ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್‌ ವಿರುದ್ಧ 1 ರನ್‌ಗಳಿಸಿದರೂ ಹೊಸ ದಾಖಲೆ ಬರೆದ ಧೋನಿ!

MS Dhoni becomes second-most capped Indian player in ODIs

ಮ್ಯಾಂಚೆಸ್ಟರ್‌, ಜೂನ್‌ 16: ಟೀಮ್‌ ಇಂಡಿಯಾಗೆ ಟಿ20 ಮತ್ತು ಏಕದಿನದಲ್ಲಿ ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್‌ ಧೋನಿ, ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಕೇವಲ 1 ರನ್‌ ಗಳಿಸಿ ಔಟಾದರೂ, ಈ ಪಂದ್ಯದಲ್ಲಿ ಒಂದು ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ಪಾಕಿಸ್ತಾನ ವಿರುದ್ಧ ವಿಶ್ವಕಪ್‌ ಟೂರ್ನಿ ಇತಿಹಾಸದಲ್ಲಿನ ತನ್ನ ಗರಿಷ್ಠ ಮೊತ್ತವಾಗಿ 50 ಓವರ್‌ಗಳಲ್ಲಿ 336/5 ರನ್‌ಗಳನ್ನು ಚಚ್ಚಿತು. ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಎಂ.ಎಸ್‌ ಧೋನಿ ಭಾರತ ತಂಡದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಎರಡನೇ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು.

ವಿಶ್ವಕಪ್‌: ಸಚಿನ್‌ ವಿಶ್ವ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿ!ವಿಶ್ವಕಪ್‌: ಸಚಿನ್‌ ವಿಶ್ವ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿ!

ವೃತ್ತಿ ಬದುಕಿನ 344ನೇ ಪಂದ್ಯವನ್ನಾಡಿದ ಎಂಎಸ್‌ ಧೋನಿ ತಮ್ಮ 341ನೇ ಇನಿಂಗ್ಸ್‌ ಮೂಲಕ ಭಾರತದ ಪರ ಎರಡನೇ ಅತಿ ಹೆಚ್ಚು ಪಂದ್ಯವನ್ನಾಡಿದ ದಾಖಲೆ ಹೊಂದಿದ್ದ ರಾಹುಲ್‌ (340 ಇನಿಂಗ್ಸ್‌) ದ್ರಾವಿಡ್‌ ಅವರ ದಾಖಲೆಯನ್ನು ಮುರಿದರು. ದ್ರಾವಿಡ್‌ ಕೂಡ 344 ಪಂದ್ಯಗಳನ್ನಾಡಿದ್ದಾರಾದರೂ, 340 ಇನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿದ್ದಾರೆ. ಬ್ಯಾಟಿಂಗ್‌ ಮಾಂತ್ರಿಕ ಸಚಿನ್‌ ತೆಂಡೂಲ್ಕರ್‌ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 463 ಪಂದ್ಯಗಳಲ್ಲಿ ಅಷ್ಟೇ ಇನಿಂಗ್ಸ್‌ಗಳನ್ನಾಡಿದ್ದಾರೆ.

ವಿಶ್ವಕಪ್‌: ಪಾಕ್‌ ವಿರುದ್ಧ ಔಟಾಗದೇ ಇದ್ದರೂ ವಿರಾಟ್‌ ಹೊರನಡೆದದ್ದೇಕೆ?ವಿಶ್ವಕಪ್‌: ಪಾಕ್‌ ವಿರುದ್ಧ ಔಟಾಗದೇ ಇದ್ದರೂ ವಿರಾಟ್‌ ಹೊರನಡೆದದ್ದೇಕೆ?

ಒಡಿಐನಲ್ಲಿ ಭಾರತದ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿದವರು

ಸಚಿನ್‌ ತೆಂಡೂಲ್ಕರ್‌
463: ಪಂದ್ಯ
463: ಇನಿಂಗ್ಸ್‌

ಎಂ.ಎಸ್‌ ಧೋನಿ
344: ಪಂದ್ಯ
341: ಇನಿಂಗ್ಸ್‌

ರಾಹುಲ್‌ ದ್ರಾವಿಡ್‌
344: ಪಂದ್ಯ
340: ಇನಿಂಗ್ಸ್‌

ಮೊಹಮ್ಮದ್‌ ಅಝರುದ್ದೀನ್‌
334: ಪಂದ್ಯ
334: ಇನಿಂಗ್ಸ್‌

ಸೌರವ್‌ ಗಂಗೂಲಿ
311: ಪಂದ್ಯ
308: ಇನಿಂಗ್ಸ್‌

Story first published: Sunday, June 16, 2019, 22:48 [IST]
Other articles published on Jun 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X