ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ದ್ವಿತೀಯ ಹಂತ ಎಸ್‌ಆರ್‌ಎಚ್‌ಗೆ ನಿರ್ಣಾಯಕವಾಗಲಿದೆ: ಲಕ್ಷ್ಮಣ್

Momentum will be crucial in IPL 2021 part two: VVS Laxman

ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದ ಪಂದ್ಯಗಳು ಸೆಪ್ಟೆಂಬರ್ 19ರಿಂದ ಶುರುವಾಗಲಿದೆ. ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡ ಈ ಹಂತದಲ್ಲಿ ಹೇಗೆ ಕಮ್‌ಬ್ಯಾಕ್ ಮಾಡಲಿದೆ ಅನ್ನೋದರ ಮೇಲೆ ತಂಡದ ಪ್ರಶಸ್ತಿ ಆಸೆ ಅವಲಂಬಿತವಾಗಿದೆ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್‌, ಹೈದರಾಬಾದ್ ಮೆಂಟರ್ ವಿವಿಎಸ್‌ ಲಕ್ಷ್ಮಣ್ ಹೇಳಿದ್ದಾರೆ.

 ಭರ್ಜರಿ ಸಿಕ್ಸರ್‌ಗಳ ಮೂಲಕ ಎಚ್ಚರಿಕೆ ಕೊಟ್ಟ ಎಂಎಸ್ ಧೋನಿ: ವಿಡಿಯೋ ಭರ್ಜರಿ ಸಿಕ್ಸರ್‌ಗಳ ಮೂಲಕ ಎಚ್ಚರಿಕೆ ಕೊಟ್ಟ ಎಂಎಸ್ ಧೋನಿ: ವಿಡಿಯೋ

ಟಿ20 ಕ್ರಿಕೆಟ್ ಮಾದರಿಗಳಲ್ಲಿ ಬಹಳಷ್ಟು ಬದಲಾವಣೆಗೆ ಅವಕಾಶವಿರುತ್ತದೆ. ಅಂದರೆ ದುರ್ಬಲ ತಂಡವೊಂದು ಅಚಾನಕ್ ಬಲಿಷ್ಠ ತಂಡವಾಗಿ ಬದಲಾಗಬಹುದು. ಮುಖ್ಯವಾಗಿ ಇಂಥ ಟೂರ್ನಿಗಳ ವೇಳೆ ದುರ್ಬಲ ತಂಡವೊಂದು ಬಲಿಷ್ಠ ತಂಡವಾಗಿ ಅಥವಾ ಬಲಿಷ್ಠ ತಂಡವೊಂದು ದುರ್ಬಲ ತಂಡವಾಗಿ ಬದಲಾಗಲು ಅವಕಾಶಗಳಿರುತ್ತವೆ ಎಂದು ವಿವಿಎಸ್ ಲಕ್ಷ್ಮಣ್ ತಿಳಿಸಿದ್ದಾರೆ.

"ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ನಮ್ಮಂಥ (ಸನ್ ರೈಸರ್ಸ್ ಹೈದರಾಬಾದ್) ತಂಡಗಳಿಗೆ ಐಪಿಎಲ್ ಆರಂಭಿಕ ಹಂತ ಮತ್ತು ಎರಡನೇ ಹಂತದ ನಡುವಿನ ಈ ಬಿಡುವು ಒಗ್ಗಟ್ಟಾಗಿ ಮತ್ತು ಮಾನಸಿಕವಾಗಿ ಬಲಶಾಲಿಯಾಗಿ ಮರಳಲು ಅವಕಾಶ ನೀಡಿದೆ. ನಮಗೆ ಮಾನಸಿಕ ಸ್ಥೈರ್ಯ ಲಭಿಸಿದೆ. ನಮ್ಮ ಗುರಿ ಹೊಸತನದಿಂದ ಕೂಡಿದೆ," ಎಂದು ಲಕ್ಷ್ಮಣ್ ಅಭಿಪ್ರಾಯಿಸಿದ್ದಾರೆ.

ಪ್ರಧಾನಿ ಮಾತಿಗೂ ಬೆಲೆ ಕೊಡದ ನ್ಯೂಜಿಲೆಂಡ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಇನ್ಜಮಾಮ್ ಆಗ್ರಹಪ್ರಧಾನಿ ಮಾತಿಗೂ ಬೆಲೆ ಕೊಡದ ನ್ಯೂಜಿಲೆಂಡ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಇನ್ಜಮಾಮ್ ಆಗ್ರಹ

ಕಳೆದ ಮೇ ತಿಂಗಳಲ್ಲಿ ಭಾರತದಲ್ಲಿ ಅರ್ಧಕ್ಕೆ ನಿಲುಗಡೆಯಾಗಿದ್ದ ಐಪಿಎಲ್ 2021ರ ಆವೃತ್ತಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರೆಗೆ ಯುಎಇಯಲ್ಲಿ ನಡೆಯಲಿದೆ. ಸೆಪ್ಟೆಂಬರ್‌ 22ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಹೈದರಾಬಾದ್ ಮಧ್ಯೆ ಪಂದ್ಯ ನಡೆಯಲಿದೆ. ಹೈದರಾಬಾದ್ ಈಗ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಆಡಿರುವ ಏಳು ಪಂದ್ಯಗಳಲ್ಲಿ ಎಸ್‌ಆರ್‌ಎಚ್ ಒಂದೇ ಪಂದ್ಯ ಗೆದ್ದಿದೆ.

Story first published: Sunday, September 19, 2021, 11:33 [IST]
Other articles published on Sep 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X