ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ಸೆ.ಫೈನಲ್‌ನಲ್ಲಿ ಧೋನಿ ನಂ.7ರಲ್ಲಿ ಬಂದಿದ್ದರ ಸತ್ಯ ಬಿಚ್ಚಿಟ್ಟ ಬಂಗಾರ್!

ಪತ್ರಕರ್ತರ ಪ್ರಶ್ನೆಗೆ ಟೀಂ ಇಂಡಿಯಾ ಕೋಚ್ ಕೊಟ್ಟ ಉತ್ತರ ಏನು ಗೊತ್ತಾ..? | Oneindia Kannada
MS Dhoni at No 7 wasn’t my decision alone, Says batting coach Sanjay Bangar

ನವದೆಹಲಿ, ಆಗಸ್ಟ್ 2: ವಿಶ್ವಕಪ್ ಟೂರ್ನಿಯಲ್ಲಿ ಬಹುತೇಕ ಪಂದ್ಯಗಳಲ್ಲಿ ಗೆಲುವನ್ನು ಸಂಭ್ರಮಿಸಿದ್ದ ಟೀಮ್ ಇಂಡಿಯಾ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡಲು ಅತೀ ಪ್ರಮುಖ ಅನ್ನಿಸಿದ್ದ ಪಂದ್ಯದಲ್ಲೇ ಸೋಲಿನ ಮುಖಭಂಗ ಅನುಭವಿಸಿತ್ತು. ನ್ಯೂಜಿಲೆಂಡ್ ವಿರುದ್ಧದ ಸೋಲಿನೊಂದಿಗೆ ಭಾರತದ ವಿಶ್ವಕಪ್ ಟ್ರೋಫಿ ಕನಸು ಮುರಿದು ಬಿದ್ದಿತ್ತು.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XIವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XI

ಪಂದ್ಯ ಮುಗಿದಿದ್ದೇ; ಕ್ರಿಕೆಟ್ ಪರಿಣಿತರು ಮತ್ತು ಅನೇಕ ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿ ಬಳಗದ ಬ್ಯಾಟಿಂಗ್ ವೈಫಲ್ಯ, ಸೋಲಿಗೆ ಕಾರಣ ಎಂದಿದ್ದರು. ಸೆಮಿಫೈನಲ್‌ನಲ್ಲಿ ಬ್ಯಾಟಿಂಗ್ ಆರ್ಡರ್‌ನಲ್ಲಿನ ಬದಲಾವಣೆಯೂ ಸೋಲಿಗೆ ನೆಪವಾಗಿ ಎಲ್ಲರಿಗೂ ಕಾಣಿಸಿತ್ತು.

'ಕೊಹ್ಲಿ ಬದಲು ರೋಹಿತ್ ನಾಯಕನಾಗಬೇಕೆ?' ಪ್ರಶ್ನೆಗೆ ಉತ್ತರಿಸಿದ ಅಖ್ತರ್'ಕೊಹ್ಲಿ ಬದಲು ರೋಹಿತ್ ನಾಯಕನಾಗಬೇಕೆ?' ಪ್ರಶ್ನೆಗೆ ಉತ್ತರಿಸಿದ ಅಖ್ತರ್

ಸೆಮಿಫೈನಲ್ ನಲ್ಲಿ ಧೋನಿ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದರ ಬಗ್ಗೆ ಸಂಜಯ್ ಬಂಗಾರ್ ಮಾತನಾಡಿದ್ದಾರೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ 2014ರಿಂದ ಜವಾಬ್ದಾರಿ ಹೊತ್ತಿದ್ದ ಬಂಗಾರ್, 50 ಟೆಸ್ಟ್, 119 ಏಕದಿನ ಪಂದ್ಯಗಳಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು.

ಬ್ಯಾಟಿಂಗ್ ಕ್ರಮಾಂಕ ಬದಲಾವಣೆ

ಬ್ಯಾಟಿಂಗ್ ಕ್ರಮಾಂಕ ಬದಲಾವಣೆ

ಮುಖ್ಯವಾಗಿ ಸೆಮಿಫೈನಲ್ ಪಂದ್ಯದಲ್ಲಿ ಧೋನಿಯನ್ನು 7ನೇ ಕ್ರಮಾಂಕದಲ್ಲಿ ತಂದಿದ್ದೇ ಸೋಲಿಗೆ ಕಾರಣ. ಯಾವಾಗಲೂ 5ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯುತ್ತಿದ್ದ ಧೋನಿ, ಸೆಮಿಫೈನಲ್‌ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಎತ್ತಿಕೊಳ್ಳುವಲ್ಲಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಸಂಜಯ್ ಸ್ಪಷ್ಟನೆ ನೀಡಿದ್ದಾರೆ.

ನಿಜಕ್ಕೂ ಮೆಚ್ಚಿಕೊಳ್ಳಬೇಕು

ನಿಜಕ್ಕೂ ಮೆಚ್ಚಿಕೊಳ್ಳಬೇಕು

ಹಿಂದುಸ್ತಾನ್ ಟೈಮ್ಸ್ ಸಂದರ್ಶನವೊಂದರಲ್ಲಿ, ಧೋನಿ 7ನೇ ಕ್ರಮಾಂಕದಲ್ಲಿ ಬಂದಿದ್ದಕ್ಕೆ ಬಂಗಾರ್ ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು ಎಂಬ ಸುದ್ದಿಗಾರರ ಮಾತಿಗೆ ಉತ್ತರಿಸಿದ ಬಂಗಾರ್, 'ಹೀಗೆ ನನ್ನತ್ತ ಬೊಟ್ಟು ಮಾಡಿ ಮಾತನಾಡುವವರನ್ನು ನಿಜಕ್ಕೂ ಮೆಚ್ಚಿಕೊಳ್ಳಬೇಕು. ಯಾಕೆಂದರೆ ಬ್ಯಾಟಿಂಗ್ ಕ್ರಮಾಂಕದ ವಿಚಾರದಲ್ಲಿ ನಾನು ಒಬ್ಬನೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂಬ ವಿಚಾರ ಅವರಿಗೆ ಗೊತ್ತಿಲ್ಲವಲ್ಲ,' ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

ಬದಲಾವಣೆಗೆ ಬಯಸಿದ್ದೆವು

ಬದಲಾವಣೆಗೆ ಬಯಸಿದ್ದೆವು

'30-40ನೇ ಓವರ್ ಬಳಿಕ ಹೆಚ್ಚಿನ ರನ್ ಸೇರ್ಪಡೆಯತ್ತ ನಾವು ಯೋಚಿಸಿ, 5, 6 ಮತ್ತು 7ನೇ ಕ್ರಮಾಂಕದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಬಯಸಿದೆವು. ಇದನ್ನು ಸೆಮಿಫೈನಲ್ ಬಳಿಕ ವಿರಾಟ್ ಕೂಡ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಪಂದ್ಯದ ಬಳಿಕ ಧೋನಿಯನ್ನು ಕೊಂಚ ಕೆಳ ಕ್ರಮಾಂಕದಲ್ಲಿ ಇಳಿಸಲು ತಂಡ ನಿರ್ವಹಣಾ ಸಮಿತಿ ನಿರ್ಧರಿಸಿತ್ತು,' ಎಂದು ಬಂಗಾರ್ ವಿವರಿಸಿದರು.

ಹೊರೆ ಇಳಿಸುವ ಉಪಾಯ

ಹೊರೆ ಇಳಿಸುವ ಉಪಾಯ

ಅಫ್ಘಾನಿಸ್ತಾನ ಪಂದ್ಯದ ವರೆಗೂ 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರುತ್ತಿದ್ದ ಧೋನಿಯನ್ನು ಅನಂತರದ ಪಂದ್ಯಗಳಲ್ಲಿ ಕೊಂಚ ಕೆಳ ಕ್ರಮಾಂಕದಲ್ಲಿ ಇಳಿಸಲು ನಿರ್ಧಾರವಾಗಿತ್ತು. ಯಾಕೆಂದರೆ ಧೋನಿ 35 ಓವರ್‌ಗಳ ಬಳಿಕ ಆಡಿ, ಅಂತಿಮ ಓವರ್‌ನಲ್ಲಿ ತೀರಾ ಕೆಳ ಕ್ರಮಾಂಕದ ಬ್ಯಾಟ್ಸ್ಮನ್‌ಗಳ ಮೇಲಿನ ರನ್ ಹೊರೆ ಕಡಿಮೆಗೊಳಿಸುತ್ತಾರೆ ಎಂಬುದು ನಮ್ಮ ನಂಬಿಕೆಯಾಗಿತ್ತು. ಹೀಗಾಗಿ ಅನಂತರದ ಪಂದ್ಯಗಳಲ್ಲಿ 6ನೇ ಕ್ರಮಾಂಕದಲ್ಲಿ ಧೋನಿಯನ್ನು ಇಳಿಸಲಾಯ್ತು. ಸೆಮಿಫೈನಲ್‌ನಲ್ಲಿ 7ನೇ ಕ್ರಮಾಂಕದಲ್ಲಿ ಇಳಿಸಲಾಯ್ತು. ಆದರೆ ಈ ನಿರ್ಧಾರ ನನ್ನೊಬ್ಬನದ್ದಲ್ಲ,' ಎಂದು ಸಂಜಯ್ ತಿಳಿಸಿದ್ದಾರೆ.

Story first published: Friday, August 2, 2019, 11:55 [IST]
Other articles published on Aug 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X