ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಸರಣಿಯಿಂದ ಹೊರಬಿದ್ದ ಶಮಿ: ಇಶಾಂತ್ ತಂಡ ಸೇರಿಕೊಳ್ಳಲಿ ಎಂದ ಗವಾಸ್ಕರ್

Mohammed Shami ruled out: Sunil Gavaskar urges India to send Ishant Sharma to Australia

ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋಲು ಕಂಡಿದೆ. ಈ ಸೋಲಿನ ಜೊತೆಗೆ ಟೀಮ್ ಇಂಡಿಯಾಗೆ ಮತ್ತೊಂದು ಆಘಾತವೂ ಎದುರಾಗಿದೆ. ಬ್ಯಾಟಿಂಗ್ ವೇಳೆ ಕೈಗೆ ಚೆಂಡು ಬಡಿದ ಕಾರಣ ಮೊಹಮ್ಮದ್ ಶಮಿ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಹೋಗಾಗಿ ಟೆಸ್ಟ್ ಸರಣಿಯ ಉಳಿದ ಮೂರು ಪಂದ್ಯಗಳಿಂದ ಶಮಿ ಹೊರಗುಳಿಯಲಿದ್ದಾರೆ.

ಈ ಮಧ್ಯೆ ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮೊಹಮಮದ್ ಶಮಿ ಸ್ಥಾನಕ್ಕೆ ಇಶಾಂತ್ ಶರ್ಮಾ ಸೇರ್ಪಡೆಗೊಳಿಸಲಿ ಎಂದಿದ್ದಾರೆ. ಇಶಾಂತ್ ಶರ್ಮಾ ಫಿಟ್ ಆಗಿದ್ದರೆ ಭಾರತ ಖಂಡಿತಾ ಈ ಅವಕಾಶವನ್ನು ಬಳಸಿಕೊಳ್ಳಬೇಕು. ಅವರನ್ನು ತಕ್ಷಣವೇ ಆಸ್ಟ್ರೇಲಿಯಾಗೆ ಕಳುಹಿಸಿಕೊಡಬೇಕು ಎಂದು ಗವಾಸ್ಕರ್ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಕಳಪೆ ಬ್ಯಾಟಿಂಗ್‌ಗೆ ಸೋಲಿನ ಬೆಲೆತೆತ್ತ ಭಾರತಆಸ್ಟ್ರೇಲಿಯಾ ವಿರುದ್ಧ ಕಳಪೆ ಬ್ಯಾಟಿಂಗ್‌ಗೆ ಸೋಲಿನ ಬೆಲೆತೆತ್ತ ಭಾರತ

ಇಶಾಂತ್ ಶರ್ಮಾ ಅಲಭ್ಯತೆ ಟೀಮ್ ಇಂಡಿಯಾಗೆ ಬಹುವಾಗಿ ಕಾಡುತ್ತಿದೆ. ಇಶಾಂತ್ ಶರ್ಮಾ ದಿನಕ್ಕೆ 20 ಓವರ್‌ಗಳಷ್ಟು ಬೌಲಿಂಗ್ ಮಾಡಲು ಸಮರ್ಥರಾಗಿದ್ದರೆ ಅವರನ್ನು ತಂಡದ ಮ್ಯಾನೇಜ್‌ಮೆಂಟ್ ಆಸ್ಟ್ರೇಲಿಯಾಗೆ ಕಳುಹಿಸಬೇಕು ಎಂದು ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್ ಸಂದರ್ಭದಲ್ಲಿ ಇಶಾಂತ್ ಶರ್ಮಾ ಗಾಯಗೊಂಡಿದ್ದು ಬಳಿಕ ಟೂರ್ನಿಯಿಂದಲೇ ಹೊರಬಿದ್ದರು. ಅದಾದ ಬಳಿಕ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕಾಗಿ ಪರಿಗಣಿಸಲು ಬಯಸಿತ್ತಾದರೂ ಫೋಇಟ್‌ನೆಸ್ ಪರೀಕ್ಷೆಯ ಬಳಿಕ ಅವರಿಗೆ ವಿಶ್ರಾಂತಿಯನ್ನು ಮುಂದುವರಿಸಲು ತೀರ್ಮಾನಿಸಲಾಗುತ್ತು. ಈಗ ಶಮಿ ಕೂಡ ಸರಣಿಯಿಮದ ಹೊರಬಿದ್ದ ಕಾರಣ ತಂಡಕ್ಕೆ ಕರೆಸಿಕೊಳ್ಳಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅತ್ಯಧಿಕ ರನ್ ಬಾರಿಸಿದ ಅದೇ ದಿನ ಟೀಮ್ ಇಂಡಿಯಾ ಅತೀ ಕಡಿಮೆ ರನ್!ಅತ್ಯಧಿಕ ರನ್ ಬಾರಿಸಿದ ಅದೇ ದಿನ ಟೀಮ್ ಇಂಡಿಯಾ ಅತೀ ಕಡಿಮೆ ರನ್!

"ಶಮಿ ಗಾಯಗೊಂಡಿರುವುದು ತಂಡದ ದೊಡ್ಡ ಸಮಸ್ಯೆಯಾಗಲಿದೆ. ಆತನಿಕೆ ವಿಕೆಟ್ ಪಡೆಯುವ ತಂತ್ರಗಳು ತಿಳಿದಿದೆ. ಬೌನ್ಸರ್ ಹಾಗೂ ಯಾರ್ಕರ್‌ಗಳ ಮೂಲಕ ಎದುರಾಳಿಗೆ ಆತ ಆಘಾತ ನೀಡಬಲ್ಲರು. ಆತ ತಂಡದ ಪರವಾಗಿ ಆಡದಿದ್ದರೆ ಅದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

Story first published: Sunday, December 20, 2020, 9:55 [IST]
Other articles published on Dec 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X