ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಮತ್ತು ರೋಹಿತ್ ಶರ್ಮಾ ನಾಯಕತ್ವದಲ್ಲಿ ಹೋಲಿಕೆಯಿದೆ: ದೀಪಕ್ ಚಾಹರ್

Ms Dhoni And Rohit Sharma Have Similarities In Their Captaincy Styles: Deepak Chahar

ಟೀಮ್ ಇಂಡಿಯಾದ ವೇಗಿ ದೀಪಕ್ ಚಾಹರ್ ಮಾಜಿ ನಾಯಕ ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ನಾಯಕತ್ವದಲ್ಲಿ ಸಾಕಷ್ಟು ಹೋಲಿಕೆಯಿದ ಎಂದು ಹೇಳಿದ್ದಾರೆ. ಇಬ್ಬರೂ ನಾಯಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೇಗದ ಬೌಲರ್ ಆಗಿ ತಾನು ಮಿಂಚಲು ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದು ಚಾಹರ್ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ನಾಯಕನಾಗಿ ಎಂ ಎಸ್ ಧೋನಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಅಂಗಳದಲ್ಲಿ ಸಾಕಷ್ಟು ಶಾಂತವಾಗಿರುತ್ತಾರೆ. ಆ ಮೂಲಕ ಆಟಗಾರರ ಆಟದಲ್ಲಿ ಅತ್ಯುತ್ತಮವಾಗಿರುವುದನ್ನು ಪಟೆದುಕೊಳ್ಳಲ್ಲು ಪ್ರಯತ್ನಿಸುತ್ತಾರೆ ಎಂದು ದೀಪಕ್ ಚಾಹರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಚಾಹಲ್‌ನಿಂದ ಬೇಸತ್ತು ಹೋಗಿದ್ದೇವೆ ಎಂದು ಅಳಲನ್ನು ತೋಡಿಕೊಂಡ ಕ್ರಿಸ್ ಗೇಲ್!ಚಾಹಲ್‌ನಿಂದ ಬೇಸತ್ತು ಹೋಗಿದ್ದೇವೆ ಎಂದು ಅಳಲನ್ನು ತೋಡಿಕೊಂಡ ಕ್ರಿಸ್ ಗೇಲ್!

ದೀಪಕ್ ಚಾಹಲ್ ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇಂಗ್ಲೆಂಡ್‌ನಲ್ಲಿ ಪದಾರ್ಪಣೆಯನ್ನು ಮಾಡಿದ್ದಾರೆ. ಧೋನಿ ನಾಯಕತ್ವದಲ್ಲಿ ಚಾಹರ್ ಮೊದಲಿಗೆ ರೈಸಿಂಗ್ ಪುಣೆ ಸೂಒಪರ್ ಜೈಂಟ್ಸ್ ತಂಡದಲ್ಲಿದ್ದು ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೂ ಆಡಿದ್ದಾರೆ. ಮತ್ತೊಂದೆಡೆ ರೋಹಿತ್ ಶರ್ಮಾ ನಾಯಕತ್ವದಲ್ಲಿ 2019ರಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ಮೂರು ಪಂದ್ಯಗಳಲ್ಲಿ ಆಡಿದ ಚಾಹರ್ 8 ವಿಕೆಟ್ ಕಿತ್ತು ಮಿಂಚಿದ್ದರು.

ಪ್ರತಿಯೊಬ್ಬರೂ ಅವರದ್ದೇ ಆದ ಶೈಲಿಯನ್ನು ಹೊಂದಿದ್ದಾರೆ. ನಾಯಕನಾಗಿ ವಿರಾಟ್ ಕೊಹ್ಲಿ ಅಗ್ರೆಸ್ಸಿವ್ ಆಗಿರುತ್ತಾರೆ. ಅದರೆ ಎಂಎಸ್ ಧೋನಿ ಮತ್ತು ರೋಹಿತ್ ಇಬ್ಬರೂ ಮೈದಾನದಲ್ಲಿ ಅತ್ಯಂತ ಶಾಂತವಾಗಿರುತ್ತಾರೆ. ಅವರಿಬ್ಬರೂ ಅಂಗಳದಲ್ಲಿ ತಮ್ಮ ತಾಳ್ಮೆಯನ್ನು ಸುಲಭಕ್ಕೆ ಕಳೆದುಕೊಳ್ಳುವುದಿಲ್ಲ, ಜೊತೆಗೆ ಆಟಗಾರರಿಂದ ಅತ್ಯುತ್ತಮ ಆಟವನ್ನು ಪಡೆಯಲು ಪ್ರಯತ್ನಿಸುತ್ತಾರೆ ಎಂದು ದೀಪಕ್ ಚಾಹರ್ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಠಿಣ ಬ್ಯಾಟ್ಸ್‌ಮನ್ ಎಂದು ಭಾರತೀಯನ ಹೆಸರು ಹೇಳಿದ ನಂಬರ್ 1 ಬೌಲರ್ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಠಿಣ ಬ್ಯಾಟ್ಸ್‌ಮನ್ ಎಂದು ಭಾರತೀಯನ ಹೆಸರು ಹೇಳಿದ ನಂಬರ್ 1 ಬೌಲರ್

ಧೊನಿ ಮತ್ತು ರೋಹಿತ್ ನಾಯಕತ್ವದಲ್ಲಿ ಆಡಲು ಇಷ್ಟಪಡುತ್ತೇನೆ ಎಂದು ಹೇಳಿದ ದೀಪಕ್ ಚಾಹರ್ ಇಬ್ಬರ ನಡುವಿನ ವ್ಯತ್ಯಾಸವನ್ನೂ ಹೇಳಿದರು. ಗೆಲುವಿನ ಸೂತ್ರವನ್ನು ಹಿಡಿಯುವ ಸಲುವಾಗಿ ಧೋನಿ ಹೆಚ್ಚಾಗಿ ಆಡುವ ತಂಡದಲ್ಲಿ ಬದಲಾವಣೆ ಮಾಡಲು ಬಯಸುವುದಿಲ್ಲ, ಆದರೆ ರೋಹಿತ್ ಶರ್ಮಾ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳಿದ್ದಾರೆ.

Story first published: Sunday, April 26, 2020, 18:06 [IST]
Other articles published on Apr 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X