ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

10 ಸಾವಿರ ರನ್ ಗಳ ಸರದಾರ ಎಂಎಸ್ ಧೋನಿಗೆ ಜೈಕಾರ!

By Mahesh
MS Dhoni completes 10000 ODI runs; becomes first batsman to enter elite club with 50+ average

ಲಾರ್ಡ್ಸ್, ಜುಲೈ 15: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರು ಶನಿವಾರದಂದು ಲಾರ್ಡ್ಸ್ ಅಂಗಳದಲ್ಲಿ ಹೊಸ ಇತಿಹಾಸ ನಿರ್ಮಿಸಿದರು. ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಸೋಲು ಕಂಡರೂ, ಧೋನಿ ಅವರ ವೈಯಕ್ತಿಕ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಭಾರತದ ನಾಲ್ಕನೇ ಹಾಗೂ ವಿಶ್ವದ 12ನೇ ಆಟಗಾರ ಎಂಬ ಸಾಧನೆಯನ್ನು 37 ವರ್ಷ ವಯಸ್ಸಿನ ಧೋನಿ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಭಾರತದ ಬ್ಯಾಟಿಂಗ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ನಂತರ ಧೋನಿ ಈ ಕ್ಲಬ್ ಸೇರಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ 10,000 ರನ್ ಪೂರೈಸಲು ಧೋನಿ ಅವರಿಗೆ 33 ರನ್ ಅಗತ್ಯವಿತ್ತು. ಇಂಗ್ಲೆಂಡ್ ವೇಗಿ ಲಿಯಾಮ್ ಪ್ಲಂಕಟ್ ಎಸೆದ 43ನೇ ಓವರ್‌ನಲ್ಲಿ ಒಂದು ರನ್ ಗಳಿಸಿದ ಧೋನಿ 10 ಸಾವಿರ ರನ್ ಗಳ ಗಡಿ ದಾಟಿದರು.

ವೃತ್ತಿಜೀವನದಲ್ಲಿ 5 ಅಥವಾ 6ನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 10,000 ರನ್ ಗಳಿಸಿರುವುದು ದೊಡ್ಡ ಸಾಧನೆ.ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗಳ ಪೈಕಿ ಶ್ರೀಲಂಕಾದ ಕುಮಾರ ಸಂಗಕ್ಕಾರ (14,234 ರನ್)ಬಳಿಕ ಈ ಸಾಧನೆ ಮಾಡಿದ ಎರಡನೇ ವಿಕೆಟ್ ಕೀಪರ್ ಎಂದರೆ ಧೋನಿ.

ವಿಶ್ವದ ಹಿರಿಯ ಬ್ಯಾಟ್ಸ್‌ಮನ್ ಧೋನಿ

ವಿಶ್ವದ ಹಿರಿಯ ಬ್ಯಾಟ್ಸ್‌ಮನ್ ಧೋನಿ

ಶ್ರೀಲಂಕಾದ ತಿಲಕರತ್ನೆ ದಿಲ್ಶನ್(38 ವರ್ಷ) ಹಾಗೂ ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ(37 ವರ್ಷ)ನಂತರ 10 ಸಾವಿರ ರನ್ ಗಳಿಸಿದ ವಿಶ್ವದ ಹಿರಿಯ ಬ್ಯಾಟ್ಸ್‌ಮನ್ ಧೋನಿ(37 ವರ್ಷ).

12ನೇ ಅಂತಾರಾಷ್ಟ್ರೀಯ ಕ್ರಿಕೆಟಿಗ

12ನೇ ಅಂತಾರಾಷ್ಟ್ರೀಯ ಕ್ರಿಕೆಟಿಗ

ತಿಲಕರತ್ನೆ ದಿಲ್ಶನ್, ಕುಮಾರ ಸಂಗಕ್ಕಾರ, ಸನತ್ ಜಯಸೂರ್ಯ, ಮಹೇಲ ಜಯವರ್ಧನೆ(ಶ್ರೀಲಂಕಾ), ರಿಕಿ ಪಾಂಟಿಂಗ್(ಆಸ್ಟ್ರೇಲಿಯ), ಜಾಕ್ ಕಾಲಿಸ್(ದಕ್ಷಿಣ ಆಫ್ರಿಕಾ),ಬ್ರಿಯಾನ್ ಲಾರಾ(ವೆಸ್ಟ್‌ಇಂಡೀಸ್) ಹಾಗೂ ಇಂಜಮಾಮ್ ಉಲ್‌ಹಕ್(ಪಾಕ್) ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 10,000 ರನ್ ಪೂರೈಸಿದ ವಿಶ್ವದ ಇತರೆ ಆಟಗಾರರಾಗಿದ್ದಾರೆ.

ಕಡಿಮೆ ಇನಿಂಗ್ಸ್‌ನಲ್ಲಿ 10 ಸಾವಿರ ಏಕದಿನ ರನ್

ಕಡಿಮೆ ಇನಿಂಗ್ಸ್‌ನಲ್ಲಿ 10 ಸಾವಿರ ಏಕದಿನ ರನ್ ಪೂರೈಸಿದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಧೋನಿ ಅವರು ಐದನೇ ಸ್ಥಾನದಲ್ಲಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 2001ರಲ್ಲಿ ಇಂದೋರ್‌ನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧ ಪಂದ್ಯದ ವೇಳೆ ಅತ್ಯಂತ ವೇಗವಾಗಿ(259 ಇನಿಂಗ್ಸ್)10,000 ರನ್ ಪೂರೈಸಿ ದಾಖಲೆ ನಿರ್ಮಿಸಿದ್ದರು.

ಸಚಿನ್ ತೆಂಡುಲ್ಕರ್(259)ಬಳಿಕ ಸೌರವ್ ಗಂಗೂಲಿ(263), ರಿಕಿ ಪಾಂಟಿಂಗ್(266) ಹಾಗೂ ಜಾಕ್ ಕಾಲಿಸ್(272)ಕಡಿಮೆ ಇನಿಂಗ್ಸ್‌ನಲ್ಲಿ 10 ಸಾವಿರ ರನ್ ಪೂರೈಸಿದ ಇತರೆ ಆಟಗಾರರಾಗಿದ್ದಾರೆ.

300 ಕ್ಯಾಚ್ ಹಿಡಿದ ವಿಕೆಟ್ ಕೀಪರ್

300 ಕ್ಯಾಚ್ ಹಿಡಿದ ವಿಕೆಟ್ ಕೀಪರ್

300 ಏಕದಿನ ಅಂತಾರಾಷ್ಟ್ರೀಯ ಕ್ಯಾಚ್ ಗಳನ್ನು ಹಿಡಿದ ಆಟಗಾರರ ಪಟ್ಟಿಗೆ ಎಂಎಸ್ ಧೋನಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಆಡಂ ಗಿಲ್ ಕ್ರಿಸ್ಟ್ (417), ಮಾರ್ಚ್ ಬೌಚರ್ (403), ಕುಮಾರ ಸಂಗಕ್ಕಾರ (402) ಈ ಸಾಧನೆ ಮಾಡಿದ ಇತರೆ ಆಟಗಾರರಾಗಿದ್ದಾರೆ.

Story first published: Sunday, July 15, 2018, 16:02 [IST]
Other articles published on Jul 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X