WTC Final ಗೆಲ್ಲಬೇಕೆಂದರೆ ಆ ಸ್ಟಾರ್ ಬೌಲರ್‌ನ್ನು ತಂಡದಿಂದ ಕೈಬಿಟ್ಟು ಸಿರಾಜ್‌ಗೆ ಅವಕಾಶ ಕೊಡಿ: ಹರ್ಭಜನ್ ಸಿಂಗ್

RCB ಬೌಲರ್ ಸಿರಾಜ್ ಬೆಂಬಲಕ್ಕೆ ನಿಂತ ಹರ್ಭಜನ್ ಸಿಂಗ್ | Oneindia Kannada

ಜೂನ್ 18-22ರವರೆಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಇಂಗ್ಲೆಂಡ್‌ನ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಇದು ಟೆಸ್ಟ್ ಕ್ರಿಕೆಟ್‌ನ ವಿಶ್ವಕಪ್ ಎಂದೇ ಖ್ಯಾತಿಯನ್ನು ಪಡೆದುಕೊಳ್ಳುತ್ತಿದ್ದು ದಿನದಿಂದ ದಿನಕ್ಕೆ ಈ ಪಂದ್ಯದ ಮೇಲೆ ನಿರೀಕ್ಷೆಗಳು ಹೆಚ್ಚಾಗುತ್ತಿವೆ.

ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡದಲ್ಲಿರುವ 6 ಅನ್‌ಕ್ಯಾಪ್ಡ್ ಆಟಗಾರರಿವರು!

ಜೂನ್ 18ರಿಂದ ಆರಂಭವಾಗಲಿರುವ ಈ ಒಂದು ಮಹತ್ವದ ಪಂದ್ಯದ ಕುರಿತು ಈಗಾಗಲೇ ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದ್ದು ಕ್ರಿಕೆಟ್ ಪಂಡಿತರು ಹಾಗೂ ಮಾಜಿ ಕ್ರಿಕೆಟಿಗರು ತಮ್ಮ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ ಮತ್ತು ಯಾವ ಆಟಗಾರರನ್ನು ಈ ಪಂದ್ಯಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಚರ್ಚಿಸುತ್ತಿದ್ದಾರೆ. ಈ ರೀತಿಯ ಚರ್ಚೆಯಲ್ಲಿ ಅತಿಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಮೊಹಮ್ಮದ್ ಸಿರಾಜ್. ಹೌದು ಕಳೆದ ಕೆಲ ತಿಂಗಳುಗಳಿಂದ ಮೊಹಮ್ಮದ್ ಸಿರಾಜ್ ಟೆಸ್ಟ್ ಕ್ರಿಕೆಟ್‍ನಲ್ಲಿ ತೋರಿಸಿರುವ ಅತ್ಯದ್ಭುತ ಪ್ರದರ್ಶನವೇ ಈ ರೀತಿಯ ಚರ್ಚೆಗಳಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಐಪಿಎಲ್ ಮುಂದುವರೆದಾಗ ಚೆನ್ನೈ ತಂಡವನ್ನು ಕಾಡಲಿದೆ ಈ ಗಂಭೀರ ಸಮಸ್ಯೆ

ಈಗಾಗಲೇ ಸಾಕಷ್ಟು ಜನರು ಮೊಹಮ್ಮದ್ ಸಿರಾಜ್ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಅವಕಾಶವನ್ನು ಪಡೆದುಕೊಳ್ಳುವಂತಹ ಆಟಗಾರ ಎಂದು ಹೇಳಿಕೆಗಳನ್ನು ನೀಡಿದ್ದಾರೆ. ಈ ಸಾಲಿಗೆ ಇದೀಗ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಸೇರಿಕೊಂಡಿದ್ದು ಇಶಾಂತ್ ಶರ್ಮಾ ಬದಲು ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡಲೇಬೇಕು ಎಂದಿದ್ದಾರೆ. 'ಕಳೆದ ಕೆಲ ತಿಂಗಳುಗಳಿಂದ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಕಂಡುಬಂದಿರುವ ದೊಡ್ಡ ಪ್ರಮಾಣದ ಬದಲಾವಣೆ ಮತ್ತು ಅಭಿವೃದ್ಧಿಯನ್ನು ಗಮನಿಸಿದರೆ ಆತ ಅವಕಾಶಕ್ಕಾಗಿ ಹಾತೊರೆಯುತ್ತಿರುವ ಪ್ರತಿಭಾವಂತ ಬೌಲರ್ ಎಂಬುದು ತಿಳಿಯುತ್ತದೆ. ಇಶಾಂತ್ ಶರ್ಮ ಕೂಡ ಒಳ್ಳೆಯ ಬೌಲರ್ ಆದರೆ ಇಂತಹ ಮಹತ್ವದ ಪಂದ್ಯಕ್ಕೆ ಮಾರಕ ದಾಳಿ ಮಾಡುವ ಬೌಲರ್ ಬೇಕಾಗಿದ್ದು ಇಶಾಂತ್ ಬದಲು ಸಿರಾಜ್‌ಗೆ ಸ್ಥಾನ ನೀಡುವುದು ಉತ್ತಮ. ಮೊಹಮ್ಮದ್ ಸಿರಾಜ್ ಯುವ ಆಟಗಾರನಾಗಿದ್ದು ಹೆಚ್ಚಿನ ಉತ್ಸಾಹದಿಂದ ಇದ್ದಾರೆ ಆದರೆ ಇಶಾಂತ್ ಶರ್ಮಾ ಈ ಹಿಂದೆ ಗಾಯದ ಸಮಸ್ಯೆಗಳಿಂದ ಬಳಲಿದ್ದು ಹೇಳಿಕೊಳ್ಳುವಷ್ಟು ಫಿಟ್‌ನೆಸ್ ಇರುವುದಿಲ್ಲ. ನಾನೇನಾದರೂ ನಾಯಕನಾಗಿದ್ದರೆ ಖಂಡಿತವಾಗಿ ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡುತ್ತಿದ್ದೆ' ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ನಾನು ನಾಯಕನಾಗಿದ್ದರೆ ಸಿರಾಜ್ ಆಯ್ಕೆ ಮಾಡುತ್ತಿದ್ದೆ

ನಾನು ನಾಯಕನಾಗಿದ್ದರೆ ಸಿರಾಜ್ ಆಯ್ಕೆ ಮಾಡುತ್ತಿದ್ದೆ

ನಾನೇನಾದರೂ ನಾಯಕನಾಗಿದ್ದರೆ ಖಂಡಿತವಾಗಿಯೂ ವೇಗಿಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಿದೆ, ಇಂಗ್ಲೆಂಡ್ ಪಿಚ್‌ನಲ್ಲಿ ಈ ಪಂದ್ಯ ನಡೆಯುವುದರಿಂದ ವೇಗಿಗಳ ಅಗತ್ಯತೆ ತಂಡಕ್ಕೆ ಹೆಚ್ಚಿದ್ದು ಇಶಾಂತ್ ಶರ್ಮ ಬದಲು ಮೊಹಮ್ಮದ್ ಸಿರಾಜ್‌ಗೆ ತಂಡದಲ್ಲಿ ಸ್ಥಾನ ನೀಡುತ್ತಿದ್ದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ವಯಸ್ಸು, ಅನುಭವಕ್ಕಿಂತ ಫಾರ್ಮ್ ಮುಖ್ಯ

ವಯಸ್ಸು, ಅನುಭವಕ್ಕಿಂತ ಫಾರ್ಮ್ ಮುಖ್ಯ

ಇನ್ನು ಇಶಾಂತ್ ಶರ್ಮಾ ಕುರಿತು ಮಾತನಾಡಿರುವ ಹರ್ಭಜನ್ ಸಿಂಗ್ ಇಶಾಂತ್ ಶರ್ಮಾ ಹಲವಾರು ವರ್ಷಗಳಿಂದ ಭಾರತ ತಂಡದ ಪರ ಆಟವಾಡಿರಬಹುದು ಆದರೆ ಇಂತಹ ಮಹತ್ವದ ಪಂದ್ಯಗಳಿಗೆ ಆಟಗಾರರನ್ನು ಆಯ್ಕೆ ಮಾಡುವ ವಿಚಾರಕ್ಕೆ ಬಂದರೆ ವಯಸ್ಸು ಮತ್ತು ಅನುಭವಕ್ಕಿಂತ ಪ್ರಸ್ತುತ ಫಾರ್ಮ್ ಹೆಚ್ಚು ಪ್ರಭಾವವನ್ನು ಬೀರಲಿದೆ ಎಂದು ಹರ್ಭಜನ್ ಹೇಳಿದ್ದಾರೆ. ಈ ಮೂಲಕ ಮೊಹಮ್ಮದ್ ಸಿರಾಜ್ ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ ಎಂದು ಹರಭಜನ್ ತಿಳಿಸಿದ್ದಾರೆ.

ಮೊಹಮ್ಮದ್ ಸಿರಾಜ್ ಆಯ್ಕೆ ಬಗ್ಗೆ ವಿರಾಟ್ ಕೊಹ್ಲಿಗೂ ಇದೆ ಒಲವು

ಮೊಹಮ್ಮದ್ ಸಿರಾಜ್ ಆಯ್ಕೆ ಬಗ್ಗೆ ವಿರಾಟ್ ಕೊಹ್ಲಿಗೂ ಇದೆ ಒಲವು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿಯೂ ಮೊಹಮ್ಮದ್ ಸಿರಾಜ್‌ಗೆ ವಿರಾಟ್ ಕೊಹ್ಲಿ ಸತತವಾಗಿ ಅವಕಾಶಗಳನ್ನು ನೀಡಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ. ಸಿರಾಜ್ ಇಷ್ಟರ ಮಟ್ಟಿಗೆ ಬೆಳೆಯಲು ವಿರಾಟ್ ಕೊಹ್ಲಿ ಕಾರಣ ಎಂಬ ವಿಷಯವನ್ನು ಸ್ವತಃ ಮೊಹಮ್ಮದ್ ಸಿರಾಜ್ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಹೀಗಾಗಿ ಮುಂಬರಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿಯೂ ಸಹ ಮೊಹಮ್ಮದ್ ಸಿರಾಜ್‌ಗೆ ಕೊಹ್ಲಿ ಅವಕಾಶ ನೀಡುವುದು ಖಚಿತ ಎನ್ನಲಾಗುತ್ತಿದೆ.

For Quick Alerts
ALLOW NOTIFICATIONS
For Daily Alerts
Story first published: Friday, June 11, 2021, 7:47 [IST]
Other articles published on Jun 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X