ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

4ನೇ ಪಂದ್ಯದಲ್ಲೂ ಇದೇ ರೀತಿ ಪಿಚ್ ಇದ್ದರೆ ಭಾರತದ WTC ಅಂಕ ಕಡಿತ ಮಾಡಿ: ಮಾಂಟಿ ಪೆನೆಸರ್

Monty Panesar wants ICC to deduct Indias WTC points if wicket for fourth Test is the same

ಅಹ್ಮದಾಬಾದ್‌ನ ಪಿಚ್ ವಿಚಾರವಾಗಿ ಇಂಗ್ಲೆಂಡ್ ಮಾಜಿ ಆಟಗಾರರ ಟೀಕೆಗಳು ಮುಂದುವರಿದಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪನೆಸರ್ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಒಂದು ಹೆಚ್ಚು ಮುಂದೆ ಇಟ್ಟು ಐಸಿಸಿ ಬಳಿ ವಿಶೇಷ ಮನವಿಯನ್ನು ಮಾಡಿದ್ದಾರೆ ಮಾಂಟಿ ಪನೆಸರ್.

ಮೂರನೇ ಟೆಸ್ಟ್ ಪಂದ್ಯ ಪಿಂಕ್ ಪಂದ್ಯವಾಗಿತ್ತು ಎಂದು ಐಸಿಸಿ ಮುಂದುವರಿಯಬಹುದು. ಆದರೆ ನಾಲ್ಕನೇ ಹಾಗೂ ಅಂತಿಮ ಪಂದ್ಯದಲ್ಲೂ ಇದೇ ಮುಂದುವರಿದರೆ ಭಾರತವನ್ನು ಖಂಡಿತವಾಗಿಯೂ ದಂಡಿಸಬೇಕಾಗುತ್ತದೆ ಎಂದು ಮಾಂಟಿ ಪನೆಸರ್ ಹೇಳಿದ್ದಾರೆ.

ಭಾರತ vs ಇಂಗ್ಲೆಂಡ್: ಟಿ20 ಸರಣಿಗೆ ಮತ್ತೆ ವರುಣ್ ಚಕ್ರವರ್ತಿ ಅನುಮಾನ!ಭಾರತ vs ಇಂಗ್ಲೆಂಡ್: ಟಿ20 ಸರಣಿಗೆ ಮತ್ತೆ ವರುಣ್ ಚಕ್ರವರ್ತಿ ಅನುಮಾನ!

"ನನ್ನ ಪ್ರಕಾರ ಮುಂದಿನ ಟೆಸ್ಟ್ ಪಂದ್ಯದಲ್ಲೂ ಹಿಂದಿನ ಪಂದ್ಯದಂತೆಯೇ ಪಿಚ್ ಇದ್ದರೆ ಐಸಿಸಿ ಖಂಡಿತವಾಗಿಯೂ ಅಂಕಗಳ ಕಡಿತವನ್ನು ಮಾಡಬೇಕು. ಎಲ್ಲರೂ ಕ್ರಿಕೆಟ್ ಈಗ ವಿಶ್ವದ ಅತ್ಯಂತ ದೊಡ್ಡ ಅಂಗಳದಲ್ಲಿ ನಡೆಯುತ್ತಿದೆ ಎಂದು ಕುತೂಹಲದಿಂದ ನೋಡುತ್ತಿರುತ್ತಾರೆ. ಟರ್ನಿಂಗ್ ವಿಕೆಟ್ ಆಗಿದ್ದರೂ ಕ್ಯೂರೇಟರ್ ಉತ್ತಮವಾದ ಪಿಚ್ ಅನ್ನು ನಿರ್ಮಾಣ ಮಾಡಿರಬೇಕು. ಎಲ್ಲರೂ ಚೆನ್ನೈ ಪಿಚ್ ಬಗ್ಗೆ ಟೀಕಿಸಿದ್ದರು. ಆದರೆ ಇದು ಅದಕ್ಕಿಂತಲೂ ಕೆಟ್ಟದ್ದಾಗಿದೆ" ಎಂದು ಮಾಂಟಿ ಪನೆಸರ್ ಹೇಳಿದ್ದಾರೆ.

ಪಿಚ್ ದೂಷಿಸುವ ಮೂಲಕ ನಾವು ನಮಗೇ ಅಪಚಾರ ಮಾಡುತ್ತಿದ್ದೇವೆ: ಇಂಗ್ಲೆಂಡ್ ಬ್ಯಾಟಿಂಗ್ ಕೋಚ್ಪಿಚ್ ದೂಷಿಸುವ ಮೂಲಕ ನಾವು ನಮಗೇ ಅಪಚಾರ ಮಾಡುತ್ತಿದ್ದೇವೆ: ಇಂಗ್ಲೆಂಡ್ ಬ್ಯಾಟಿಂಗ್ ಕೋಚ್

ಇನ್ನು ಇದೇ ಸಂದರ್ಭದಲ್ಲಿ ಪಿಚ್ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಿರುವಂತೆ ಇರುವುದರಲ್ಲಿ ತಪ್ಪಿಲ್ಲ. ಆದರೆ ಪಂದ್ಯ ಮೂರರಿಂದ ಮೂರುವರೆ ದಿನಗಳ ಕಾಲ ನಡೆಯುವಂತಿರಬೇಕು ಎಂದು ಹೇಳಿದ್ದಾರೆ. ಮುಂದೆಯೂ ಭಾರತ ಟರ್ನಿಂಗ್ ಪಿಚ್‌ಗಳನ್ನು ಮಾಡಲಿದೆ. ಆದರೆ ಅದು ಕನಿಷ್ಠ 3 ರಿಂದ 3.5 ದಿನಗಳ ಕಾಲ ನಡೆಯುವಂತೆ ಇರಬೇಕು ಎಂದು ಮಾಂಟಿ ಪನೆಸರ್ ಹೇಳಿದ್ದಾರೆ.

ಅಹ್ಮದಾಬಾದ್‌ನಲ್ಲಿ ನಡೆದ ಮೂರನೇ ಪಂದ್ಯದ ಪಿಚ್ ವರ್ತನೆ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕರಾದ ಮೈಕಲ್ ವಾನ್, ಅಲೆಸ್ಟರ್ ಕುಕ್ ಹಾಗೂ ಡೇವಿಡ್ ಲಾಯ್ಡ್ ಟೀಕೆಯನ್ನು ವ್ಯಕ್ತಪಡಿಸಿದ್ದರು.

Story first published: Monday, March 1, 2021, 15:39 [IST]
Other articles published on Mar 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X