ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಭಾರತ ಪರ ಇತಿಹಾಸ ನಿರ್ಮಿಸಿದ ವೇಗಿ ಮೊಹಮ್ಮದ್ ಶಮಿ!

ICC World Cup 2019 : ಶಮಿಯಿಂದಾಗಿ ಭಾರತ ತಂಡಕ್ಕೆ ಮತ್ತೊಂದು ಕಿರೀಟ..? | Oneindia Kannada
Mohammed Shami creates history, becomes 2nd Indian to take World Cup hat-trick

ಸೌತಾಂಪ್ಟನ್, ಜೂನ್ 23: ಅಂತಿಮ ಓವರ್‌ನಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 11 ರನ್ ರೋಚಕ ಜಯ ಗಳಿಸಿದೆ. ಶನಿವಾರ (ಜೂನ್ 22) ನಡೆದ ಪಂದ್ಯದಲ್ಲಿ ಶಮಿ ಹ್ಯಾಟ್ರಿಕ್ ಸಾಧನೆಗಾಗಿ ಭಾರತ ಪರ ಇತಿಹಾಸ ಬರೆದಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಶನಿವಾರ ಭಾರತ vs ಅಫ್ಘಾನಿಸ್ತಾನ ನಡುವಿನ ವಿಶ್ವಕಪ್‌ 28ನೇ ಪಂದ್ಯದಲ್ಲಿ ಶಮಿ 9.5 ಓವರ್‌ಗೆ 40 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಇದರಲ್ಲಿ ಅಂತಿಮ ಓವರ್‌ನ ಹ್ಯಾಟ್ರಿಕ್ ವಿಕೆಟ್‌ ಕೂಡ ಸೇರಿತ್ತು. ಈ ಬೌಲಿಂಗ್ ಸಾಧನೆಯೊಂದಿಗೆ ಶಮಿ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಆಗಿ ಇತಿಹಾಸ ನಿರ್ಮಿಸಿದ್ದಾರೆ.

ವಿಶ್ವಕಪ್: ವೆಂಗ್‌ಸರ್ಕಾರ್ ಪ್ರಕಾರ ಭಾರತದ ಪಾಲಿಗೆ ಅಪಾಯಕಾರಿ ತಂಡವಿದು!ವಿಶ್ವಕಪ್: ವೆಂಗ್‌ಸರ್ಕಾರ್ ಪ್ರಕಾರ ಭಾರತದ ಪಾಲಿಗೆ ಅಪಾಯಕಾರಿ ತಂಡವಿದು!

ಭಾರತ-ಅಫ್ಘಾನ್ ಪಂದ್ಯ, ಶಮಿ ಸಾಧನೆ, ವಿಶ್ವಕಪ್ ಹ್ಯಾಟ್ರಿಕ್ ದಾಖಲೆಗಳಿಗೆ ಸಂಬಂಧಿಸಿ ಇಲ್ಲೊಂದಿಷ್ಟು ಕುತೂಹಲಕಾರಿ ಅಂಶಗಳಿವೆ.

ಕೊನೆ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್

ಕೊನೆ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್

ಭಾರತ vs ಅಫ್ಘಾನಿಸ್ತಾನ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದಿದ್ದು ಮೊಹಮ್ಮದ್ ನಬಿ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 224 ರನ್ ಬಾರಿಸಿತ್ತು. 225 ರನ್ ಗುರಿ ಬೆಂಬತ್ತಿದ ಅಫ್ಘಾನ್‌ಗೆ ಗೆಲ್ಲಲು ಅಂತಿಮ ಓವರ್‌ನಲ್ಲಿ 16 ರನ್‌ಗಳ ಅಗತ್ಯವಿತ್ತು. ಅದರಲ್ಲೂ 52 ರನ್ ಬಾರಿಸಿ ತಂಡದ ಗೆಲುವಿನ ಹೊರೆ ಹೊತ್ತಿದ್ದ ಆಲ್ ರೌಂಡರ್ ಮೊಹಮ್ಮದ್ ನಬಿ ಇನ್ನೂ ಕ್ರೀಸ್‌ನಲ್ಲಿದ್ದರು. ಕೊನೆಯ ಓವರ್ ಎಸೆಯಲು ಶಮಿ ಬಂದರು. ಅಫ್ಘಾನ್ 213 ರನ್ ವೇಳೆ 49.3 ಓವರ್‌ನಲ್ಲಿ ನಬಿ ಔಟಾದರು. ಮುಂದಿನ ಎಸೆತಕ್ಕೆ ಅಫ್ತಾಬ್ ಆಲಂ ವಿಕೆಟ್ ಉರುಳಿತು. ಅನಂತರ ಮುಜೀಬ್ ಉರ್ ರಹ್ಮಾನ್ ಬೌಲ್ಡ್ ಆದರು. ಅಲ್ಲಿಗೆ ಕತೆ ಫಿನಿಷ್. ಭಾರತ ಜಯದ ಕೇಕೆ ಹಾಕಿತು.

50ನೇ ಗೆಲುವಿನ ಮೈಲಿಗಲ್ಲು

50ನೇ ಗೆಲುವಿನ ಮೈಲಿಗಲ್ಲು

ಅಫ್ಘಾನ್ ವಿರುದ್ಧ 11 ರನ್ ರೋಚಕ ಜಯ ಗಳಿಸಿದ ಭಾರತ ಮತ್ತೊಂದು ಅಪರೂಪದ ದಾಖಲೆಗೂ ಕಾರಣವಾಗಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಏಕದಿನ ವಿಶ್ವಕಪ್‌ನಲ್ಲಿ ಒಟ್ಟು 50 ಗೆಲುವುಗಳ ದಾಖಲೆ ಬರೆದಿದೆ. ಅದೂ ಅಲ್ಲದೆ ಐಸಿಸಿ ವಿಶ್ವಕಪ್ 2019ರಲ್ಲಿ ಒಂದೂ ಸೋಲು ಕಂಡಿರದ ತಂಡವಾಗಿ ಕೊಹ್ಲಿ ಬಳಗ ಗುರುತಿಸಿಕೊಂಡಿದೆ. ಭಾರತ ಆಡಿರುವ 5ರಲ್ಲಿ 4ರಲ್ಲಿ ಗೆದ್ದು 1 ಪಂದ್ಯ ಟೈ ಮಾಡಿಕೊಂಡಿದೆ. ಇತ್ತ ಅಫ್ಘಾನಿಸ್ತಾನ ಮಾತ್ರ ಆಡಿರುವ 6ರಲ್ಲೂ ಸೋತಂತಾಗಿದೆ.

ಚೇತನ್ ಶರ್ಮಾ ಮೊದಲಿಗ

ಚೇತನ್ ಶರ್ಮಾ ಮೊದಲಿಗ

ವಿಶ್ವಕಪ್‌ನಲ್ಲಿ ಭಾರತದ ಪರ ಮತ್ತು ವಿಶ್ವದಲ್ಲೇ ಹ್ಯಾಟ್ರಿಕ್ ವಿಕೆಟ್ ಸಾಧನೆ ಮೆರೆದವರಲ್ಲಿ ಚೇತನ್ ಶರ್ಮಾ ಮೊದಲಿಗರು. 1987ರಲ್ಲಿ ನಡೆದ ವಿಶ್ವಕಪ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಶರ್ಮಾ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಅದಾಗಿ ಸುಮಾರು 32 ವರ್ಷಗಳ ನಂತರ ಶಮಿ ಈ ಅಪರೂಪದ ಸಾಧನೆ ಮಾಡಿದ್ದಾರೆ. ಅಫ್ಘಾನ್ ವಿರುದ್ಧ ಶಮಿ ಅವರು ಹಝರತುಲ್ಲ ಝಝಾಯ್, ಮೊಹಮ್ಮದ್ ನಬಿ, ಅಫ್ತಾಬ್ ಆಲಂ, ಮುಜೀಬ್ ಉರ್ ರಹ್ಮಾನ್ ವಿಕೆಟ್‌ಗಳನ್ನು ಕೆಡವಿದ್ದರು.

ಶಮಿ 10ನೇ ಸಾಧಕ

ಶಮಿ 10ನೇ ಸಾಧಕ

ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮೊದಲು ಮೊಡಿದ್ದು ಭಾರತೀಯ ಚೇತನ್ ಶರ್ಮಾ ಅಂತ ಆಗಲೇ ಹೇಳಿದ್ದೇವೆ. ಶರ್ಮಾ ನಂತರ ಪಾಕಿಸ್ತಾನದ ಶಕ್ಲೇನ್ ಮುಷ್ತಾಕ್ (1999), ಶ್ರೀಲಂಕಾದ ಚಮಿಂಡ ವಾಸ್ (2003), ಆಸೀಸ್ ವೇಗಿ ಬ್ರೆಟ್ ಲೀ (2003), ಶ್ರೀಲಂಕಾದ ಲಸಿತ್ ಮಾಲಿಂಗ (2007-4 ಎಸೆತಕ್ಕೆ ಸತತ 4 ವಿಕೆಟ್), ವೆಸ್ಟ್ ಇಂಡೀಸ್‌ನ ಕೆಮರ್‌ರೋಚ್ (2011), ಲಸಿತ್ ಮಾಲಿಂಗ (2011), ಇಂಗ್ಲೆಂಡ್‌ನ ಸ್ಟೀವನ್ ಫಿನ್ (2015), ದಕ್ಷಿಣ ಆಫ್ರಿಕಾದ ಜೆಪಿ ಡುಮಿನಿ (2015) ಈ ಸಾಧನೆ ಮಾಡಿದ್ದರು. ಹೀಗಾಗಿ ವಿಶ್ವ ಮಟ್ಟದಲ್ಲಿ ಹ್ಯಾಟ್ರಿಕ್ ಸಾಧನೆಗಾಗಿ ಶಮಿ 10ನೇ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಾರೆ.

Story first published: Sunday, June 23, 2019, 7:32 [IST]
Other articles published on Jun 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X