ಇಂಗ್ಲೆಂಡ್‌ ವಿರುದ್ಧ ಭಾರತದ ಬೌಲರ್‌ಗಳ ಗೆಲುವಿನ ರಹಸ್ಯ ಬಿಚ್ಚಿಟ್ಟ ಮೊಹಮ್ಮದ್ ಸಿರಾಜ್

ಭಾರತ-ಇಂಗ್ಲೆಂಡ್ ಅಂತಿಮ ಹಾಗೂ ಐದನೇ ಟೆಸ್ಟ್ ಪಂದ್ಯ ರೋಚಕ ನಾಲ್ಕನೇ ದಿನದತ್ತ ಸಾಗುತ್ತಿದೆ. ಮೂರು ದಿನಗಳ ಅಂತ್ಯದಲ್ಲಿ ಭಾರತ ಸ್ಪಷ್ಟ ಮುನ್ನಡೆ ಸಾಧಿಸಬಹುದು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್ ಗಳಿಸಿದಾಗ, ಉತ್ತರವಾಗಿ ಇಂಗ್ಲೆಂಡ್ 284 ರನ್‌ಗಳಿಗೆ ಆಲೌಟ್ ಆಗಿತ್ತು. ಮೊದಲ ಇನಿಂಗ್ಸ್‌ನಲ್ಲಿ 132 ರನ್‌ಗಳ ಮುನ್ನಡೆ ಸಾಧಿಸಿದ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ ಮೂರು ವಿಕೆಟ್‌ಗಳ ನಷ್ಟಕ್ಕೆ 125 ರನ್ ಗಳಿಸಿದೆ.

ಇನ್ನು ಏಳು ವಿಕೆಟ್‌ಗಳು ಬಾಕಿ ಇರುವಂತೆಯೇ ಭಾರತ 257 ರನ್‌ಗಳ ಮುನ್ನಡೆ ಸಾಧಿಸಿದೆ. ನಾಲ್ಕನೇ ದಿನದಲ್ಲಿ ಭಾರತ ದೊಡ್ಡ ಮುನ್ನಡೆಯ ನಿರೀಕ್ಷೆಯಲ್ಲಿದೆ. ನ್ಯೂಜಿಲೆಂಡ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ನಂತರ ಭಾರತವನ್ನು ಸೋಲಿಸಿ ಸರಣಿಯನ್ನು ಸಮಬಲಗೊಳಿಸುವ ನಿರೀಕ್ಷೆಯನ್ನು ಇಂಗ್ಲೆಂಡ್ ಹೊಂದಿತ್ತು, ಆದರೆ ಇಂಗ್ಲೆಂಡ್ ಬ್ಯಾಟಿಂಗ್ ಲೈನ್ ಅಪ್ ಭಾರತದ ವೇಗಿಗಳ ಮುಂದೆ ನಡುಗಿತು. ಜಾನಿ ಬೈರ್ ಸ್ಟೋವ್ (106) ಶತಕ ಸಾಧನೆ ಹೊರತುಪಡಿಸಿದರೆ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ನಿರಾಸೆ ಮೂಡಿಸಿದರು.

ನ್ಯೂಜಿಲೆಂಡ್ ವಿರುದ್ಧ ಮಿಂಚಿದ್ದ ಇಂಗ್ಲೆಂಡ್ ಭಾರತದೆದುರು ಮಂಕಾಯಿತು

ನ್ಯೂಜಿಲೆಂಡ್ ವಿರುದ್ಧ ಮಿಂಚಿದ್ದ ಇಂಗ್ಲೆಂಡ್ ಭಾರತದೆದುರು ಮಂಕಾಯಿತು

ನ್ಯೂಜಿಲೆಂಡ್ ವೇಗಿಗಳ ವಿರುದ್ಧ ಇಂಗ್ಲೆಂಡ್ ತೋರಿದ ಪ್ರಾಬಲ್ಯವನ್ನು ಭಾರತೀಯ ವೇಗಿಗಳ ವಿರುದ್ಧ ಪುನರಾವರ್ತಿಸಲು ಅವರಿಗೆ ಸಾಧ್ಯವಾಗಲಿಲ್ಲ. ಇದೀಗ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಕಿವೀಸ್ ವೇಗಿಗಳ ವಿರುದ್ಧ ಮಿಂಚಿದ ಇಂಗ್ಲೆಂಡ್, ಭಾರತೀಯ ವೇಗಿಗಳ ವಿರುದ್ಧ ನಿರಾಸೆ ಮೂಡಿಸಿದ್ದಕ್ಕೆ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ. ಸಿರಾಜ್ ನಾಲ್ಕು ವಿಕೆಟ್ ಕಬಳಿಸಿ ಪಂದ್ಯದ ಹೈಲೈಟ್ ಎನಿಸಿಕೊಂಡರು.

"ಭಾರತೀಯ ಬೌಲರ್‌ಗಳನ್ನು ನ್ಯೂಜಿಲೆಂಡ್ ಬೌಲರ್‌ಗಳಿಂದ ಪ್ರತ್ಯೇಕಿಸುವುದು ಅಗತ್ಯವಾಗಿದೆ. ಭಾರತದ ಎಲ್ಲಾ ಬೌಲರ್‌ಗಳು 140 ಪ್ಲಸ್ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಭಾರತೀಯ ವೇಗಿಗಳಿಗೆ ಅದನ್ನು ಮಾಡುವ ಸಾಮರ್ಥ್ಯವಿದೆ. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಆಡಿದ ಅನುಭವ ನಮಗೂ ಇದೆ. ಬೌಲರ್ ಆಗಿ, ನೀವು ತಾಳ್ಮೆಯಿಂದಿರಬೇಕು. ಬೈಸ್ಟ್ರೋವ್‌ ಉತ್ತಮ ಫಾರ್ಮ್‌ನಲ್ಲಿದ್ದಾರೆ'' ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.

IND vs ENG: ಭಾರತದ ಬಿಗಿ ಹಿಡಿತದಲ್ಲಿ ಪಂದ್ಯ: 4ನೇ ದಿನ ವಿಲನ್ ಆಗಲಿದ್ದಾನಾ ಮಳೆರಾಯ?

ನಮ್ಮ ಯೋಜನೆಗೆ ತಕ್ಕಂತೆ ಬೌಲಿಂಗ್ ಮಾಡಿದ್ದೇವೆ!

ನಮ್ಮ ಯೋಜನೆಗೆ ತಕ್ಕಂತೆ ಬೌಲಿಂಗ್ ಮಾಡಿದ್ದೇವೆ!

ನ್ಯೂಜಿಲೆಂಡ್ ಸರಣಿಯ ನಂತರ ಅವರು ದಾಳಿ ಮತ್ತು ಆಕ್ರಮಣಾಕಾರಿ ಹೊಡೆತಗಳನ್ನು ಆಡುತ್ತಿದ್ದಾರೆ. ಆದ್ದರಿಂದ ಅವರು ತುಂಬಾ ಆತ್ಮವಿಶ್ವಾಸದಿಂದ ಇರುತ್ತಾರೆ ಎಂದು ನಮಗೆ ತಿಳಿದಿತ್ತು. ಬ್ಯಾಟ್ಸ್ ಮನ್ ಎಷ್ಟೇ ದಾಳಿ ಮಾಡಿದರೂ ಪರವಾಗಿಲ್ಲ, ನಾವು ಮಾಡಿದ್ದು ತಂಡದ ಯೋಜನೆಗೆ ಅಂಟಿಕೊಳ್ಳುವುದು ಎಂದು ಸಿರಾಜ್ ಹೇಳಿದ್ದಾರೆ.

ಸಿರಾಜ್ ಅವರ ಬೌಲಿಂಗ್ ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿತ್ತು. ಇಂಗ್ಲೆಂಡ್‌ನ ಮಾಜಿ ನಾಯಕ ಹಾಗೂ ಸೂಪರ್ ಬ್ಯಾಟ್ಸ್‌ಮನ್ ಜೋ ರೂಟ್ ಅವರನ್ನು ಸಿರಾಜ್ ಮೊದಲು ಔಟ್‌ ಮಾಡಿದರು. ಏಕೆಂದರ್ ರೂಟ್ ಪಂದ್ಯದ ಫಲಿತಾಂಶದ ಮೇಲೆ ಹೆಚ್ಚು ಪ್ರಭಾವ ಬೀರುವ ಬ್ಯಾಟರ್ ಆಗಿದ್ದಾರೆ. ಆನಂತರ ಸಿರಾಜ್ ಸ್ಟುವರ್ಟ್ ಬ್ರಾಡ್, ಸ್ಯಾಮ್ ಬಿಲ್ಲಿಂಗ್ಸ್ ಮತ್ತು ಮ್ಯಾಥ್ಯೂ ಪಾಟ್ಸ್ ಅವರನ್ನು ಔಟ್‌ ಮಾಡಿದರು.

ಕೊಹ್ಲಿ ಸ್ಲೆಡ್ಜಿಂಗ್: ನನ್ನ ಹಾಗೂ ವಿರಾಟ್ ನಡುವೆ ಯಾವುದೇ ಒಳಜಗಳವಿಲ್ಲ: ಜಾನಿ ಬೈಸ್ಟ್ರೋವ್

ಪಿಚ್ ಕುರಿತು ಮೊಹಮ್ಮದ್ ಸಿರಾಜ್ ಹೇಳಿಕೆ

ಪಿಚ್ ಕುರಿತು ಮೊಹಮ್ಮದ್ ಸಿರಾಜ್ ಹೇಳಿಕೆ

ಒಂದು ಪ್ರದೇಶದಲ್ಲಿ ಮೇಲೆ ನಿರಂತರ ದಾಳಿ ನಡೆಸಲು ಯೋಜನೆ ರೂಪಿಸಲಾಗಿತ್ತು ಎಂದು ಮೊಹಮ್ಮದ್ ಸಿರಾಜ್ ಬಹಿರಂಗವಾಗಿ ಹೇಳಿದ್ದಾರೆ. "ಆರಂಭದಲ್ಲಿ ಪಿಚ್ ಬೌಲಿಂಗ್ ಅನ್ನು ಬೆಂಬಲಿಸಿತು ಆದರೆ ನಂತರ ಅದು ಫ್ಲಾಟ್ ಪಿಚ್ ಆಯಿತು. ಒಂದು ಪ್ರದೇಶದಲ್ಲಿ ದಾಳಿ ನಡೆಸುವುದು ತಂಡದ ಯೋಜನೆಯಾಗಿತ್ತು. ಮೋಡಗಳು ಸರಿದಂತೆ, ಬೌನ್ಸ್ ಕಡಿಮೆಯಾಯಿತು ಮತ್ತು ಬ್ಯಾಟ್ಸ್‌ಮನ್‌ಗಳು ಹೆಚ್ಚು ಪ್ರಾಬಲ್ಯ ಸಾಧಿಸಿದರು'' ಎಂದು ಸಿರಾಜ್ ಹೇಳಿದರು.

ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್‌ಗಳೊಂದಿಗೆ ಇಂಗ್ಲೆಂಡ್‌ನ ಅಗ್ರ ಕ್ರಮಾಂಕವನ್ನು ಮುರಿದರು, ಮೊಹಮ್ಮದ್ ಶಮಿ ಎರಡು ಮತ್ತು ಶಾರ್ದೂಲ್ ಠಾಕೂರ್ ಒಂದು ವಿಕೆಟ್ ಪಡೆದರು. ರಕ್ಷಣಾತ್ಮಕ ಕ್ರಿಕೆಟ್ ಶೈಲಿಯಿಂದ ಆಕ್ರಮಣಕಾರಿ ಕ್ರಿಕೆಟ್ ಶೈಲಿಗೆ ಬಂದ ಇಂಗ್ಲೆಂಡ್ ತಂಡದ ಲೆಕ್ಕಾಚಾರಗಳೆಲ್ಲವೂ ಭಾರತದ ವೇಗಿಗಳ ಮುಂದೆ ನೆಲಕಚ್ಚಿದವು.

ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 400 ಪ್ಲಸ್ ಮೊತ್ತವನ್ನು ತಲುಪಬಹುದೇ ಎಂದು ಎಲ್ಲರೂ ಎದುರು ನೋಡುತ್ತಿದ್ದಾರೆ. ಹೀಗಾದರೆ ಇಂಗ್ಲೆಂಡ್‌ಗೆ ಕಠಿಣ ಪರಿಸ್ಥಿತಿ ಎದುರಾಗಲಿದೆ. ನಾಲ್ಕು ಪಂದ್ಯಗಳನ್ನು ಪೂರ್ಣಗೊಳಿಸಿರುವ ಭಾರತ 2-1 ರಿಂದ ಮುನ್ನಡೆ ಸಾಧಿಸಿದೆ. ಆದ್ದರಿಂದ ಐದನೇ ಟೆಸ್ಟ್‌ನಲ್ಲಿ ಡ್ರಾ ಸಾಧಿಸಿದರು ಸಹ, ಇಂಗ್ಲೆಂಡ್‌ನಲ್ಲಿ ಭಾರತ ಟೆಸ್ಟ್ ಸರಣಿ ಗೆಲ್ಲಬಹುದು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, July 4, 2022, 15:20 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X