ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಂದೇ ದಿನ 500 ರನ್ ದಾಖಲಾಗಿದ್ದು ನಾಲ್ಕು ಬಾರಿ: ಯಾವಾಗೆಂದು ತಿಳಿಯಿರಿ

TEST Cricket

ಟೆಸ್ಟ್‌ ಕ್ರಿಕೆಟ್‌ನಲ್ಲಿ ದೊಡ್ಡ ಮೊತ್ತಗಳು ದಾಖಲಾಗೋದು ಸಾಮಾನ್ಯ ವಿಚಾರ. ಏಕೆಂದರೆ ಇಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಸಮಯ ಮತ್ತು ತಾಳ್ಮೆ ಹೆಚ್ಚಾಗಿರುತ್ತದೆ. ಹೆಚ್ಚಿನ ಯಾವುದೇ ರಿಸ್ಕ್‌ ತೆಗೆದುಕೊಳ್ಳದೆ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ನೆಲೆಯೂರಿ ಆಟವಾಡುವುದರಿಂದ ದೊಡ್ಡ ಮಟ್ಟಿನ ಸ್ಕೋರ್ ದಾಖಲಾಗುತ್ತವೆ.

ಜಂಟಲ್‌ಮನ್ ಗೇಮ್‌ನ ದೀರ್ಘ ಸ್ವರೂಪದ ಫಾರ್ಮೆಟ್‌ನಲ್ಲಿ ಆಟಗಾರರು ದೊಡ್ಡ ಸ್ಕೋರ್ ಕಲೆಹಾಕುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೆಲ ಬ್ಯಾಟರ್‌ಗಳು 90/100ರ ಸ್ಟ್ರೈಕ್‌ರೇಟ್‌ನಲ್ಲಿ ಟೆಸ್ಟ್ ಪಂದ್ಯಗಳನ್ನ ಆಡುವುದನ್ನೂ ಸಹ ನಾವು ನೋಡಿದ್ದೇವೆ. ಏಕದಿನ ಕ್ರಿಕೆಟ್‌ನಲ್ಲಿ ಎರಡೂ ತಂಡಗಳು 400ರನ್ ಸಹ ಕಲೆಹಾಕಿದ್ದನ್ನ ಕಂಡಿದ್ದೇವೆ. ಆದ್ರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಂದೇ ದಿನ 500ರನ್ ದಾಖಲಾಗಿರುವುದು ಕೇವಲ ನಾಲ್ಕು ಬಾರಿ ಅನ್ನೋದು ವಿಶೇಷ.

ಸಾಮಾನ್ಯವಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಎರಡು ದಿನಗಳಲ್ಲಿ 500 ರನ್ ದಾಖಲಾಗುತ್ತದೆ. ಆದ್ರೆ ಕೆಲ ಪಂದ್ಯಗಳಲ್ಲಿ ಮಾತ್ರ ಒಂದೇ ದಿನದಲ್ಲಿ 500 ರನ್ ಹರಿದುಬಂದಿವೆ. ಆ ಪಂದ್ಯಗಳು ಯಾವುವು? ಯಾವ ತಂಡಗಳು ಭಾಗಿಯಾಗಿದ್ದವು? ಎಂಬುದನ್ನ ಈ ಕೆಳಗೆ ತಿಳಿಯಬಹುದು.

ಇಂಗ್ಲೆಂಡ್ ವರ್ಸಸ್ ದಕ್ಷಿಣ ಆಫ್ರಿಕಾ

ಇಂಗ್ಲೆಂಡ್ ವರ್ಸಸ್ ದಕ್ಷಿಣ ಆಫ್ರಿಕಾ

17 ಆಗಸ್ಟ್‌ 1935ರಂದು ದಿ ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ 500ಕ್ಕೂ ಅಧಿಕ ರನ್ ದಾಖಲಾಗಿತ್ತು. ಪಂದ್ಯದ ಮೂರನೇ ದಿನದಾಟದಲ್ಲಿ 508 ರನ್‌ಗಳು ಹರಿದುಬಂದು, ದಿನದಲ್ಲಿ ಎಂಟು ವಿಕೆಟ್‌ಗಳು ಸಹ ಉರುಳಿದವು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ 476 ರನ್‌ಗಳನ್ನು ಕಲೆಹಾಕಿತು ಮತ್ತು ದ್ವಿತೀಯ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 287 ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತು. ಮತ್ತೊಂದೆಡೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ 6 ವಿಕೆಟ್ ನಷ್ಟಕ್ಕೆ 534 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿದ್ರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಬ್ಯಾಟಿಂಗ್ ಅವಕಾಶ ಪಡೆಯಲಿಲ್ಲ. ಏಕೆಂದರೆ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿತು.

ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ

ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ

21 ಜುಲೈ 2002ರಂದು ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವೆ ಕೊಲಂಬೊದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನದಾಟದಲ್ಲಿ 509 ರನ್ ದಾಖಲಾಯಿತು. ಬಾಂಗ್ಲಾದೇಶ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 161ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ತಂಡವು ಮೊದಲ ಇನ್ನಿಂಗ್ಸ್‌ 9 ವಿಕೆಟ್ ನಷ್ಟಕ್ಕೆ 541 ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತು.

ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್‌ನಲ್ಲಿ 184ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್‌ ಮತ್ತು 196ರನ್‌ಗಳ ಹೀನಾಯ ಸೋಲು ಕಂಡಿತು.

T20 ವಿಶ್ವಕಪ್ 2022: ಭಾರತಕ್ಕೆ ಕೊಹ್ಲಿ, ರೋಹಿತ್ ಹೊರತುಪಡಿಸಿ ಈ ಮೂವರ ಪಾತ್ರ ಬಹಳ ಮುಖ್ಯ

ಇಂಗ್ಲೆಂಡ್ ವರ್ಸಸ್ ದಕ್ಷಿಣ ಆಫ್ರಿಕಾ

ಇಂಗ್ಲೆಂಡ್ ವರ್ಸಸ್ ದಕ್ಷಿಣ ಆಫ್ರಿಕಾ

28 ಜೂನ್ 1924ರಂದು ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಒಂದೇ ದಿನದಲ್ಲಿ 522ರನ್ ದಾಖಲಾಗಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ದಿನದಲ್ಲಿ ಎರಡನೇ ಅತಿ ಹೆಚ್ಚು ರನ್ ಇದಾಗಿದೆ.

ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದ ಎರಡನೇ ದಿನದಾಟದಲ್ಲಿ ಈ ದೊಡ್ಡ ಮೊತ್ತ ಹರಿದು ಬಂದಿತು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 273ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ ಕೇವಲ 2 ವಿಕೆಟ್ ನಷ್ಟಕ್ಕೆ 531 ರನ್ ಕಲೆಹಾಕಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಪರ ಮೂವರು ಬ್ಯಾಟರ್‌ಗಳು ಸೆಂಚುರಿ ಸಿಡಿಸಿದ್ರು.

ಇನ್ನು ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಪ್ರೊಟಿಸ್ 240ರನ್‌ಗಳಿಗೆ ಆಲೌಟ್ ಆದ್ರು. ಪರಿಣಾಮ ಇನ್ನಿಂಗ್ಸ್‌ ಸೋಲನ್ನು ಅನುಭವಿಸಿದರು.

ರಣಜಿ ಫೈನಲ್: ಮಧ್ಯಪ್ರದೇಶ ಭರ್ಜರಿ ಬ್ಯಾಟಿಂಗ್, ಯಶ್ ದುಬೆ ಹಾಗೂ ಶುಭಂ ಶರ್ಮಾ ಸೆಂಚುರಿ ದಾಖಲು

ಭಾರತ ವರ್ಸಸ್ ಇಂಗ್ಲೆಂಡ್

ಭಾರತ ವರ್ಸಸ್ ಇಂಗ್ಲೆಂಡ್

ಟೆಸ್ಟ್‌ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಒಂದೇ ದಿನ ಅತಿ ಹೆಚ್ಚು ರನ್ ದಾಖಲಾದ ಪಟ್ಟಿಯಲ್ಲಿ ಮೊದಲ ಸ್ಥಾನ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ್ದಾಗಿದೆ.
25 ಜುಲೈ 1936ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ ಎರಡನೇ ದಿನದಾಟದಲ್ಲಿ ಬರೋಬ್ಬರಿ 588ರನ್‌ಗಳು ದಾಖಲಾಗಿತ್ತು.

ಭಾರತ ತಂಡವು ಮೊದಲ ಇನ್ನಿಂಗ್ಸ್‌ 203ರನ್ ಕಲೆಹಾಕಿದ್ರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ನಷ್ಟಕ್ಕೆ 390ರನ್ ಸಿಡಿಸಿತು. ಮತ್ತೊಂದೆಡೆ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 571ರನ್‌ಗಳನ್ನ ಕಲೆಹಾಕಿದ್ದರ ಪರಿಣಾಮ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು.

Story first published: Friday, June 24, 2022, 22:14 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X