ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸ್ಟಂಪ್ ಔಟ್ ಮಾಡಿದ ಟಾಪ್ 5 ವಿಕೆಟ್ ಕೀಪರ್‌ಗಳು ಇವರು !

Most Stumping Records By Wicket Keepers In Odi Cricket

ಯಾವುದೇ ಮಾದರಿಯ ಕ್ರಿಕೆಟ್ ಇರಲಿ, ಅಲ್ಲಿ ವಿಕೆಟ್ ಕೀಪರ್ ಪಾತ್ರ ಬಹಳ ದೊಡ್ಡದು. ಅಂಗಳದಲ್ಲಿ ವಿಕೆಟ್ ಕೀಪರ್ ಅತಿ ಹೆಚ್ಚು ಚುರುಕಿನಿಂದ ಇರಬೇಕಾಗುತ್ತದೆ. ವಿಕೆಟ್‌ನ ಹಿಂದೆ ಬ್ಯಾಟ್ಸ್‌ಮನ್‌ನನ್ನು ಬಲಿ ಪಡೆಯುವ ಅವಕಾಶವೂ ಹೆಚ್ಚಿನದಾಗಿರುತ್ತದೆ. ಆದರೆ ಸ್ವಲ್ಪ ಎಡವಟ್ಟಾದರೂ ಪಮದ್ಯವನ್ನು ಕಳೆದುಕೊಳ್ಳುವ ಪರಿಸ್ಥಿತಿಯೂ ಬರುತ್ತದೆ.

ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್‌ನಿಂದ ಹಿಡಿದು ಭಾರತ ಮಹೇಂದ್ರ ಸಿಂಗ್ ಧೋನಿವರೆಗೆ ವಿಶ್ವ ಕ್ರಿಕೆಟ್ ಅದ್ಭುತ ವಿಕೆಟ್ ಕೀಪರ್‌ಗಳನ್ನು ಕಂಡಿದೆ. ಇಂತಾ ಲೆಜೆಂಡರಿ ವಿಕೆಟ್ ಕೀಪರ್‌ಗಳು ಆಟವನ್ನು ಮತ್ತಷ್ಟು ಎತ್ತರಕ್ಕೆ ಏರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಂಎಸ್ ಧೋನಿ ಇನ್ನು ಟೀಮ್ ಇಂಡಿಯಾವನ್ನು ಪ್ರತಿನಿಧಿಸಲ್ಲ: ಹರ್ಭಜನ್ ಸಿಂಗ್ಎಂಎಸ್ ಧೋನಿ ಇನ್ನು ಟೀಮ್ ಇಂಡಿಯಾವನ್ನು ಪ್ರತಿನಿಧಿಸಲ್ಲ: ಹರ್ಭಜನ್ ಸಿಂಗ್

ವಿಕೆಟ್‌ನ ಹಿಂದೆ ಕ್ಯಾಚ್ ಹಿಡಿಯುವುದು ಮಾತ್ರವಲ್ಲ ಬ್ಯಾಟ್ಸ್‌ಮನ್ ಮುನ್ನುಗ್ಗಿ ಬಾರಿಸಲು ಯತ್ನಿಸಿದಾಗ ಸ್ಟಂಪ್ ಔಟ್ ಮೂಲಕ ಫೆವಿಲಿಯನ್‌ಗೆ ಅಟ್ಟುವ ವಿಶೇಷ ಅಧಿಕಾರ ವಿಕೆಟ್ ಕೀಪರ್‌ಗೆ ಇದೆ. ಆದರೆ ಅದಕ್ಕೆ ಅಷ್ಟೇ ಚುರುಕುತನ ಇರಬೇಕು. ಹೀಗೆ ವಿಕೆಟ್‌ನ ಹಿಂದೆ ಅತಿ ಹೆಚ್ಚು ಬಾರಿ ಸ್ಟಂಪ್ ಮಾಡಿ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ ಐವರು ವಿಕೆಟ್ ಕೀಪರ್‌ಗಳು ಯಾರು ಅನ್ನೋದನ್ನು ಮುಂದೆ ಓದಿ..

ಟಾಪ್ 5 ಆಡಮ್ ಗಿಲ್‌ಕ್ರಿಸ್ಟ್

ಟಾಪ್ 5 ಆಡಮ್ ಗಿಲ್‌ಕ್ರಿಸ್ಟ್

ಆಸ್ಟ್ರೇಲಿಯಾದ ದಿಗ್ಗಜ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ವಿಕೆಟ್‌ ಕೀಪರ್ ಆಗಿ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರ. ತನ್ನ ವೃತ್ತಿ ಜೀವನದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಗಿಲ್‌ಕ್ರಿಸ್ಟ್ 472 ಬಾರಿ ಬ್ಯಾಟ್ಸ್‌ಮನ್‌ಗಳ ಔಟ್‌ಗೆ ಕಾರಣರಾಗಿದ್ದಾರೆ. ಇದರಲ್ಲಿ 55 ಬಾರಿ ಸ್ಟಂಪ್ ಮೂಲಕ ಬ್ಯಾಟ್ಸ್‌ಮನ್‌ಅನ್ನು ಫೆವಿಲಿಯನ್‌ಗೆ ಅಟ್ಟಿದ್ದಾರೆ. ಈ ಮೂಲಕ ಅತಿ ಹೆಚ್ಚು ಸ್ಟಂಪ್ ಔಟ್ ಮಾಡಿದ ಆಟಗಾರರಲ್ಲಿ 5ನೇ ಸ್ಥಾನದಲ್ಲಿದ್ದಾರೆ.

ಟಾಪ್ 4 ಮೊಯಿನ್ ಖಾನ್

ಟಾಪ್ 4 ಮೊಯಿನ್ ಖಾನ್

ವಿಕೆಟ್‌ ಹಿಂದೆ ಎಡವಟ್ಟು ಮಾಡಿಕೊಂಡೇ ಸುದ್ದಿಯಾಗಿದ್ದವರು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಮೊಯಿನ್ ಖಾನ್. ಆದರೆ ಅತಿ ಹೆಚ್ಚು ಸ್ಟಂಪ್ ದಾಖಲೆಯ ಪಟ್ಟಿಯಲ್ಲಿ ದಿಗ್ಗಜ ಗಿಲ್‌ಕ್ರಿಸ್ಟ್ ಅವರಿಗಿಂತ ಮುಂದಿದ್ದಾರೆ. 209 ಏಕದಿನ ಪಂದ್ಯಗಳಲ್ಲಿ ವಿಕೆಟ್‌ನ ಹಿಂದೆ 287 ಬಲಿಪಡೆದುಕೊಂಡಿದ್ದಾರೆ ಮೊಯಿನ್ ಖಾನ್. ಅದರಲ್ಲಿ 73 ಸ್ಟಂಪ್ ಔಟ್‌ಗಳಾಗಿದೆ. ಈ ಮೂಲಕ ಮೊಯಿನ್ ಖಾನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಟಾಪ್ 3 ರೊಮೇಶ್ ಕಲುವಿತರಣ

ಟಾಪ್ 3 ರೊಮೇಶ್ ಕಲುವಿತರಣ

ಶ್ರೀಲಂಕಾದ ವಿಕೆಟ್ ಕೀಪರ್ ಆಗಿದ್ದ ರೊಮೇಶ್ ಕಲುವಿತರಣ 189 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 206 ಬಾರಿ ಬ್ಯಾಟ್ಸ್‌ಮನ್‌ಗಳಿಗೆ ಫೆವಿಲಿಯನ್ ದಾರಿ ತೋರಿಸಿದ್ದಾರೆ. ಇದರಲ್ಲಿ 75 ವಿಕೆಟ್‌ಗಳು ಸ್ಟಂಪ್ ಮೂಲಕ ತೆಗೆದಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ ರೊಮೇಶ್ ಕಲುವಿತರಣ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಟಾಪ್-2 ಕುಮಾರ್ ಸಂಗಕ್ಕಾರ

ಟಾಪ್-2 ಕುಮಾರ್ ಸಂಗಕ್ಕಾರ

ಶ್ರೀಲಂಕಾದ ದಿಗ್ಗಜ ಆಟಗಾರ ಕುಮಾರ್ ಸಂಗಕ್ಕಾರ 353 ಇನ್ನಿಂಗ್ಸ್‌ಗಳಲ್ಲಿ 482 ಬಾರಿ ಬ್ಯಾಟ್ಸ್‌ಮನ್‌ಗಳು ಔಟಾಗಲು ಕಾರಣರಾಗಿದ್ದಾರೆ. ಇದರಲ್ಲಿ 383 ಕ್ಯಾಚ್‌ಗಳಾಗಿದ್ದರೆ 99 ದಾಂಡಿಗರನ್ನು ಸ್ಟಂಪ್ ಮೂಲಕ ಫೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸ್ಟಂಪ್ ವಿಕೆಟ್ ದಾಖಲೆಯಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಟಾಪ್-1 ಎಂಎಸ್ ಧೋನಿ

ಟಾಪ್-1 ಎಂಎಸ್ ಧೋನಿ

ಅತಿ ಹೆಚ್ಚು ಬಾರಿ ಸ್ಟಂಪ್ ಔಟ್ ಮಾಡಿದ ದಾಖಲೆ ಟೀಮ್ ಇಂಡಿಯಾದ ದಿಗ್ಗಜ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. ಅತ್ಯಂತ ವೇಗದ ಸ್ಟಂಪ್‌ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಕ್ಷಣಾರ್ಧದಲ್ಲಿ ಬಲಿ ಪಡೆಯುವ ಚಾಣಾಕ್ಷತನ ಹೊಂದಿರುವ ಧೋನಿ 310 ಒಡಿಐನಲ್ಲಿ 401 ದಾಂಡಿಗರನ್ನು ಬಲಿ ಪಡೆದಿದ್ದಾರೆ. ಇದರಲ್ಲಿ ಬರೊಬ್ಬರಿ 126 ಆಟಗಾರರನ್ನು ಸ್ಟಂಪ್ ಮೂಲಕ ಧೋನಿ ಔಟ್ ಮಾಡಿ ದಾಖಲೆಯನ್ನು ಬರೆದಿದ್ದಾರೆ. ಈ ಮೂಲಕ ನಂಬರ್ 1 ಸ್ಥಾನದಲ್ಲಿ ಧೋನಿ ವಿರಾಜಮಾನರಾಗಿದ್ದಾರೆ.

Story first published: Monday, June 1, 2020, 17:22 [IST]
Other articles published on Jun 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X