ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2022ರಲ್ಲಿ ಅತಿ ಹೆಚ್ಚು T20 ಪಂದ್ಯಗಳಿಂದ ಹೊರಗುಳಿದ ಟೀಂ ಇಂಡಿಯಾ ಪ್ಲೇಯರ್ಸ್: ಅಗ್ರಸ್ಥಾನದಲ್ಲಿ ಬುಮ್ರಾ

Jasprit bumrah

ಟಿ20 ವಿಶ್ವಕಪ್ ಸಮೀಪಿಸುತ್ತಿದ್ದಂತೆ ಟೀಂ ಇಂಡಿಯಾದಲ್ಲಿ ಇಂಜ್ಯುರಿ ಸಂಖ್ಯೆ ಹೆಚ್ಚಾಗುತ್ತಿದೆ. ಏಷ್ಯಾಕಪ್‌ನಲ್ಲಿ ಪ್ರಮುಖ ಆಟಗಾರರಿಲ್ಲದೆ ಭಾರತ ತಂಡವು ಭಾರಿ ಹಿನ್ನಡೆ ಅನುಭವಿಸಿತ್ತು. ಅದೇ ರೀತಿಯಲ್ಲಿ ಟೀಂ ಇಂಡಿಯಾ ಇದೀಗ ವಿಶ್ವಕಪ್‌ಗೂ ಮುನ್ನವೆ ಮತ್ತದೆ ತೊಂದರೆಗೆ ಒಳಗಾಗಿದೆ.

ಬಿಸಿಸಿಐ ಮೂಲಗಳ ಪ್ರಕಾರ ಈಗಾಗಲೇ ಬಿಸಿಸಿಐ ಮೂಲಗಳ ಪ್ರಕಾರ, ಬ್ಯಾಕ್‌ ಸ್ಟ್ರೆಸ್‌ ಫ್ರಾಕ್ಚರ್‌ಗೆ ಒಳಗಾಗಿರುವ ತಂಡದ ಅಗ್ರ ವೇಗಿ ಜಸ್‌ಪ್ರೀತ್‌ ಬುಮ್ರಾ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ. ಇದನ್ನು ಬಿಸಿಸಿಐ ಇನ್ನಷ್ಟೇ ಅಧಿಕೃತವಾಗಿ ಖಚಿತಪಡಿಸಬೇಕಿದೆ.

ಟಿ20 ವಿಶ್ವಕಪ್‌ನಿಂದಲೂ ಜಸ್ಪ್ರೀತ್ ಬುಮ್ರಾ ಔಟ್

ಟಿ20 ವಿಶ್ವಕಪ್‌ನಿಂದಲೂ ಜಸ್ಪ್ರೀತ್ ಬುಮ್ರಾ ಔಟ್

ದುಬೈನಲ್ಲಿ ನಡೆದ ಏಷ್ಯಾಕಪ್ 2022ರ ಟೂರ್ನಿಗೆ ಅಲಭ್ಯರಾಗಿದ್ದ ಜಸ್ಪ್ರೀತ್ ಬುಮ್ರಾ ಇದೀಗ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್‌ನಲ್ಲೂ ಆಡುವುದು ಬಹುತೇಕ ಅನುಮಾನವಾಗಿದೆ. ಗಾಯದ ಕುರಿತಾಗಿ ಕೊನೆ ಹಂತದಲ್ಲಿ ಮಾಹಿತಿ ನೀಡಿದ್ದರಿಂದ ಜಸ್‌ಪ್ರೀತ್‌ ಬುಮ್ರಾ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೊನೇ ಹಂತದಲ್ಲಿ ತಂಡದಿಂದ ಹೊರಬಿದ್ದಿದ್ದರು. ಜಸ್‌ಪ್ರೀತ್‌ ಬುಮ್ರಾ ಅವರ ಗಾಯಕ್ಕೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಫಿಸಿಯೋಗಳು ನಿರ್ಧಾರ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದೇ ಇದ್ದರೂ, 4 ರಿಂದ 6 ತಿಂಗಳ ಕಾಲ ಅವರು ಕ್ರಿಕೆಟ್‌ ಮೈದಾನದಿಂದ ಹೊರಗುಳಿಯಬೇಕಾಗಬಹುದು ಎಂದು ಬಿಸಿಸಿಐ ಮೂಲಗಳು ಹೇಳಿವೆ.

2006ರಲ್ಲಿ ಹಿಡಿದ ಅದ್ಭುತ ಕ್ಯಾಚ್ ಅನ್ನು ಮತ್ತೆ ಹಿಡಿದು ಮಿಂಚಿದ ಸುರೇಶ್‌ ರೈನಾ: ವೀಡಿಯೋ ವೈರಲ್‌

ಇತ್ತೀಚೆಗಷ್ಟೇ ಚೇತರಿಸಿಕೊಂಡಿರುವ ಹರ್ಷಲ್ ಪಟೇಲ್, ಗುಣಮುಖರಾಗುತ್ತಿರುವ ಜಡ್ಡು

ಇತ್ತೀಚೆಗಷ್ಟೇ ಚೇತರಿಸಿಕೊಂಡಿರುವ ಹರ್ಷಲ್ ಪಟೇಲ್, ಗುಣಮುಖರಾಗುತ್ತಿರುವ ಜಡ್ಡು

ಇನ್ನು ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾದ ಹರ್ಷಲ್ ಪಟೇಲ್ ಇತ್ತೀಚೆಗಷ್ಟೇ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಹೀಗಿರುವಾಗ ಹರ್ಷಲ್ ವಿಶ್ವಕಪ್‌ಗೂ ಮುನ್ನ ಯಾವುದೇ ತೊಂದರೆಯಿಲ್ಲದೆ ಟೀಂ ಇಂಡಿಯಾ ಜರ್ನಿಯಲ್ಲಿ ಮುಂದುವರೆದ್ರೆ ಉತ್ತಮ. ಇಲ್ಲವಾದಲ್ಲಿ ಟೀಂ ಇಂಡಿಯಾ ಚುಟುಕು ವಿಶ್ವಕಪ್‌ನಲ್ಲಿ ಭಾರೀ ತೊಂದರೆ ಎದುರಿಸಬೇಕಾಗುತ್ತದೆ.

ಇನ್ನು ಆಲ್‌ರೌಂಡರ್ ರವೀಂದ್ರ ಜಡೇಜಾ ತಾನೇ ಸ್ವತಃ ಮಾಡಿಕೊಂಡ ಎಡವಟ್ಟಿನಿಂದಾಗಿ ಈಗಾಗಲೇ ಶಸ್ತ್ರಚಿಕಿತ್ಸೆ ಮುಗಿಸಿ ಬೆಂಗಳೂರಿನ ಎನ್‌ಸಿಎನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶ್ವಕಪ್‌ಗೂ ಮುನ್ನ ಜಡ್ಡು ರೆಡಿಯಾಗ್ತಾರ ಅಥವಾ ಇಲ್ಲವೇ ಎಂಬುದು ಇನ್ನೂ ತಿಳಿದುಬಂದಿಲ್ಲ.

T20 World Cup 2022: ಜಸ್ಪ್ರೀತ್ ಬುಮ್ರಾ ಬದಲಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಆಟಗಾರ ಯಾರು?

ಅತಿ ಹೆಚ್ಚು ಟಿ20 ಪಂದ್ಯಗಳನ್ನ ಮಿಸ್ ಮಾಡಿಕೊಂಡಿರುವ ಭಾರತದ ಆಟಗಾರರು

ಅತಿ ಹೆಚ್ಚು ಟಿ20 ಪಂದ್ಯಗಳನ್ನ ಮಿಸ್ ಮಾಡಿಕೊಂಡಿರುವ ಭಾರತದ ಆಟಗಾರರು

2022ರಲ್ಲಿ ಅತಿ ಹೆಚ್ಚು ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಮಿಸ್ ಮಾಡಿಕೊಂಡಿರುವ ಟೀಂ ಇಂಡಿಯಾ ಆಟಗಾರರನ್ನು ಈ ಕೆಳಗೆ ಕಾಣಬಹುದು. ಇಲ್ಲಿ ವಿಶ್ವಕಪ್‌ ಸ್ಕ್ವಾಡ್‌ನಲ್ಲಿ ಆಯ್ಕೆಯಾಗಿರುವ ಆಟಗಾರರನ್ನ ಮಾತ್ರ ತಿಳಿಸಲಾಗಿದ್ದು, ಎಷ್ಟು ಪಂದ್ಯ ತಂಡದಿಂದ ಹೊರಗುಳಿದಿದ್ದಾರೆ ಎಂಬುದನ್ನ ಸಹ ಕಾಣಬಹುದಾಗಿದೆ.

25- ಜಸ್ಪ್ರೀತ್ ಬುಮ್ರಾ
24- ರವಿಚಂದ್ರನ್ ಅಶ್ವಿನ್
21- ಕೆ.ಎಲ್ ರಾಹುಲ್
18- ಅರ್ಷ್‌ದೀಪ್ ಸಿಂಗ್‌
18- ದೀಪಕ್ ಹೂಡಾ
17- ವಿರಾಟ್ ಕೊಹ್ಲಿ
15- ಅಕ್ಷರ್ ಪಟೇಲ್
12- ಹಾರ್ದಿಕ್ ಪಾಂಡ್ಯ
12- ರಿಷಭ್ ಪಂತ್

Story first published: Thursday, September 29, 2022, 18:42 [IST]
Other articles published on Sep 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X