ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!

ಬೆಂಗಳೂರು: ಟಿ20 ಅಥವಾ ಟಿ10ನಂತ ಚುಟುಕ ಮಾದರಿಯ ಕ್ರಿಕೆಟ್‌, ಅಭಿಮಾನಿಗಳಿಗೆ ಹೆಚ್ಚು ಅಚ್ಚುಮೆಚ್ಚು ಅನ್ನಿಸಲು ಪ್ರಮುಖ ಕಾರಣ ಫೋರ್/ಸಿಕ್ಸ್‌ಗಳ ಸುರಿಮಳೆ. ಟಿ20 ಅಥವಾ ಟಿ10 ಪಂದ್ಯಗಳು ಬೇಗನೆ ಮುಗಿಯುವುದರಿಂದ ತಂಡಕ್ಕೆ ಹೆಚ್ಚು ರನ್ ಕಲೆ ಹಾಕಲು ಬ್ಯಾಟ್ಸ್‌ಮನ್‌ಗಳು ಬೌಂಡರಿ, ಸಿಕ್ಸರ್‌ಗಳ ಮೊರೆ ಹೋಗುತ್ತಾರೆ. ಇದರಿಂದ ಆಟದ ಮೆರಗು ಹೆಚ್ಚುತ್ತದೆ. ಪಂದ್ಯ ಹೆಚ್ಚು ಆಕರ್ಷಣೆ ಮೂಡಿಸುತ್ತದೆ ಕೂಡ. ಕ್ರಿಕೆಟ್ ಪಂದ್ಯವೊಂದರ ವೇಳೆ ಹೆಚ್ಚು ಸಿಕ್ಸ್ ಬಾರಿಸುವ ಬ್ಯಾಟ್ಸ್‌ಮನ್ ಹೀರೋ ಅನ್ನಿಸುತ್ತಾನೆ ಎಂದರೆ ಸಿಕ್ಸ್/ಫೋರ್‌ಗಳ ಸೆಳೆತ ಎಷ್ಟಿರುತ್ತದೆ ಅಲ್ಲವೆ?

ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!

ಟಿ10, ಟಿ20 ಟೂರ್ನಿಗಳು ಬಿಟ್ಟರೆ ಹೆಚ್ಚಿನ ಸಿಕ್ಸ್‌ಗಳು ಕಾಣಸಿಗೋದು ಏಕದಿನದಲ್ಲಿ. ಏಕದಿನದಲ್ಲಿ ಅತ್ಯಧಿಕ ಸಿಕ್ಸರ್‌ಗಳ ದಾಖಲೆ ಬರೆದ ಅನೇಕ ಬ್ಯಾಟ್ಸ್‌ಮನ್‌ಗಳಿದ್ದಾರೆ. ಇದರಲ್ಲಿ ಟಾಪ್ ಟೆನ್ ಪಟ್ಟಿ ಗಮನಿಸಿದರೆ ಭಾರತೀಯರೇ ಹೆಚ್ಚಿದ್ದಾರೆ.

ಪತ್ನಿ ರಿತಿಕಾಗೆ ಕಿರಿಕಿರಿ ನೀಡುವ ರೋಹಿತ್‌ ಶರ್ಮಾರ 2 ಕೆಟ್ಟ ಅಭ್ಯಾಸಗಳಿವು!

ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸ್‌ ದಾಖಲೆಯಿರುವ ಟಾಪ್ 10 ಬ್ಯಾಟ್ಸ್‌ಮನ್‌ಗಳ ಪಟ್ಟಿ ಇಲ್ಲಿದೆ.

1. ಶಾಹಿದ್ ಅಫ್ರಿದಿ

1. ಶಾಹಿದ್ ಅಫ್ರಿದಿ

ಪಾಕಿಸ್ತಾನದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿದಿ ಹೆಸರಲ್ಲಿ ಏಕದಿನದಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದಾಖಲೆಯಿದೆ. 398 ಏಕದಿನ ಪಂದ್ಯಗಳನ್ನಾಡಿರುವ ಶಾಹಿದ್, 23.58ರ ಸರಾಸರಿಯಲ್ಲಿ 8,064 ರನ್ ಗಳಿಸಿದ್ದಾರೆ. ಇದರಲ್ಲಿ 351 ಸಿಕ್ಸ್‌ಗಳು, 730 ಫೋರ್‌ಗಳು ಸೇರಿವೆ.

2. ಕ್ರಿಸ್ ಗೇಲ್

2. ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಅತ್ಯಧಿಕ ಸಿಕ್ಸ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 301 ಏಕದಿನ ಪಂದ್ಯಗಳನ್ನಾಡಿರುವ ಗೇಲ್ 37.83ರ ಸರಾಸರಿಯಂತೆ 10,480 ರನ್ ಗಳಿಸಿದ್ದಾರೆ. ಇದರಲ್ಲಿ 331 ಸಿಕ್ಸ್‌ಗಳು, 1,128 ಫೋರ್‌ಗಳು ಸೇರಿವೆ.

3. ಸನತ್ ಜಯಸೂರ್ಯ

3. ಸನತ್ ಜಯಸೂರ್ಯ

ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅತ್ಯುತ್ತಮ ಬ್ಯಾಟಿಂಗ್‌ಗಾಗಿ ಗುರುತಿಸಿಕೊಂಡವರು. 445 ಏಕದಿನ ಪಂದ್ಯಗಳಲ್ಲಿ 32.36ರ ಸರಾಸರಿಯಲ್ಲಿ ಜಯಸೂರ್ಯ 13,430 ರನ್ ಕಲೆ ಹಾಕಿದ್ದಾರೆ. 28 ಶತಕಗಳನ್ನು ಬಾರಿಸಿರುವ ಜಯಸೂರ್ಯ 270 ಸಿಕ್ಸರ್, 1,503 ಬೌಂಡರಿಗಳ ದಾಖಲೆ ಹೊಂದಿದ್ದಾರೆ.

4. ರೋಹಿತ್ ಶರ್ಮಾ

4. ರೋಹಿತ್ ಶರ್ಮಾ

ಭಾರತದ ಆರಂಭಿಕ ಬ್ಯಾಟ್ಸ್‌ಮನ್, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಫೋರ್/ಸಿಕ್ಸ್‌ಗೆ ಹೆಚ್ಚಾಗಿ ಗಮನ ಸೆಳೆಯುತ್ತಿರುತ್ತಾರೆ. 224 ಏಕದಿನ ಪಂದ್ಯಗಳಲ್ಲಿ ಶರ್ಮಾ 49.27ರ ಸರಾಸರಿಯಲ್ಲಿ 9,115 ರನ್ ಗಳಿಸಿದ್ದಾರೆ. ಅಲ್ಲದೆ 244 ಸಿಕ್ಸರ್‌, 814 ಬೌಂಡರಿಗಳನ್ನು ಬಾರಿಸಿದ್ದಾರೆ.

5. ಎಂಎಸ್ ಧೋನಿ

5. ಎಂಎಸ್ ಧೋನಿ

ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಹೆಲಿಕಾಪ್ಟರ್ ಶಾಟ್‌ಗೆ ಹೆಚ್ಚು ಗಮನ ಸೆಳೆದವರು. 350 ಏಕದಿನ ಪಂದ್ಯಗಳಲ್ಲಿ ಧೋನಿ 10,773 ರನ್ ಗಳಿಸಿದ್ದಾರೆ. 10 ಶತಕಗಳನ್ನು ಬಾರಿಸಿರುವ ಧೋನಿ 229 ಸಿಕ್ಸರ್, 826 ಫೋರ್‌ಗಳ ದಾಖಲೆ ಹೊಂದಿದ್ದಾರೆ.

6. ಇಯಾನ್ ಮಾರ್ಗನ್

6. ಇಯಾನ್ ಮಾರ್ಗನ್

ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಕೂಡ ಸಿಕ್ಸ್‌ ಫೋರ್ ವಿಚಾರದಲ್ಲಿ ಎತ್ತಿದ ಕೈ. ಏಕದಿನದಲ್ಲಿ 236 ಪಂದ್ಯಗಳನ್ನಾಡಿರುವ ಮಾರ್ಗನ್, 7,368 ರನ್ ಗಳಿಸಿದ್ದಾರೆ. 13 ಶತಕ, 211

ಸಿಕ್ಸ್‌, 613 ಫೋರ್‌ಗಳ ದಾಖಲೆ ಮಾರ್ಗನ್ ಹೆಸರಿನಲ್ಲಿದೆ.

7. ಎಬಿ ಡಿ ವಿಲಿಯರ್ಸ್

7. ಎಬಿ ಡಿ ವಿಲಿಯರ್ಸ್

'ಮಿಸ್ಟರ್ 360 ಡಿಗ್ರಿ' ಎಂದೇ ಖ್ಯಾತರಾಗಿರುವ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ 228 ಏಕದಿನ ಪಂದ್ಯಗಳಲ್ಲಿ 9,577 ರನ್ ಗಳಿಸಿದ್ದಾರೆ. 204 ಸಿಕ್ಸರ್‌ಗಳನ್ನು ಬಾರಿಸಿರುವ ಎಬಿಡಿ 840 ಫೋರ್‌ಗಳನ್ನು ಚಚ್ಚಿದ್ದಾರೆ.

8. ಬ್ರೆಂಡನ್‌ ಮೆಕಲಮ್

8. ಬ್ರೆಂಡನ್‌ ಮೆಕಲಮ್

ನ್ಯೂಜಿಲೆಂಡ್‌ನ ಅಪಾಯಕಾರಿ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕಲಮ್ 260 ಪಂದ್ಯಗಲ್ಲಿ 30.42ರ ಸರಾಸರಿಯಲ್ಲಿ 6,083 ರನ್ ಗಳಿಸಿದ್ದಾರೆ. 200 ಸಿಕ್ಸರ್‌ಗಳನ್ನು ಬಾರಿಸಿರುವ ಮೆಕಲಮ್ 575 ಬೌಂಡರಿಗಳ ದಾಖಲೆ ಹೊಂದಿದ್ದಾರೆ.

9. ಸಚಿನ್ ತೆಂಡೂಲ್ಕರ್

9. ಸಚಿನ್ ತೆಂಡೂಲ್ಕರ್

ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದಾರೆ. 195 ಸಿಕ್ಸರ್‌ಗಳ ದಾಖಲೆ ಹೊಂದಿರುವ ಮಾಸ್ಟರ್ ಬ್ಲಾಸ್ಟರ್ ಬರೋಬ್ಬರಿ 2,016 ಫೋರ್‌ಗಳನ್ನು ಬಾರಿಸಿದ್ದಾರೆ.

10. ಸೌರವ್ ಗಂಗೂಲಿ

10. ಸೌರವ್ ಗಂಗೂಲಿ

ಬಿಸಿಸಿಐ ಅಧ್ಯಕ್ಷರಾಗಿರುವ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದವರ ಪಟ್ಟಿಯಲ್ಲಿ ಟಾಪ್ ಟೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ. 311 ಪಂದ್ಯಗಳಲ್ಲಿ ಗಂಗೂಲಿ 11,363 ರನ್ ಬಾರಿಸಿದ್ದಾರೆ. ಇದರಲ್ಲಿ 190 ಸಿಕ್ಸರ್‌, 1,125 ಫೋರ್‌ಗಳು ಸೇರಿವೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, July 22, 2020, 21:36 [IST]
Other articles published on Jul 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X