ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ ನಿವೃತ್ತಿ!

MS Dhoni announces retirement from international cricket

ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮೈದಾನಕ್ಕಿಳಿಯುವುದನ್ನು, ಅನಂತರ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಮಾಹಿ ಅಚಾನಕ್ ನಿವೃತ್ತಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ತಾನು ನಿವೃತ್ತಿ ನೀಡುತ್ತಿರುವುದನ್ನು ಧೋನಿ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಇಂಗ್ಲಿಷ್‌ನಲ್ಲಿ ಸ್ಟೋರಿ ಓದಿ | BIG NEWS: Former Indian captain MS Dhoni announces retirement

'ನನ್ನನ್ನು ಪ್ರೀತಿಸಿದ್ದಕ್ಕಾಗಿ, ಬೆಂಬಲಿಸಿದಕ್ಕಾಗಿ ಅನಂತ ಧನ್ಯವಾದಗಳು. 19:29 (7: 29 pm) ಸಮಯದಿಂದ ನಾನು ನಿವೃತ್ತಿಯಾಗಿದ್ದೇನೆಂದು ಪರಿಗಣಿಸಿ,' ಎಂದು ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಟಿ20ಐ: ವಿಶ್ವದಾಖಲೆ ಬರೆದ ಭಾರತೀಯೆ ಅನುರಾಧಾ ದೊಡ್ಡಬಳ್ಳಾಪುರ!ಟಿ20ಐ: ವಿಶ್ವದಾಖಲೆ ಬರೆದ ಭಾರತೀಯೆ ಅನುರಾಧಾ ದೊಡ್ಡಬಳ್ಳಾಪುರ!

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವಾಗಲೂ ಧೋನಿ ಅನಿರೀಕ್ಷಿತ ನಿರ್ಧಾರ ಪ್ರಕಟಿಸಿ ಅಘಾತ ನೀಡಿದ್ದರು. ಈ ಬಾರಿಯೂ ಹೀಗೇ ಮಾಡಿದ್ದಾರೆ.

ಸ್ಪಷ್ಟವಾಗಿ ಏನೂ ಬರೆದಿಲ್ಲ

ಸ್ಪಷ್ಟವಾಗಿ ಏನೂ ಬರೆದಿಲ್ಲ

ತಾನು ಮಾಡಿದ್ದ ಪೋಸ್ಟ್‌ನಲ್ಲಿ ಧೋನಿ ಯಾವ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂಬುದನ್ನು ತಿಳಿಸಿಲ್ಲ. ಒಟ್ಟಿನಲ್ಲಿಅಂತಾರಾಷ್ಟ್ರೀಯ ನಿವೃತ್ತಿಯನ್ನಂತೂ ಹೇಳಿಕೊಂಡಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ಐಪಿಎಲ್ ಆರಂಭಗೊಳ್ಳುವುದರಲ್ಲಿದೆ. ಅದಕ್ಕೂ ಮುನ್ನವೇ ಧೋನಿ ಶಾಕ್ ನೀಡಿದ್ದಾರೆ.2019ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಭಾರತ 19:29 ಗಂಟೆಗೆ ಟೂರ್ನಿಯಿಂದ ಹೊರ ಬಿದ್ದಿತ್ತು. ಭಾನುವಾರ ಇದೇ ಸಮಯಕ್ಕೆ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಕಳೆದ ವರ್ಷ ಕಡೇಯ ಪಂದ್ಯ

ಕಳೆದ ವರ್ಷ ಕಡೇಯ ಪಂದ್ಯ

ತಲೈವಾ ಧೋನಿ ಕಡೇಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದು 2019ರ ಐಸಿಸಿ ವಿಶ್ವಕಪ್‌ನಲ್ಲಿ. ಭಾರತ ತಂಡ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಟೂರ್ನಿಯಿಂದ ಹೊರ ಬಿದ್ದಿತ್ತು. ಅದೇ ಧೋನಿ ಆಡಿದ ಕಡೇಯ ಪಂದ್ಯ. ಅದಾಗಿ ತಾನಾಗಿ ವಿಶ್ರಾಂತಿ ಪಡೆದಿದ್ದ ಧೋನಿಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಅವಕಾಶವೇ ಲಭಿಸಲಿಲ್ಲ. ಧೋನಿ ತಾನಾಗೇ ಕ್ರಿಕೆಟ್‌ನಿಂದ ದೂರ ಉಳಿಯುತ್ತಿದ್ದಾರೆ ಎಂಬ ಮಾತುಗಳೂ ಕ್ರಿಕೆಟ್‌ ಲೋಕದಲ್ಲಿ ಕೇಳಿ ಬಂದಿತ್ತು.

ಎಂಎಸ್‌ಡಿ ಪ್ರಮುಖ ಸಾಧನೆಗಳು

ಎಂಎಸ್‌ಡಿ ಪ್ರಮುಖ ಸಾಧನೆಗಳು

2014ರಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಹತ್ತಿರ 16 ವರ್ಷಗಳ ವೃತ್ತಿ ಬದುಕು ಕಂಡಿರುವ ಧೋನಿ ಟೀಮ್ ಇಂಡಿಯಾಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಭಾರತದ ಅತೀ ಯಶಸ್ವಿ ನಾಯಕ ಅನ್ನಿಸಿಕೊಂಡಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ 2007ರ ಟಿ20 ವಿಶ್ವಕಪ್‌, 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದು ವಿಶ್ವದಲ್ಲಿ ಮಿನುಗಿತ್ತು.

ವೃತ್ತಿ ಜೀವನದ ಅಂಕಿ-ಅಂಶಗಳು

ವೃತ್ತಿ ಜೀವನದ ಅಂಕಿ-ಅಂಶಗಳು

90 ಟೆಸ್ಟ್ ಪಂದ್ಯಗಳನ್ನಾಡಿರುವ ಧೋನಿ 38.09ರ ಸರಾಸರಿಯಲ್ಲಿ 4876 ರನ್ ಗಳಿಸಿದ್ದಾರೆ. 6 ಶತಕಗಳನ್ನು ಬಾರಿಸಿದ್ದಾರೆ. 350 ಏಕದಿನ ಪಂದ್ಯಗಳಲ್ಲಿ 10773 ರನ್, 10 ಶತಕ ಗಳಿಸಿದ್ದಾರೆ. ಇನ್ನು 98 ಟಿ20ಐ ಪಂದ್ಯಗಳಲ್ಲಿ 1617 ರನ್, 2 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಧೋನಿ ಮುಂದಾಳತ್ವದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

Story first published: Sunday, August 16, 2020, 14:17 [IST]
Other articles published on Aug 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X