ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶಮಿ ಒಬ್ಬ ಕಾಮುಕ, ಬಿಸಿಸಿಐ ಫಟಿಂಗರ ಕೂಟ: ಹಸಿನ್ ಜಹಾನ್ ಆರೋಪ

Mohammed Shami a sex addict, BCCI a pack of rogues: Hasin Jahans fresh charge

ನವದೆಹಲಿ, ಜುಲೈ 17: ಕೆಲವು ದಿನಗಳಿಂದ ಮೌನ ವಹಿಸಿದ್ದ ಕ್ರಿಕೆಟ್ ಮಹಮ್ಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್, ಪತಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಮಹಮ್ಮದ್ ಶಮಿ ಒಬ್ಬ ಕಾಮ ವ್ಯಸನಿ ಎಂದು ಜಹಾನ್ ಆರೋಪಿಸಿದ್ದಾರೆ. ಅಲ್ಲದೆ, ಶಮಿ ಅವರಿಗೆ ಕ್ಲೀನ್ ಚಿಟ್ ನೀಡಿದ ಬಿಸಿಸಿಐ ವಿರುದ್ಧವೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸಿದ್ಧಿ ಗಳಿಸಲು ಬಯಸಿದ್ದರೆ ತಾವು ಮಹಮ್ಮದ್ ಶಮಿ ಅವರನ್ನು ಮದುವೆಯಾಗುತ್ತಲೇ ಇರಲಿಲ್ಲ ಎಂದು ಜಹಾನ್ ಹೇಳಿದ್ದಾರೆ.

ಕ್ರಿಕೆಟ್ : ಯೋ ಯೋ ಟೆಸ್ಟ್ ನಲ್ಲಿ ಕೊಹ್ಲಿ ಹಿಂದಿಕ್ಕಿದ ಮಯಾಂಕ್ಕ್ರಿಕೆಟ್ : ಯೋ ಯೋ ಟೆಸ್ಟ್ ನಲ್ಲಿ ಕೊಹ್ಲಿ ಹಿಂದಿಕ್ಕಿದ ಮಯಾಂಕ್

'ನಾನು ನಿಜಕ್ಕೂ ಖ್ಯಾತಿ ಪಡೆದುಕೊಳ್ಳಲು ಇಷ್ಟಪಟ್ಟಿದ್ದರೆ ಶಮಿ ಅವರನ್ನು ಮದುವೆಯೇ ಆಗುತ್ತಿರಲಿಲ್ಲ. ಯಾರಾದರೂ ಉದ್ಯಮಿಯನ್ನು ಮದುವೆಯಾಗುತ್ತಿದ್ದೆ. ಬಹಳ ಹಿಂದೆಯೇ ಮುಂಬೈಗೆ ಸ್ಥಳಾಂತರ ಹೊಂದಿರುತ್ತಿದ್ದೆ.

ನನ್ನ ಹಾಗೂ ಮಗಳ ಭವಿಷ್ಯಕ್ಕಾಗಿ ಇದನ್ನು ಮಾಡಲಿಲ್ಲ. ಅವರಿಗೆ ವಿಚ್ಛೇದನ ಬೇಕಾಗಿದೆ. ಏಕೆಂದರೆ, ನನ್ನಲ್ಲೊಇ ಸದ್ಗುಣಗಳು ಇಲ್ಲ ಎಂದಲ್ಲ. ಅವರ ದುರ್ಗುಣಗಳನ್ನು ಉಪಯೋಗಿಸಿಕೊಳ್ಳುವುದಕ್ಕಾಗಿ' ಎಂದಿದ್ದಾರೆ.

Mohammed Shami a sex addict, BCCI a pack of rogues: Hasin Jahans fresh charge

ಶಮಿ ತಮ್ಮ ಮೇಲೆ ಯಾವಾಗಲೂ ನಿಯಂತ್ರಣ ಹೇರುತ್ತಿದ್ದರು ಎಂದು ಸಹ ಅವರು ಆರೋಪಿಸಿದ್ದಾರೆ.

'ಮನೆಯಿಂದ ಹೊರಗೆ ಮುಕ್ತವಾಗಿ ಅಡ್ಡಾಡಲು ನನಗೆ ಬಿಡುತ್ತಿರಲಿಲ್ಲ. ಮನೆಯ ಕೋಣೆಯಲ್ಲಿ ಕುಳಿತು ನನ್ನ ತೂಕ 80 ಕೆ.ಜಿಯಷ್ಟಾಯಿತು.

ಕ್ರಿಕೆಟ್ : ಶ್ರೀಲಂಕಾದ ನಾಯಕ, ಕೋಚ್, ಮ್ಯಾನೇಜರ್ ಗೆ ನಿಷೇಧಕ್ರಿಕೆಟ್ : ಶ್ರೀಲಂಕಾದ ನಾಯಕ, ಕೋಚ್, ಮ್ಯಾನೇಜರ್ ಗೆ ನಿಷೇಧ

ನನಗೆ ಮಗುವನ್ನು ಬೆಳೆಸುವ ಜವಾಬ್ದಾರಿಯಿದೆ ಮತ್ತು ನನಗೆ ಯಾವುದೇ ಆದಾಯದ ಪರ್ಯಾಯ ಮೂಲವಿಲ್ಲ. ನಾನ್ಯಾಕೆ ಆತನಿಗೆ ವಿಚ್ಛೇದನ ನೀಡಲಿ?' ಎಂದು ಕೇಳಿದ್ದಾರೆ.

ಮಹಮ್ಮದ್ ಶಮಿ ತಪ್ಪಿತಸ್ಥರಲ್ಲ ಎಂದು ಬಿಸಿಸಿಐ ನೀಡಿರುವ ಕ್ಲೀನ್‌ಚಿಟ್‌ಗೆ ಆಕ್ರೋಶ ವ್ಯಕ್ತಪಡಿಸಿರುವ ಜಹಾನ್, ಬಿಸಿಸಿಐ! ಫಟಿಂಗರ ಕೂಟದಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ ಎಂದು ಖಾರವಾಗಿ ನುಡಿದಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮುಖ್ಯ ಗುರಿ ತಮ್ಮನ್ನು ರಕ್ಷಿಸುವುದಾಗಿದೆ ಎಂದು ಜಹಾನ್ ಹೇಳಿಕೊಂಡಿದ್ದಾರೆ.

ದೀದಿ ಅವರನ್ನು ಭೇಟಿ ಮಾಡಿದಾಗ ತುಂಬಾ ಅಕ್ಕರೆ ತೋರಿಸಿದ್ದರು. ಆದರೆ ಅವರು ಮತ್ತು ಕೋಲ್ಕತಾ ಪೊಲೀಸರು ನನಗೆ ಭದ್ರತೆ ಮಾತ್ರ ನೀಡಿದರು.

ಅವರು ನನಗೆ ಬೆಂಬಲ ನೀಡಲಿಲ್ಲ. ಅವರು ಶಮಿ ಅವರನ್ನು ಬೆಂಬಲಿಸಿದರು. ಹೀಗಾಗಿಯೇ ಅವರನ್ನು ಬಂಧಿಸಿಲ್ಲ ಎಂದು ಆರೋಪಿಸಿದರು.

ಕ್ರಿಕೆಟಿಗನಾಗಿ ಬೆಳೆಯುತ್ತಿದ್ದ ಆರಂಭದ ದಿನಗಳಲ್ಲಿ, ಮೊದಲ ಬಾರಿಗೆ ಐಪಿಎಲ್ ಕಾರ್ಯಕ್ರಮದಲ್ಲಿ ಭೇಟಿಯಾದಾಗ ಶಮಿಗೆ ಪದಗಳನ್ನು ಜೋಡಿಸಿ ವಾಕ್ಯ ರಚಿಸುವುದೂ ಬರುತ್ತಿರಲಿಲ್ಲ. ನಾನೇ ಅವರನ್ನು ಬೆಳೆಸಿದ್ದು ಎಂದು ಜಹಾನ್ ಹೇಳಿಕೊಂಡಿದ್ದಾರೆ.

ಅವರು ಮುಂದೆ ಮನಸ್ಸು ಬದಲಿಸಬಹುದು. ಅವರು ಮತ್ತೆ ಮರಳಿ ಬರಬಹುದು. ಆದರೆ, ಐದು ವರ್ಷ ನಾನು ಅಬಲೆಯಂತೆ ಸಂಕಷ್ಟ ಅನುಭವಿಸಿದ್ದೇನೆ. ನನ್ನನ್ನು ನಾನು ಸುಧಾರಿಸಿಕೊಳ್ಳುವತ್ತ ಸಾಗುತ್ತಿದ್ದೇನೆ.

ಆದರೆ, ಒಂದು ಸಂಗತಿ ನಾನು ಕಲಿತಿದ್ದೇನೆಂದರೆ, ನೀವು ಶೋಷಣೆಗೆ ಒಳಗಾದ ಮರುಕ್ಷಣವೇ ಅದನ್ನು ಪ್ರತಿಭಟಿಸಬೇಕು. ಮೌನ ನಾಶಕ್ಕೆ ದಾರಿಮಾಡಿಕೊಡುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

Story first published: Tuesday, July 17, 2018, 13:48 [IST]
Other articles published on Jul 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X