ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ vs ಐಪಿಎಲ್ vs ಒಲಿಂಪಿಕ್ಸ್: ಕ್ರೀಡಾ ಟೂರ್ನಿಗಳಲ್ಲಿ ನಂ.1 ಯಾವುದೆಂಬುದು ಬಹಿರಂಗ

Most searched sports events in google in India 2021; Here is the List

2021ನೇ ಸಾಲಿನಲ್ಲಿ ವಿಶ್ವದಾದ್ಯಂತ ಹಲವಾರು ಕ್ರೀಡಾ ಟೂರ್ನಿಗಳು ಜರುಗಿವೆ. ಕಳೆದ ವರ್ಷ ಜಗತ್ತಿನಾದ್ಯಂತ ಕೊರೋನಾವೈರಸ್ ಅಬ್ಬರಿಸಿದ್ದ ಕಾರಣದಿಂದಾಗಿ ಆ ವರ್ಷ ನಡೆಯಬೇಕಿದ್ದ ಬಹುತೇಕ ಟೂರ್ನಿಗಳು ಮುಂದೂಡಲ್ಪಟ್ಟು ಈ ವರ್ಷ ಬಯೋ ಬಬಲ್ ವ್ಯವಸ್ಥೆಯೊಂದಿಗೆ ನಡೆದವು. ಹೌದು, ಟೋಕಿಯೊ ಒಲಿಂಪಿಕ್ಸ್ ಸೇರಿ ಹಲವಾರು ಟೂರ್ನಿಗಳನ್ನು ಕಳೆದ ವರ್ಷದಿಂದ ಈ ವರ್ಷಕ್ಕೆ ಮುಂದೂಡಲ್ಪಟ್ಟು ಯಶಸ್ವಿಯಾಗಿ ನಡೆಸಲಾಯಿತು. ಹಾಗೂ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದರು. ಆ ಸಂದರ್ಭದಲ್ಲಿ ಅಂತರ್ಜಾಲದಲ್ಲಿ ಬರೀ ಒಲಿಂಪಿಕ್ಸ್ ಸುದ್ದಿಗಳದ್ದೇ ಕಾರುಬಾರಾಗಿತ್ತು. ಇನ್ನು ಈ ವರ್ಷ ಪ್ರತಿಷ್ಠಿತ ಟಿ ಟ್ವೆಂಟಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ಕೂಡ ಜರುಗಿತು. ಸುಮಾರು 5 ವರ್ಷಗಳ ಅಂತರದ ನಂತರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ನಡೆಸಲಾಗಿದ್ದು, ಅಂತಿಮವಾಗಿ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಭಾರತ ವಿರುದ್ಧದ ಟೆಸ್ಟ್ ಸರಣಿಗೆ 21 ಆಟಗಾರರ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ; ಯಾರಿಗೆಲ್ಲಾ ಸ್ಥಾನ?ಭಾರತ ವಿರುದ್ಧದ ಟೆಸ್ಟ್ ಸರಣಿಗೆ 21 ಆಟಗಾರರ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ; ಯಾರಿಗೆಲ್ಲಾ ಸ್ಥಾನ?

ಹೀಗೆ ಈ ವರ್ಷ ಕೊರೋನಾವೈರಸ್ ಆತಂಕದ ನಡುವೆಯೇ ಹಲವಾರು ದೊಡ್ಡ ದೊಡ್ಡ ಕ್ರೀಡಾ ಟೂರ್ನಿಗಳನ್ನು ಯಶಸ್ವಿಯಾಗಿ ಆಯೋಜಿಸಿ ಮುಕ್ತಾಯಗೊಳಿಸಲಾಗಿದೆ. ಫುಟ್ಬಾಲ್, ಟೆನ್ನಿಸ್ ಹಾಗೂ ಕ್ರಿಕೆಟ್ ಸೇರಿದಂತೆ ಮುಂತಾದ ಟೂರ್ನಿಗಳು ನಡೆದಿದ್ದು, ಈ ಎಲ್ಲಾ ಟೂರ್ನಿಗಳನ್ನೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಹಿಂದಿಕ್ಕುವುದರ ಮೂಲಕ ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟೂರ್ನಿ ಎನಿಸಿಕೊಂಡಿದೆ.

2022 ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ರಾಜತಾಂತ್ರಿಕ ಬಹಿಷ್ಕಾರಕ್ಕೆ ಆಸ್ಟ್ರೇಲಿಯಾ ನಿರ್ಧಾರ2022 ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ರಾಜತಾಂತ್ರಿಕ ಬಹಿಷ್ಕಾರಕ್ಕೆ ಆಸ್ಟ್ರೇಲಿಯಾ ನಿರ್ಧಾರ

ಹೌದು, 2021ರಲ್ಲಿ ನಡೆದಿರುವ ಎಲ್ಲಾ ಕ್ರೀಡಾ ಟೂರ್ನಿಗಳ ಪೈಕಿ ಜನಪ್ರಿಯ ಗೂಗಲ್‌ನಲ್ಲಿ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟೂರ್ನಿ ಎಂಬ ಹಿರಿಮೆಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಭಾಜನವಾಗಿದೆ. ಇನ್ನೇನು ಈ ವರ್ಷ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು ಭಾರತದಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟ ಕ್ರೀಡಾ ಟೂರ್ನಿಗಳ ಟಾಪ್ 10 ಪಟ್ಟಿ ಬಿಡುಗಡೆಯಾಗಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಅಷ್ಟೇ ಅಲ್ಲದೆ ಈ ಬಾರಿ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದರೆ, ಯೂರೋ ಕಪ್ ಟೂರ್ನಿ ತೃತೀಯ ಸ್ಥಾನದಲ್ಲಿದೆ. ಇನ್ನು ಗೂಗಲ್‌ನಲ್ಲಿ ಈ ವರ್ಷ ಹೆಚ್ಚಾಗಿ ಹುಡುಕಲ್ಪಟ್ಟ ಕ್ರೀಡಾ ಟೂರ್ನಿಗಳ ಟಾಪ್ 10 ಪಟ್ಟಿ ಮುಂದೆ ಇದೆ ನೋಡಿ..

ಟಾಪ್ 10 ಪಟ್ಟಿ

ಟಾಪ್ 10 ಪಟ್ಟಿ

ಈ ವರ್ಷ ನಡೆದಿರುವ ಟೂರ್ನಿಗಳ ಪೈಕಿ ಅತಿ ಹೆಚ್ಚು ಬಾರಿಭಾರತದಲ್ಲಿ ಗೂಗಲ್‌ನಲ್ಲಿ ಹುಡುಕಲ್ಪಟ್ಟ ಟೂರ್ನಿಗಳ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ.

1) ಇಂಡಿಯನ್ ಪ್ರೀಮಿಯರ್ ಲೀಗ್

2) ಐಸಿಸಿ ಟಿ20 ವಿಶ್ವಕಪ್

3) ಯುರೋ ಕಪ್

4) ಟೋಕಿಯೋ ಒಲಿಂಪಿಕ್ಸ್

5) ಕೋಪಾ ಅಮೇರಿಕಾ

6) ವಿಂಬಲ್ಡನ್

7) ಪ್ಯಾರಾಲಿಂಪಿಕ್ಸ್

8) ಫ್ರೆಂಚ್ ಓಪನ್

9) ಲಾ ಲಿಗಾ

10) ಇಂಗ್ಲಿಷ್ ಪ್ರೀಮಿಯರ್ ಲೀಗ್

ಕ್ರಿಕೆಟ್ ಟೂರ್ನಿಗಳ ಪಾರುಪತ್ಯ

ಕ್ರಿಕೆಟ್ ಟೂರ್ನಿಗಳ ಪಾರುಪತ್ಯ

ಗೂಗಲ್‌ನಲ್ಲಿ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟ ಕ್ರೀಡಾ ಟೂರ್ನಿಗಳ ಟಾಪ್ 10 ಪಟ್ಟಿ ಬಿಡುಗಡೆಯಾಗಿದ್ದು ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಕ್ರಿಕೆಟ್ ಟೂರ್ನಿಗಳೇ ಪಡೆದುಕೊಂಡಿವೆ. ಹೌದು, ಈ ಪಟ್ಟಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅಗ್ರ ಸ್ಥಾನ ಪಡೆದುಕೊಂಡಿದ್ದರೆ, ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಜಗತ್ತಿನಾದ್ಯಂತ ಅತಿ ದೊಡ್ಡ ಕ್ರೇಜ್ ಹೊಂದಿರುವ ಫುಟ್ಬಾಲ್ ಕ್ರೀಡೆಯನ್ನೇ ಕ್ರಿಕೆಟ್ ಹಿಂದಿಕ್ಕಿದೆ. ಅಷ್ಟೇ ಅಲ್ಲದೆ ಟೊಕಿಯೊ ಒಲಿಂಪಿಕ್ಸ್‌ನ್ನೂ ಕೂಡ ಕ್ರಿಕೆಟ್ ಟೂರ್ನಿಗಳು ಹಿಂದಿಕ್ಕಿರುವುದು ಗಮನಾರ್ಹ.

2 ಭಾಗಗಳಲ್ಲಿ ಐಪಿಎಲ್ ನಡೆದರೂ ಕಡಿಮೆಯಾಗಲಿಲ್ಲ ಕ್ರೇಜ್

2 ಭಾಗಗಳಲ್ಲಿ ಐಪಿಎಲ್ ನಡೆದರೂ ಕಡಿಮೆಯಾಗಲಿಲ್ಲ ಕ್ರೇಜ್

ಜಗತ್ತಿನಾದ್ಯಂತ ಹಲವಾರು ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳು ನಡೆಯಬಹುದು. ಆ ಪ್ರತಿ ಲೀಗ್‌ಗಳು ಪ್ರಾರಂಭವಾದಾಗಲೆಲ್ಲಾ ಅವುಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಜೊತೆ ಹೋಲಿಕೆ ಮಾಡಿ ಮಾತನಾಡುತ್ತಿದ್ದರು. ಆದರೆ ಆ ಯಾವ ಕ್ರಿಕೆಟ್ ಟೂರ್ನಿಗಳೂ ಕೂಡ ಇದುವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಗುಣಮಟ್ಟದ ಮಟ್ಟವನ್ನು ತಲುಪುವಲ್ಲಿ ಯಶಸ್ವಿಯಾಗಿಲ್ಲ. ಕೇವಲ ಕ್ರಿಕೆಟ್ ಟೂರ್ನಿಗಳು ಮಾತ್ರವಲ್ಲದೇ ಇದೀಗ ಫುಟ್ಬಾಲ್ ಮತ್ತು ಒಲಿಂಪಿಕ್ಸ್ ಕ್ರೀಡಾಕೂಟಗಳು ಸಹ ಐಪಿಎಲ್ ಜನಪ್ರಿಯತೆಯನ್ನು ಮೀರಿಸುವಲ್ಲಿ ವಿಫಲವಾಗಿವೆ. ಅದೂ ಅಲ್ಲದೇ ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮೊದಲಿಗೆ ಭಾರತ ನೆಲದಲ್ಲಿ ಆರಂಭವಾಗಿ ಕೊರೋನಾವೈರಸ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡ ನಂತರ ಯುಎಇಗೆ ಸ್ಥಳಾಂತರಿಸಲ್ಪಟ್ಟಿತು. ಹೀಗೆ ಈ ವರ್ಷ 2 ಭಾಗಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆದಿದ್ದರೂ ಕೂಡ ಗೂಗಲ್‌ನಲ್ಲಿ ಅದರ ಜನಪ್ರಿಯತೆಗೆ ಮಾತ್ರ ಸರಿಸಾಟಿ ಯಾರೂ ಕೂಡ ಇಲ್ಲದಂತಾಗಿದೆ.

Story first published: Thursday, December 9, 2021, 9:32 [IST]
Other articles published on Dec 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X