ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ನಾಯಕತ್ವದ ಈ ಗುಣವೇ ಪ್ರತಿಯೊಬ್ಬ ಬೌಲರ್‌ನ ಫೇವರಿಟ್ : ಮೊಹಮ್ಮದ್ ಶಮಿ

Mohammed Shami lauds captaincy of Rohit Sharma

ಟೀಮ್ ಇಂಡಿಯಾ ಜೂನ್ ಮೊದಲನೇ ವಾರ ಇಂಗ್ಲೆಂಡ್‌ಗೆ ಹಾರಲಿದ್ದು, ಜೂನ್ 18ರಿಂದ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವನ್ನು ಮತ್ತು ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ.

'ಪೃಥ್ವಿ ಶಾ ಸೆಹ್ವಾಗ್ ಇದ್ದಂತೆ ಆತನನ್ನು ತಂಡದಿಂದ ಹೊರಹಾಕಿದ್ದು ತಪ್ಪು''ಪೃಥ್ವಿ ಶಾ ಸೆಹ್ವಾಗ್ ಇದ್ದಂತೆ ಆತನನ್ನು ತಂಡದಿಂದ ಹೊರಹಾಕಿದ್ದು ತಪ್ಪು'

ಈ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗುವುದರ ಮೂಲಕ 6 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಮತ್ತೆ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಕಳೆದ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಗಾಯಕ್ಕೊಳಗಾಗಿದ್ದ ಮೊಹಮ್ಮದ್ ಶಮಿ ಗಾಯದಿಂದ ಚೇತರಿಸಿಕೊಂಡಿದ್ದು ಮತ್ತೆ ಟೀಮ್ ಇಂಡಿಯಾ ತಂಡವನ್ನು ಸೇರಿಕೊಂಡಿದ್ದಾರೆ. ಇದೀಗ ಮುಂಬರುವ ಸರಣಿ ಕುರಿತು ಮಾತನಾಡಿರುವ ಮೊಹಮ್ಮದ್ ಶಮಿ ರೋಹಿತ್ ಶರ್ಮಾ ಅವರ ಬಗ್ಗೆ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮಾಜಿ ಕ್ರಿಕೆಟರ್ ತಾಯಿಯ ಚಿಕಿತ್ಸೆಗೆ ಹಣದ ಕೊರತೆ ಎಂದ ಕೂಡಲೇ ನೆರವಿಗೆ ಧಾವಿಸಿದ ಕೊಹ್ಲಿಮಾಜಿ ಕ್ರಿಕೆಟರ್ ತಾಯಿಯ ಚಿಕಿತ್ಸೆಗೆ ಹಣದ ಕೊರತೆ ಎಂದ ಕೂಡಲೇ ನೆರವಿಗೆ ಧಾವಿಸಿದ ಕೊಹ್ಲಿ

'ಒಬ್ಬ ಬೌಲರ್ ಆಗಿ ನಾನು ರೋಹಿತ್ ಶರ್ಮಾ ಅವರ ಬಳಿ ಹೋದಾಗಲೆಲ್ಲ ನನಗೆ ಸಕಾರಾತ್ಮಕ ಉತ್ತರಗಳನ್ನು ನೀಡಿ ಉತ್ತಮ ಬೌಲಿಂಗ್ ಮಾಡಲು ನೆರವಾಗುತ್ತಾರೆ. ರೋಹಿತ್ ಶರ್ಮಾ ಯಾವಾಗಲೂ ಬೌಲರ್‌ಗಳ ತಲೆಯಲ್ಲಿ ಯಾವ ಉಪಾಯಗಳಿರುತ್ತವೋ ಅವುಗಳನ್ನೇ ಅನುಸರಿಸಲು ಉತ್ತೇಜಿಸುತ್ತಾರೆ ಹಾಗೂ ಬೌಲರ್‌ಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತಾರೆ, ಹೀಗಾಗಿ ಬೌಲರ್‌ಗಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ' ಎಂದು ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಮೊಹಮ್ಮದ್ ಶಮಿ ಹೊಗಳಿದ್ದಾರೆ.

Story first published: Wednesday, May 19, 2021, 21:06 [IST]
Other articles published on May 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X