ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನರೇಂದ್ರ ಮೋದಿ ಸ್ಟೇಡಿಯಂ.. ರಿಲಯನ್ಸ್ ಎಂಡ್, ಅದಾನಿ ಎಂಡ್!

Motera renamed as narendra modi stadium ends as adani end and reliance end

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಅಹ್ಮದಾಬಾದ್‌ನಲ್ಲಿ ಮರುನಿರ್ಮಾಣವಾಗಿರುವ ಮೊಟೇರಾ ಸ್ಟೇಡಿಯಂನಲ್ಲಿ ಆರಂಭವಾಗಿದೆ. ಈ ಪಂದ್ಯದ ಟಾಸ್‌ಗೂ ಮುನ್ನ ಭಾರತದ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಈ ಸ್ಟೇಡಿಯಂಗೆ ಮರುನಾಮಕರಣ ಮಾಡಿದ್ದಾರೆ. ಈ ಹಿಂದೆ ಸರ್ದಾರ್ ವಲ್ಲಭಬಾಯಿ ಪಟೇಲ್ ಎಂದು ಹೆಸರನ್ನು ಹೊಂದಿದ್ದ ಈ ಸ್ಟೇಡಿಯಂ ಈಗ ನರೇಂದ್ರ ಮೋದಿ ಸ್ಟೇಡಿಯಂ ಎಂದು ಬದಲಾಗಿದೆ.

ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನ ಜೊತೆಗೆ ಸ್ಟ್ಯಾಂಡ್‌ಗಳಿಗೆ ಇಟ್ಟಿರುವ ಹೆಸರು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಅದಾನಿ ಪ್ರೀಮಿಯಮ್ ಸೆಂಟರ್, ಅದಾನಿ ಪ್ರೀಮಿಯಮ್ ವೆಸ್ಟ್ ಹಾಗೂ ಅದಾನಿ ಪ್ರೀಮಿಯಮ್ ಈಸ್ಟ್ ಮತ್ತು ರಿಲಯನ್ಸ್ E, ರಿಲಯನ್ಸ್ N ಎಂಬ ಸ್ಟಾಂಡ್‌ಗಳನ್ನು ಹೊಂದಿದೆ. ಹೀಗಾಗಿ ಕ್ರೋಡಾಂಗಣದ ಎರಡು ತುದಿಗಳನ್ನು 'ಅದಾನಿ ಎಂಡ್' ಹಾಗೂ 'ರಿಲಯನ್ಸ್ ಎಂಡ್' ಎಂದು ಗುರುತಿಸಲಾಗುತ್ತಿದೆ.

ಮೊಟೆರಾ ಸ್ಟೇಡಿಯಂ ಇನ್ಮುಂದೆ 'ನರೇಂದ್ರ ಮೋದಿ ಸ್ಟೇಡಿಯಂ'ಮೊಟೆರಾ ಸ್ಟೇಡಿಯಂ ಇನ್ಮುಂದೆ 'ನರೇಂದ್ರ ಮೋದಿ ಸ್ಟೇಡಿಯಂ'

ಭಾರತದ ಇಬ್ಬರು ಖ್ಯಾತ ಉದ್ಯಮ ಸಂಸ್ಥೆಗಳಾದ ರಿಲಯನ್ಸ್ ಹಾಗೂ ಅದಾನಿ ಪ್ರದಾನಿ ನರೇಂದ್ರ ಮೋದಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾರಣ ರಾಜಕೀಯವಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿತ್ತು. ಆದರೆ ಈಗ ಕ್ರಿಕೆಟ್ ಕ್ರೀಡಾಂಗಣದಲ್ಲೂ ನರೇಂದ್ರ ಮೋದಿ ಹೆಸರು ನಾಮಕರಣ ಮಾಡಿದ ನಂತರ ಸ್ಟ್ಯಾಂಡ್‌ಗಳಿಗೆ ಇದೇ ಉದ್ಯಮ ಸಂಸ್ಥೆಗಳ ಹೆಸರಿಟ್ಟಿರುವುದು ಟ್ವಿಟ್ಟರ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.

ಒಂದೆಡೆ ಸರ್ದಾರ್ ವಲ್ಲಭಬಾಯ್ ಪಟೇಲ್ ಹೆಸರನ್ನು ಹೊಂದಿದ್ದ ಈ ಸ್ಟೇಡಿಯಮ್‌ಗೆ ಪ್ರಧಾನಿ ನರೇಂದ್ರ ಮೋದಿ ಹೆಸರಿಟ್ಟಿರುವುದು ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಎರಡು ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಈ ವಿಚಾರವಾಗಿ ಟ್ವಿಟ್ಟರ್‌ನಲ್ಲಿ ಕಿತ್ತಾಡುವುದಕ್ಕೆ ಇದು ಕಾರಣವಾಗಿದೆ.

Story first published: Wednesday, February 24, 2021, 17:52 [IST]
Other articles published on Feb 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X