ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಮೈದಾನಕ್ಕಿಳಿದ ಸುರೇಶ್ ರೈನಾ: ಕಂಬ್ಯಾಕ್ ಮಾಡಲು ಅಭ್ಯಾಸ ಶುರು

Suresh raina

ಟೀಂ ಇಂಡಿಯಾ ಮಾಜಿ ಆಟಗಾರ, ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್ ಸುರೇಶ್‌ ರೈನಾ ಪ್ಯಾಡ್ ಕಟ್ಟಿ ಮತ್ತೆ ಮೈದಾನಕ್ಕಿಳಿದಿದ್ದು, ಅಭ್ಯಾಸ ಶುರು ಮಾಡಿದ್ದಾರೆ. ತನ್ನ ಇತ್ತೀಚಿನ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿರುವ ರೈನಾ ಭರ್ಜರಿ ಅಭ್ಯಾಸ ಶುರು ಮಾಡಿದ್ದಾರೆ.

ಸುರೇಶ್ ರೈನಾ ಜೊತೆಗೆ ಅಭ್ಯಾಸದ ವೇಳೆಯಲ್ಲಿ ಉತ್ತರ ಪ್ರದೇಶದ ಬ್ಯಾಟರ್ ನಳಿನ್ ಮಿಶ್ರಾ ಕೂಡ ಕಾಣಿಸಿಕೊಂಡಿದ್ದು, ಬಹಳ ಸಮಯದ ಬಳಿಕ ಕ್ರಿಕೆಟ್ ಮೈದಾನಕ್ಕಿಳಿದಿರುವ ರೈನಾಗೆ ಸಾಥ್ ನೀಡಿದ್ದಾರೆ. ಸುರೇಶ್ ರೈನಾರ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ತನ್ನ ನಾಯಕ ಹಾಗೂ ಪ್ರಾಣ ಸ್ನೇಹಿತ ಎಂ.ಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ತಾನೂ ಕೂಡ ಅಂತರಾಷ್ಟ್ರೀಯ ಕ್ರಿಕೆಟ್ ಕೆರಿಯರ್‌ಗೆ ಗುಡ್‌ಬೈ ಹೇಳಿದ ರೈನಾ ಕಳೆದ ಬಾರಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದಿಂದ ಹೊರಬಿದ್ದಿದ್ದಲ್ಲದೆ ಯಾವುದೇ ಫ್ರಾಂಚೈಸಿಯ ಮನ ಗೆಲ್ಲುವಲ್ಲಿ ವಿಫಲಗೊಂಡರು.

ಐಪಿಎಲ್‌ಗೆ ಗುಡ್‌ಬೈ ಹೇಳುವ ಹೊತ್ತಲ್ಲಿ ಕಂಬ್ಯಾಕ್ ಮಾಡುವ ಯೋಚನೆಯಲ್ಲಿ ರೈನಾ!

ಐಪಿಎಲ್‌ಗೆ ಗುಡ್‌ಬೈ ಹೇಳುವ ಹೊತ್ತಲ್ಲಿ ಕಂಬ್ಯಾಕ್ ಮಾಡುವ ಯೋಚನೆಯಲ್ಲಿ ರೈನಾ!

ಕಳೆದ ಐಪಿಎಲ್ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿಗೂ ಬೇಡವಾಗದ ಮಿಸ್ಟರ್ ಐಪಿಎಲ್ ಸುರೇಶ್ ರೈನಾ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಬೇಕೆನ್ನುವ ಹೊತ್ತಿನಲ್ಲಿ ಮತ್ತೆ ಬ್ಯಾಟ್ ಹಿಡಿದಿದ್ದಾರೆ. ಇಲ್ಲಿಯವರೆಗೆ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರೈನಾ ಮೈದಾನದಲ್ಲಿ ಅಭ್ಯಾಸಕ್ಕಾಗಿ ಕಣಕ್ಕೆ ಇಳಿದಿದ್ದರು. ಅವರು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಕೆಲವು ಆಟಗಾರರೊಂದಿಗೆ ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸವನ್ನು ತೆಗೆದುಕೊಳ್ಳುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ರೈನಾ ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಐಪಿಎಲ್‌ನಲ್ಲಿ ಸಾಕಷ್ಟು ಅಭಿಮಾನಿಗಳನ್ನ ಹೊಂದಿರುವ ಪ್ಲೇಯರ್

ಐಪಿಎಲ್‌ನಲ್ಲಿ ಸಾಕಷ್ಟು ಅಭಿಮಾನಿಗಳನ್ನ ಹೊಂದಿರುವ ಪ್ಲೇಯರ್

ರೈನಾಗೆ ಸಾಕಷ್ಟು ಅಭಿಮಾನಿಗಳಿರುವುದು ಗೊತ್ತೇ ಇದೆ. ಅವರು ಕಳೆದ ಐಪಿಎಲ್‌ ಸೀಸನ್‌ನಲ್ಲಿ ಕಾಣಿಸಿಕೊಳ್ಳದಿದ್ದಾಗ ಅನೇಕ ಅಭಿಮಾನಿಗಳು ನಿರಾಶೆಗೊಂಡರು. ಕೆಲವರು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ವಿರುದ್ಧ ಕಿಡಿಕಾರಿದರು. ರೈನಾ ಇದ್ದಾಗಲೆಲ್ಲ ತಂಡ ಪ್ಲೇಆಫ್ ತಲುಪಿತ್ತು. ಆದರೆ 2020 ಮತ್ತು 2022ರಲ್ಲಿ ರೈನಾ ತಂಡದಿಂದ ದೂರವಿದ್ದ ಕಾರಣ ಎರಡೂ ಬಾರಿ ಲೀಗ್ ಹಂತದಲ್ಲಿ ಸೋಲು ಕಂಡಿತ್ತು. ಚೆನ್ನೈ ಪರ ನಿಷ್ಠಾವಂತ ಆಟಗಾರ ರೈನಾ ಅವರನ್ನು ತಂಡ ಏಕೆ ನಂಬಲಿಲ್ಲ ಎಂದು ಹಿಡಿ ಶಾಪ ಹಾಕಿದ್ದರು.

ರಾಹುಲ್ - ಅಥಿಯಾ ಶೆಟ್ಟಿ ಮದುವೆ ಫಿಕ್ಸ್: ದಿನಾಂಕದ ಬಗ್ಗೆ ಮುಕ್ತವಾಗಿ ಮಾತನಾಡಿದ ಸುನಿಲ್ ಶೆಟ್ಟಿ!

'ಫಸ್ಟ್ ಲವ್‌' ಕ್ರಿಕೆಟ್ ಎಂದು ವೀಡಿಯೋಗೆ ಶೀರ್ಷಿಕೆ

ರೈನಾ ಅಭ್ಯಾಸ ನಡೆಸಿರುವ ವೀಡಿಯೋಗೆ ಫಸ್ಟ್ ಲವ್ ಕ್ರಿಕೆಟ್‌, ಮತ್ತೆ ಮೈದಾನಕ್ಕೆ ಇಳಿದಿದ್ದೇನೆ ಎಂಬ ಶೀರ್ಷಿಕೆಯನ್ನ ನೀಡಿದ್ದಾರೆ. ಈ ಮೂಲಕ ಸುರೇಶ್ ರೈನಾ ಮತ್ತೆ ಕ್ರಿಕೆಟ್‌ಗೆ ಕಂಬ್ಯಾಕ್ ಮಾಡುವ ಯೋಚನೆ ಹೊಂದಿದ್ದಾರೆ. ದಿನೇಶ್ ಕಾರ್ತಿಕ್ ರೀತಿಯಲ್ಲಿ ಟೀಂ ಇಂಡಿಯಾಗೆ ವಾಪಸ್ಸಾಗುವುದು ಕನಸಿನ ಮಾತಾದ್ರೂ ಸಹ, ಐಪಿಎಲ್‌ಗೆ ಕಂಬ್ಯಾಕ್ ಆಗುವುದು ಸುರೇಶ್‌ ರೈನಾ ಪ್ರಮುಖ ಗುರಿಯಾಗಿದೆ.

ಜಡೇಜಾ ಹೊರನಡೆದರೆ, ರೈನಾಗೆ ಮಣೆ ಹಾಕುವ ಸಾಧ್ಯತೆ!

ಜಡೇಜಾ ಹೊರನಡೆದರೆ, ರೈನಾಗೆ ಮಣೆ ಹಾಕುವ ಸಾಧ್ಯತೆ!

ಮುಂದಿನ ಐಪಿಎಲ್ ಸೀಸನ್‌ನಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ ಬಹುತೇಕ ಸಿಎಸ್‌ಕೆ ತಂಡವನ್ನ ತೊರೆಯುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹೀಗಗಿ ಮುಂದಿನ ಋತುವಿನಲ್ಲಿ ರೈನಾ ಅವರನ್ನು ಚೆನ್ನೈ ತೆಗೆದುಕೊಂಡರೆ, ಅಭಿಮಾನಿಗಳಿಂದ ಭರ್ಜರಿ ಬೆಂಬಲ ಸಿಗುವುದು ಖಚಿತ. ಏಕೆಂದರೆ ರೈನಾ ಅಭಿಮಾನಿಗಳು ಅವರ ಪುನರಾಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಆಟದಿಂದ ದೂರ ಸರಿದು ಎರಡು ವರ್ಷ ಕಳೆದರೂ ರೈನಾ ಕ್ರೇಜ್ ಕಡಿಮೆಯಾಗಿಲ್ಲ. ರೈನಾ ಪೋಸ್ಟ್ ಮಾಡಿರುವ ಇತ್ತೀಚಿನ ವಿಡಿಯೋ ಇದಕ್ಕೆ ಸಾಕ್ಷಿ. ನೆಟಿಜನ್‌ಗಳು ಕೂಡ ಈ ವಿಡಿಯೋಗೆ ಕಮ್ ಬ್ಯಾಕ್ ಲೋಡಿಂಗ್, ಮಾನ್ಸ್ಟರ್ ಈಸ್ ಬ್ಯಾಕ್, ಚಿನ್ನ ತಲ ಎಂದು ವಿಭಿನ್ನ ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ. ಆದರೆ ರೈನಾ ಈ ಅಭ್ಯಾಸವನ್ನು ಏಕೆ ಮಾಡುತ್ತಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Ind vs Pak: ಭಾರತದಲ್ಲಿ ಹುಟ್ಟಿ, ಪಾಕಿಸ್ತಾನ ಪರ ಆಡಿದ ಮೂವರು ಕ್ರಿಕೆಟಿಗರು

ಸುರೇಶ್ ರೈನಾ ಹೆಸರಲ್ಲಿದೆ ಅನೇಕ ದಾಖಲೆಗಳು

ಸುರೇಶ್ ರೈನಾ ಹೆಸರಲ್ಲಿದೆ ಅನೇಕ ದಾಖಲೆಗಳು

ಟಿ20 ಕ್ರಿಕೆಟ್‌ನಲ್ಲಿ ಸುರೇಶ್ ರೈನಾ ಅನೇಕ ದಾಖಲೆಗಳ ಒಡೆಯನಾಗಿದ್ದಾನೆ. ಅದ್ರಲ್ಲೂ ಐಪಿಎಲ್‌ನಲ್ಲಂತೂ ಈತ ಸಾರ್ವಕಾಲಿಕ ಬೆಸ್ಟ್ ಬ್ಯಾಟರ್‌ಗಳಲ್ಲಿ ಒಬ್ಬಾತ. ನಾಲ್ಕು ಬಾರಿ ಐಪಿಎಲ್ ಟ್ರೋಫಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸದಸ್ಯರಾಗಿದ್ದರು.

ಅವರು ತಮ್ಮ ಟಿ20 ವೃತ್ತಿಜೀವನದಲ್ಲಿ 6000 ಮತ್ತು 7000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರರಾಗಿದ್ದಾರೆ. ಐಪಿಎಲ್‌ನಲ್ಲಿ 5,000 ರನ್ ಪೂರೈಸಿದ ಮೊದಲ ಕ್ರಿಕೆಟಿಗ. 205
ಐಪಿಎಲ್ ಪಂದ್ಯಗಳಲ್ಲಿ 5528 ರನ್ ಕಲೆಹಾಕಿರುವ ರೈನಾ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಜೊತೆಗೆ 39 ಅರ್ಧಶತಕ ಹಾಗೂ ಒಂದು ಶತಕ ಈತನ ಹೆಸರಿನಲ್ಲಿದೆ.

ಐಪಿಎಲ್‌ನ ಮೊದಲ ಏಳು ಸೀಸನ್‌ಗಲ್ಲಿ ಸ್ಥಿರವಾಗಿ 400ಕ್ಕೂ ಹೆಚ್ಚು ರನ್ ಕಲೆಹಾಕಿರುವ ಸುರೇಶ್ ರೈನಾ, ಮಿಸ್ಟರ್ ಐಪಿಎಲ್ ಎಂಬ ಬಿರುದನ್ನ ಸಹ ಪಡೆದಿದ್ದಾರೆ. ಹೀಗಿರುವಾಗ 35 ವರ್ಷದ ರೈನಾ ಮತ್ತೆ ಐಪಿಎಲ್‌ಗೆ ಕಂಬ್ಯಾಕ್ ಮಾಡಲಿದ್ದಾರಾ? ಅಥವಾ ವಿಶ್ವದ ಬೇರೆ ಟಿ20 ಲೀಗ್‌ನಲ್ಲಿ ಆಡಲಿದ್ದಾರ? ಎಂಬುದು ಸದ್ಯದ ಪ್ರಶ್ನೆಯಾಗಿದೆ.

Story first published: Thursday, August 25, 2022, 10:29 [IST]
Other articles published on Aug 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X