ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಎಲ್ಲಾ ಪತ್ರಿಕೆಗಳಲ್ಲೂ ನಿನ್ನ ಚಿತ್ರವಿದೆ': ಅನಾರೋಗ್ಯ ಪೀಡಿತ ಅಪ್ಪನ ನೆನೆದ ಸಿರಾಜ್

Mohammed Siraj’s father was hospitalised just before his magical spell against Kolkata Knight Riders

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಗಿ ಮೊಹಮ್ಮದ್ ಸಿರಾಜ್ ತನ್ನ ಮಾಂತ್ರಿಕ ಪ್ರದರ್ಶನದಿಂದ ಬೆರಗು ಮೂಡಿಸಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ 39ನೇ ಪಂದ್ಯದಲ್ಲಿ ಸಿರಾಜ್‌ ದಾಳಿಯಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಟಾಪ್ ಬ್ಯಾಟಿಂಗ್ ಆರ್ಡರ್ ತತ್ತರಿಸಿತ್ತು. ತಂಡದ ಖಾತೆಯಲ್ಲಿ 14 ರನ್‌ಗಳು ಇರುವಾಗ ಅಂದರೆ 3.3ನೇ ಓವರ್‌ನಲ್ಲಿ ಕೆಕೆಆರ್ 4 ವಿಕೆಟ್‌ಗಳನ್ನು ಕಳೆದುಕೊಂಡು ಪರದಾಡಿತ್ತು.

ಎಂಎಸ್ ಧೋನಿಯ ಸಿಎಸ್‌ಕೆ ಈಗಲೂ ಪ್ಲೇ ಆಫ್‌ಗೆ ಪ್ರವೇಶಿಸಬಲ್ಲದು!ಎಂಎಸ್ ಧೋನಿಯ ಸಿಎಸ್‌ಕೆ ಈಗಲೂ ಪ್ಲೇ ಆಫ್‌ಗೆ ಪ್ರವೇಶಿಸಬಲ್ಲದು!

ಅಕ್ಟೋಬರ್ 21ರಂದು ಅಬುಧಾಬಿ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್‌ನ ರಾಹುಲ್ ತ್ರಿಪಾಠಿ ಅವರನ್ನು 1 ರನ್‌ಗೆ, ನಿತೀಶ್ ರಾಣಾ ಅವರನ್ನು 0 ರನ್‌ಗೆ, ಟಾಮ್ ಬ್ಯಾಂಟನ್ ಅವರನ್ನು 10 ರನ್‌ಗೆ ಔಟ್ ಮಾಡಿದ್ದರು.

ಕಡಿಮೆ ರನ್‌ ಗಳಿಸಿಯೂ ಪಂಜಾಬ್ ಪಂದ್ಯ ಗೆದ್ದಿದ್ದು ಇದೇ ಮೊದಲಲ್ಲಕಡಿಮೆ ರನ್‌ ಗಳಿಸಿಯೂ ಪಂಜಾಬ್ ಪಂದ್ಯ ಗೆದ್ದಿದ್ದು ಇದೇ ಮೊದಲಲ್ಲ

ಅನಿರೀಕ್ಷಿತ ಅದ್ಭುತ ಪ್ರದರ್ಶನ ನೀಡಿದ್ದ ಸಿರಾಜ್, ಆವತ್ತು ಆರ್‌ಸಿಬಿ ಪಾಲಿನ ಹೀರೋ ಅನ್ನಿಸಿದ್ದರು. ಆದರೆ ಆ ದಿನ ಸಿರಾಜ್ ನಿಜಕ್ಕೂ ಖುಷಿಯಲ್ಲಿರಲಿಲ್ಲ. ಆವತ್ತು ನಡೆದಿದ್ದೇನೆಂದು ಸಿರಾಜ್ ಹೇಳಿಕೊಂಡಿದ್ದಾರೆ.

ಹೀರೋ ಆಗಿ ಮಿನುಗಿದ್ದ ಸಿರಾಜ್

ಹೀರೋ ಆಗಿ ಮಿನುಗಿದ್ದ ಸಿರಾಜ್

ಸಿರಾಜ್ ಮಾರಕ ದಾಳಿಯಿಂದಾಗಿ ಆವತ್ತು ಕೆಕೆಆರ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 84 ರನ್ ಬಾರಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂದ್ಯವನ್ನು ಭರ್ಜರಿ 8 ವಿಕೆಟ್‌ಗಳಿಂದ ಗೆದ್ದಿತ್ತು. 13.3ನೇ ಓವರ್‌ಗೆ ಪಂದ್ಯ ಮುಗಿಸಿಬಿಟ್ಟಿತ್ತು. ಆರ್‌ಸಿಬಿಯ ಈ ಗೆಲುವಿನ ಬಳಿಕ ಸಿರಾಜ್ ಹೀರೋ ಆಗಿ ಮೆರೆದಿದ್ದರು.

ಅಪ್ಪನಿಗೆ ಅನಾರೋಗ್ಯ ಕಾಡುತ್ತಿದೆ

ಅಪ್ಪನಿಗೆ ಅನಾರೋಗ್ಯ ಕಾಡುತ್ತಿದೆ

ಪಂದ್ಯದ ಬಳಿಕ ಸಿರಾಜ್ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿದ್ದ ಸಿರಾಜ್, 'ಈ ದಿನಗಳಲ್ಲಿ ಅಪ್ಪನಿಗೆ ಹುಷಾರಿಲ್ಲ. ಅವರ ಶ್ವಾಸಕೋಶಗಳು ತೊಂದರೆಯಲ್ಲಿವೆ. ಅವರು ಉಸಿರಾಡಲು ಕಷ್ಟಪಡುತ್ತಿದ್ದಾರೆ. ನಾನು ನಿಜಕ್ಕೂ ಆ ಬಗ್ಗೆ ಚಿಂತೆಯಲ್ಲಿದ್ದೇನೆ. ಮನೆಗೆ ಹೋಗಿ ಆತನಿಗೆ ಧೈರ್ಯ ಹೇಳೋಣ ಅಂದರೆ ಸಾಧ್ಯವಾಗುತ್ತಿಲ್ಲ,' ಎಂದು ಸಿರಾಜ್ ಹೇಳಿದ್ದಾರೆ.

ಫೋನ್ ಮಾಡಿದಾಗೆಲ್ಲ ಅಪ್ಪ ಅಳುತ್ತಿದ್ದರು

ಫೋನ್ ಮಾಡಿದಾಗೆಲ್ಲ ಅಪ್ಪ ಅಳುತ್ತಿದ್ದರು

'ನಾನು ತಂದೆಯ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದೆ. ಆದರೆ ನಾನು ಯಾವಾಗ ಫೋನ್ ಮಾಡುತ್ತೇನೋ ಆವಾಗೆಲ್ಲ ಅಪ್ಪ ಅಳುತ್ತಿದ್ದರು. ಅಪ್ಪ ಅಳುವುದನ್ನು ನನ್ನಿಂದ ಸಹಿಸಲಾಗುತ್ತಿರಲಿಲ್ಲ. ಹೀಗಾಗಿ ನಾನು ಬೇಗನೆ ಕಾಲ್ ಕಟ್ ಮಾಡುತ್ತಿದ್ದೆ. ತಂದೆಯ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಕಳೆದ ಪಂದ್ಯದ ವೇಳೆ ಅಪ್ಪ ಆಸ್ಪತ್ರೆಗೆ ದಾಖಲಾಗಿದ್ದರು,' ಎಂದು ಸಿರಾಜ್ ವಿವರಿಸಿದ್ದಾರೆ.

ಪ್ರತೀ ಪತ್ರಿಕೆಯಲ್ಲೂ ನಿನ್ನ ಚಿತ್ರವಿದೆ

ಪ್ರತೀ ಪತ್ರಿಕೆಯಲ್ಲೂ ನಿನ್ನ ಚಿತ್ರವಿದೆ

'ಕೆಕೆಆರ್ ಪಂದ್ಯದ ಬಳಿಕ ನಾನು ಅಪ್ಪನಿಗೆ ಕಾಲ್ ಮಾಡಿದೆ, ಆಗ ಅಪ್ಪ ಮನೆಯಲ್ಲಿದ್ದರು. ಅದು ನನ್ನನ್ನು ಖುಷಿಪಡಿಸಿತು. ಅಪ್ಪನೂ ಖುಷಿಯಲ್ಲಿದ್ದರು. ಎಲ್ಲರೂ ನನಗೆ ಕಾಲ್ ಮಾಡಿ ನಿನ್ನ ಪ್ರದರ್ಶನದ ಬಗ್ಗೆಯೇ ಮಾತನಾಡುತ್ತಿದ್ದಾರೆ. ಹೈದರಾಬಾದ್‌ನ ಪ್ರತೀ ಪತ್ರಿಕೆಯಲ್ಲೂ ನಿನ್ನ ಚಿತ್ರವಿದೆ,' ಎಂದು ಅಪ್ಪ ಖುಷಿಯಲ್ಲಿ ಹೇಳಿಕೊಂಡಿದ್ದರು ಎಂದು ಸಿರಾಜ್ ಹೇಳಿದ್ದಾರೆ.

Story first published: Sunday, October 25, 2020, 14:46 [IST]
Other articles published on Oct 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X