಿ ಮಾತಾನಾಡುತ್ತಾ ಕೈಫ್ ವಿವರಿಸಿದ್ದಾರೆ.

ಇಬ್ಬರು ಅದ್ಭುತ ಆಟಗಾರರು ವಿಶ್ವಕಪ್ ಎತ್ತಲಿಲ್ಲ

ಇಬ್ಬರು ಅದ್ಭುತ ಆಟಗಾರರು ವಿಶ್ವಕಪ್ ಎತ್ತಲಿಲ್ಲ

ಗಂಗೂಲಿ ಹಾಗೂ ದ್ರಾವಿಡ್ ಇಬ್ಬರೂ ಭಾರತ ತಂಡದ ಅದ್ಭುತ ಆಟಗಾರರು. ಭಾರತಕ್ಕಾಗಿ ಈ ಇಬ್ಬರು ಆಟಗಾರರು ಮಡಿದ ಸಾಧನೆ ಬಹಳ. ಆದರೆ ದುರದೃಷ್ಟದ ಸಂಗತಿ ಎಂದರೆ ಈ ಇಬ್ಬರೂ ಆಟಗಾರರಿಗೆ ವಿಶ್ವಕಪ್ ಸಿಗಲಿಲ್ಲ ಎನ್ನುವುದು. ಈ ಆಟಗಾರರಿಗೆ ವಿಶ್ವಕಪ್ ಎತ್ತುವ ಅವಕಾಶವೇ ಸಿಗಲಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮದ್ ಕೈಫ್ ಹೇಳಿದ್ದಾರೆ.

ಟೀಮ್ ಇಂಡಿಯಾದ ಗ್ರೇಟ್ ಕ್ಯಾಪ್ಟನ್

ಟೀಮ್ ಇಂಡಿಯಾದ ಗ್ರೇಟ್ ಕ್ಯಾಪ್ಟನ್

ಸೌರವ್ ಗಂಗೂಲಿ ಭಾರತ ತಂಡ ಕಂಡ ಉತ್ತಮ ನಾಯಕ. ಆದರೆ ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವ ಸಿಕ್ಕಿದ್ದು ಅದೃಷ್ಟದ ಬಲದಿಂದ. ಸೌರವ್ ಗಂಗೂಲಿ ಗೆ ನಾಯಕತ್ವ ಸಿಕ್ಕಾಗ ಭಾರತದ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಸಚಿನ್ ತೆಂಡೂಲ್ಕರ್ ಆಗ ತಾನೆ ನಾಯಕತ್ವ ತೊರೆದಿದ್ದರು. ಮ್ಯಾಚ್ ಫಿಕ್ಸಿಂ ಹಗರಣದಲ್ಲಿ ಭಾರತ ಒದ್ದಾಡಿತ್ತು. ಈ ವೇಳೆ ಭಾರತ ತಂಡದ ಚುಕ್ಕಾಣಿ ಹಿಡಿದು, ಅದನ್ನು ಮುನ್ನಡೆಸಿದವರು ಸೌರವ್ ಗಂಗೂಲಿ, ಹೀಗಾಗಿ ಧೋನಿ-ಗಂಗೂಲಿ ನಡುವೆ ಗಂಗೂಲಿ ಅತ್ಯುತ್ತಮ ನಾಯಕ ಎನ್ನುವುದು ನನ್ನ ಆಯ್ಕೆ. ಧೋನಿಗೆ ಉತ್ತಮ ಆಟಗಾರರ ಬೆಂಬಲ ಸಿಕ್ಕಿ ಯಶಸ್ವಿ ಆದವರು ಎಂದು ಕೈಫ್ ಹೇಳಿದರು.

ಚಾಪೆಲ್ ಬಗ್ಗೆ ಕೈಫ್ ಮಾತು

ಚಾಪೆಲ್ ಬಗ್ಗೆ ಕೈಫ್ ಮಾತು

ಭಾರತ ತಂಡದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಗೆ ಬ್ಯಾಟಿಂಗ್ ಬಗ್ಗೆ ಬಹಳ ತಿಳುವಳಿಕೆ ಇತ್ತು. ಇದರಿಂದ ಬಹಳ ಆಟಗಾರರಿಗೆ ಅನುಕೂಲ ಆಯಿತು. ಆದರೆ ಟೀಮ್ ಬೆಳೆಸುವುದರಲ್ಲಿ ಹಿಂದೆ ಬಿದ್ದರು. ರೈನಾ ಗೆ ಅನುಕೂಲ ಆಯಿತು, ದಿನೇಶ್ ಕಾರ್ತಿಕ್ ಗೆ ಕೂಡ ಅವಕಾಶ ಸಿಕ್ಕಿತು. ನಾನು ಹೇಳಿದ್ದನ್ನು ಯಾರು ಕೇಳುತ್ತಾರೋ ಅಂತವರನ್ನು ಚಾಪೆಲ್ ಬಹಳ ಇಷ್ಟ ಪಡುತ್ತಿದ್ದರು. ದ್ರಾವಿಡ್ ಅವರು ಚಾಪೆಲ್ ಗೆ ಬಹಳ ಗೌರವ ಕೊಡುತ್ತಿದ್ದರು ಎಂದು ಕೈಫ್ ಹೇಳಿದ್ದಾರೆ.

ಸಚಿನ್ ಮತ್ತು ಕೊಹ್ಲಿ

ಸಚಿನ್ ಮತ್ತು ಕೊಹ್ಲಿ

ಟೀಮ್ ಇಂಡಿಯಾದಲ್ಲಿ ಸಚಿನ್ ಬ್ಯಾಟಿಂಗ್ ನೋಡುವುದು ಬಹಳ ಇಷ್ಟ. ಭವಿಷ್ಯದಲ್ಲಿ ವಿರಾಟ್ ಕೊಹ್ಲಿಸಿಕ್ಕಾಪಟ್ಟೆ ದಾಖಲೆ ಮಾಡಬಹುದು, ಆದರೆ ತೆಂಡೂಲ್ಕರ್ ಬ್ಯಾಟಿಂಗ್ ನೋಡುವುದು ಬಹಳ ಇಷ್ಟ. ಕಾಪಿ ಬುಕ್ ಶಾಟ್ ಸಚಿನ್ ಅವರದ್ದು ಎಂದು ಕೈಫ್ ಹೇಳಿದ್ದಾರೆ.

ಬಸ್ ಡ್ರೈವರ್ ಎಂದು ನಿಂದಿಸಿದ್ದ ನಾಸಿರ್ ಹುಸೇನ್

ಬಸ್ ಡ್ರೈವರ್ ಎಂದು ನಿಂದಿಸಿದ್ದ ನಾಸಿರ್ ಹುಸೇನ್

ನಾನು ಕವರ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕಾರಣ, ಜಾಸ್ತಿ ಮಾತನಾಡಿ, ಬ್ಯಾಟ್ಸಮನ್ ಗಮನ ಹಾಳುಮಾಡಬೇಕು ಎಂದು ಸೌರವ್ ಗಂಗೂಲಿ ಹೇಳಿದ್ದರು. ನಾನು ಬಹಳ ಮಾತನಾಡುತ್ತಿದ್ದೆ. ಆಗ ಇಂಗ್ಲೆಂಡಿನ ನಾಸಿರ್ ಹುಸೈನ್ ನನ್ನನ್ನು ಬಸ್ ಡ್ರೈವರ್ ಎಂದು ನಿಂದಿಸಿದ್ದರು. ಆದರೆ ನಾನು ನಾಟ್ ವೆಸ್ಟ್ ಮ್ಯಾಚ್ ಗೆಲ್ಲಿಸಿ ಉತ್ತರ ನೀಡಿದೆ ಎಂದು ಲೈವ್ ಸಂವಾದದಲ್ಲಿ ನೆನಪಿಸಿಕೊಂಡಿದ್ದಾರೆ.

ದ್ರಾವಿಡ್, ಕುಂಬ್ಳೆ ಬಗ್ಗೆಯೂ ಕೈಫ್ ಮಾತು

ದ್ರಾವಿಡ್, ಕುಂಬ್ಳೆ ಬಗ್ಗೆಯೂ ಕೈಫ್ ಮಾತು

ಇನ್ನು ಟೀಮ್ ಇಂಡಿಯಾದ ಅತ್ಯುತ್ತಮ ಸ್ಪಿನ್ನರ್ ಅಂದ್ರೆ ಅದು ಅನಿಲ್ ಕುಂಬ್ಳೆ ಎಂದಿರುವ ಕೈಫ್ ವೇಗಿಗಳಲ್ಲಿ ಜಹೀರ್ ಖಾನ್ ಅವರನ್ನು ಆಯ್ಕೆ ಮಾಡಿದ್ದಾರೆ. ಟೀಮ್ ಇಂಡಿಯಾ ಕಂಡ ಅತ್ಯುತ್ತಮ ಕೋಚ್ ಯಾರು ಎಂಬ ಪ್ರಶ್ನೆಗೆ ಜಾನ್ ರೈಟ್ ಎಂದು ಉತ್ತರಿಸಿದ್ದಾರೆ. ದ್ರಾವಿಡ್ ಬಗ್ಗೆಯೂ ಮೆಚ್ಚುಗೆಯ ಮಾತನಾಡಿದ ಕೈಫ್ ಅವರೋರ್ವ ಉತ್ಕೃಷ್ಟ ದರ್ಜೆಯ ಆಟಗಾರ. ಅಗತ್ಯ ಸಂದರ್ಭಗಳಲ್ಲಿ ಎಲ್ಲಾ ರೀತಿಯ ಪಾತ್ರಗಳ್ನೂ ದ್ರಾವಿಡ್ ನಿರ್ವಹಿಸಿದ್ದಾರೆ ಎಂದು ಹೇಳಿದರು.

Story first published: Sunday, May 10, 2020, 15:14 [IST]
Other articles published on May 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X