132 ವರ್ಷಗಳ ಬಳಿಕ ಟೆಸ್ಟ್‌ ಸರಣಿಯಲ್ಲಿ ನಾಲ್ವರು ನಾಯಕರು!

ಮುಂಬೈನ ವಾಂಖೆಡೆ ಮೈದಾನದಲ್ಲಿ ಭಾರತ-ನ್ಯೂಜಿಲೆಂಡ್ ತಂಡಗಳು 2ನೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಟಾಸ್‌ ಗೆದ್ದ ಟೀಂ ಇಂಡಿಯಾ ಹಲವು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದು, ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ.

ಮಳೆಯಿಂದಾಗಿ ಮೈದಾನದ ಪಿಚ್ ಹೊರತುಪಡಿಸಿ ಔಟ್‌ಫೀಲ್ಡ್‌ ತೇವಾಂಶವಿದ್ದ ಕಾರಣ ಟಾಸ್ ವಿಳಂಬವಾಯಿತು. ಕಳೆದೆರಡು ದಿನಗಳಲ್ಲಿ ಮುಂಬೈ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ವಾಂಖೆಡೆ ಮೈದಾನ ತೇವಗೊಂಡಿದ್ದ ಪರಿಣಾಮ ಮೊದಲ ಸೆಷನ್ ನಷ್ಟವಾಯ್ತು. ಹೀಗಾಗಿ ಸ್ವಲ್ಪ ಬೇಗನೆ ಊಟದ ವಿರಾಮದೊಂದಿಗೆ ಎರಡನೇ ಸೆಷನ್ ಆರಂಭಗೊಂಡಿದೆ.

ಆಶ್ಚರ್ಯವೆಂಬಂತೆ ತಂಡದಲ್ಲಿ ಮೂರು ಬದಲಾವಣೆ ಆಗಿದ್ದು, ಜಡೇಜಾ, ರಹಾನೆ, ಇಶಾಂತ್ ಶರ್ಮಾ ಇಂಜ್ಯುರಿಯಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ವಿರಾಟ್ ಕೊಹ್ಲಿ, ಜಯಂತ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ದಾರೆ.

ಟೀಂ ಇಂಡಿಯಾ ಅಷ್ಟೇ ಅಲ್ಲದೆ ನ್ಯೂಜಿಲೆಂಡ್ ತಂಡದಲ್ಲೂ ಕೇವಲ ಆಟಗಾರ ಬದಲಾಗಿಲ್ಲ. ಬದಲಾಗಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಗಾಯದಿಂದಾಗಿ ತಂಡದಿಂದ ಹೊರಬಂದಿದ್ದು, ಓಪನರ್ ಟಾಮ್ ಲಥಾಮ್ ನಾಯಕನಾಗಿ ಕಣಕ್ಕಿಳಿದಿದ್ದಾರೆ. ವಿಲಿಯಮ್ಸನ್ ಬದಲು ಡೆರಿಲ್ ಮಿಚೆಲ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ದಾರೆ.

2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ನಾಲ್ವರು ನಾಯಕರು!

2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ನಾಲ್ವರು ನಾಯಕರು!

ಟೆಸ್ಟ್ ಕ್ರಿಕೆಟ್‌ನಲ್ಲಿ ಬಹಳ ಅಪರೂಪವೆಂಬಂತೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕರು ನಾಯಕರನ್ನ ಈ ಟೆಸ್ಟ್ ಸರಣಿಯಲ್ಲಿ ಕಾಣಬಹುದು. ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಅಜಿಂಕ್ಯ ರಹಾನೆ ಮುನ್ನೆಡೆಸಿದ್ರು, ಅದೇ ನ್ಯೂಜಿಲೆಂಡ್ ತಂಡವನ್ನ ಟಿ20 ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಕೇನ್ ವಿಲಿಯಮ್ಸನ್ ನಾಯಕತ್ವ ವಹಿಸಿದ್ರು.

ಆದ್ರೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳ ನಾಯಕರು ಬದಲಾಗಿದ್ದಾರೆ. ಭಾರತ ಪರ ವಿರಾಟ್ ಕೊಹ್ಲಿ ಮತ್ತು ಕಿವೀಸ್ ಪರ ಟಾಮ್ ಲಥಾಮ್ ಆಯಾ ತಂಡವನ್ನ ಮುನ್ನಡೆಸುತ್ತಿದ್ದಾರೆ.

132 ವರ್ಷಗಳ ಹಿಂದೆ ಈ ರೀತಿಯ ಸನ್ನಿವೇಶ ಎದುರಾಗಿತ್ತು!

132 ವರ್ಷಗಳ ಹಿಂದೆ ಈ ರೀತಿಯ ಸನ್ನಿವೇಶ ಎದುರಾಗಿತ್ತು!

ಹೌದು ಈ ಮೊದಲೇ ಹೇಳಿದಂತೆ ಟೆಸ್ಟ್ ಕ್ರಿಕೆಟ್‌ನಲ್ಲಿ ಬಹಳ ಅಪರೂಪದ ಸನ್ನಿವೇಶ ಇದಾಗಿದ್ದು, ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಈ ಹಿಂದೆ ನಾಲ್ವರು ನಾಯಕರು ಕಾಣಿಸಿಕೊಂಡಿದ್ದು 1889 ಇಸವಿಯಲ್ಲಿ. ಭಾರತ ಇನ್ನೂ ಕ್ರಿಕೆಟ್‌ ಹೆಜ್ಜೆಯನ್ನೇ ಇಟ್ಟಿರದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ನಾಲ್ವರು ನಾಯಕರಿದ್ದರು. ಅದಾಗಿ 132 ವರ್ಷಗಳ ಬಳಿಕ ಟೆಸ್ಟ್ ಸರಣಿಯಲ್ಲಿ ನಾಲ್ವರು ನಾಯಕರನ್ನ ಕಾಣಬಹುದಾಗಿದೆ.

ಭಾರತ- ನ್ಯೂಜಿಲೆಂಡ್ ಪ್ಲೇಯಿಂಗ್ 11

ಭಾರತ- ನ್ಯೂಜಿಲೆಂಡ್ ಪ್ಲೇಯಿಂಗ್ 11

ಟೀಮ್ ಇಂಡಿಯಾ: ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಜಯಂತ್ ಯಾದವ್, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್

ನ್ಯೂಜಿಲೆಂಡ್‌: ಟಾಮ್ ಲ್ಯಾಥಮ್ (ನಾಯಕ), ವಿಲ್ ಯಂಗ್, ಡೇರಿಲ್ ಮಿಚೆಲ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ವಿಲಿಯಂ ಸೋಮರ್ವಿಲ್ಲೆ, ಅಜಾಜ್ ಪಟೇಲ್

ಅಜಿಂಕ್ಯ ರಹಾನೆ ಟೆಸ್ಟ್ ಕೆರಿಯರ್ ಮುಗೀತಾ?

ಅಜಿಂಕ್ಯ ರಹಾನೆ ಟೆಸ್ಟ್ ಕೆರಿಯರ್ ಮುಗೀತಾ?

ಈಗಾಗಲೇ ಗಾಯದಿಂದಾಗಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಕಳೆದುಕೊಂಡಿರುವ ಅಜಿಂಕ್ಯ ರಹಾನೆ, ಫಿಟ್ ಆಗಿದ್ದರೂ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ ಮೂಡಿಸಿತ್ತು. ಕಾನ್ಪುರ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನ ಮುನ್ನೆಡೆಸಿದ್ದ ಅಜಿಂಕ್ಯ ರಹಾನೆ, ಓರ್ವ ಬ್ಯಾಟ್ಸ್‌ಮನ್ ಆಗಿ ಪರ್ಫಾಮೆನ್ಸ್ ನೀಡುವಲ್ಲಿ ವಿಫಲರಾಗಿದ್ದರು. ಅದಾಗಲೇ ಸಾಕಷ್ಟು ಟೀಕೆಗೆ ಒಳಗಾಗಿದ್ದ ರಹಾನೆ ಕ್ಯಾಪ್ಟನ್ಸಿ ಕೋಟಾದಲ್ಲಿ ಸ್ಥಾನ ಪಡೆದಿದ್ದಾರೆಂಬ ಟೀಕೆಗೆ ಒಳಗಾಗಿದ್ದರು. ಅದ್ರಲ್ಲೂ ಶ್ರೇಯಸ್ ಅಯ್ಯರ್ ಶತಕ ಮತ್ತು ಅರ್ಧಶತಕ ಸಿಡಿಸಿದ ಮೇಲಂತೂ, ರಹಾನೆ ಸ್ಥಾನ ಅಲುಗಾಡತೊಡಗಿದೆ. ವಿರಾಟ್ ಕೊಹ್ಲಿ ಮುಂಬೈ ಟೆಸ್ಟ್‌ನಲ್ಲಿ ಆಡುತ್ತಿರುವುದರಿಂದ ರಹಾನೆ ಸ್ಥಾನವನ್ನ ಕಳೆದುಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು.

ಆದ್ರೆ ಈಗ ರಹಾನೆ ಗಾಯದಿಂದಾಗಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿಲ್ಲ. ವಾಂಖೆಡೆ ಮೈದಾನದಲ್ಲೂ ಶ್ರೇಯಸ್ ಅಯ್ಯರ್ ಮಿಂಚಿದ್ದೇ ಆದಲ್ಲಿ, ಮುಂದಿನ ಟೆಸ್ಟ್ ಸರಣಿಗಳಲ್ಲಿ ರಹಾನೆಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯಲು ತೀವ್ರ ಸ್ಪರ್ಧೆ ಎದುರಿಸಲಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, December 3, 2021, 14:34 [IST]
Other articles published on Dec 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X