ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ಹುಟ್ಟುಹಬ್ಬ: ಮಿಸ್ಟರ್ ಕೂಲ್ ವೃತ್ತಿಬದುಕಿನ ಐದು ಶ್ರೇಷ್ಠ ಇನ್ನಿಂಗ್ಸ್‌ಗಳು

Ms Dhoni Birthday: Five Most Memorable Odi Innings Of Ms Dhoni

ಮಿಸ್ಟರ್ ಕೂಲ್ ಖ್ಯಾತಿಯ ಎಂಎಸ್ ಧೋನಿ ಇಂದು 39ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಭಾರತೀಯ ಕ್ರಿಕೆಟ್ ಕಂಡ ಈ ಶ್ರೇಷ್ಠ ನಾಯಕ ಭಾರತೀಯ ಕ್ರಿಕೆಟ್ ಲೋಕ ಎಂದು ಮರೆಯಲಾಗದ ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಎರಡು ವಿಶ್ವಕಪ್ ಗೆದ್ದ ಧೋನಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಯಾವತ್ತೂ ವಿಶೇಷ.

ಸದ್ಯ ಎಂಎಸ್ ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ನಲ್ಲಿ ಟೀಮ್ ಇಂಡಿಯಾ ಹೊರಬಿದ್ದ ನಂತರ ಮಾಹಿ ಕ್ರಿಕೆಟ್ ಅಂಗಳದಿಂದ ಸಫೂರ್ಣ ದೂರ ಉಳಿದುಬಿಟ್ಟರು. ಈ ಬಾರಿಯ ಐಪಿಎಲ್‌ನ ಮೂಲಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾಗಲೇ ಕೊರೊನಾ ವೈರಸ್‌ನ ಹಾವಳಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು.

39ನೇ ವರ್ಷಕ್ಕೆ ಕಾಲಿಟ್ಟ ಮಿಸ್ಟರ್ ಕೂಲ್‌ಗೆ ವಿಶೇಷ ಉಡುಗೊರೆ ನೀಡಿದ ಬ್ರಾವೋ39ನೇ ವರ್ಷಕ್ಕೆ ಕಾಲಿಟ್ಟ ಮಿಸ್ಟರ್ ಕೂಲ್‌ಗೆ ವಿಶೇಷ ಉಡುಗೊರೆ ನೀಡಿದ ಬ್ರಾವೋ

ಇಂದು ಅಭಿಮಾನಿಗಳ ಪ್ರೀತಿಯ ಧೋನಿಯ ಹುಟ್ಟುಹಬ್ಬ. ಈ ವಿಶೇಷ ದಿನದಂದು ಧೋನಿಯ ಐದು ಶ್ರೇಷ್ಠ ಇನ್ನಿಂಗ್ಸ್‌ಗಳ ಬಗ್ಗೆ ಕಣ್ಣಾಡಿಸೋಣ

1. 91* vs ಶ್ರೀಲಂಕಾ

1. 91* vs ಶ್ರೀಲಂಕಾ

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮರೆಯದ ಇನ್ನಿಂಗ್ಸ್ ಇದು. 2011ರ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಧೋನಿ ಈ ಅದ್ಭುತ ಇನ್ನಿಂಗ್ಸ್ ಆಡಿ ವಿಶ್ವಕಪ್ ಗೆಲುವಿಗೆ ಕಾರಣರಾಗಿದ್ದರು. ವಾಂಖೆಡೆ ಸ್ಟೇಡಿಯಮ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಧೋನಿ ತಮ್ಮ ಐದನೇ ಕ್ರಮಾಂಕವನ್ನು ಬಿಟ್ಟು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅದನ್ನು ಸಮರ್ಥಿಸಿಕೊಂಡಿದ್ದರು. ಆ ವಿಶ್ವಕಪ್‌ನಲ್ಲಿ ಹೇಳಿಕೊಳ್ಳುವಂತಾ ಅದ್ಭುತ ಪ್ರದರ್ಶನ ಧೋನಿ ಬ್ಯಾಟ್‌ನಿಂದ ಬಂದಿರಲಿಲ್ಲ. ಆದರೆ ಫೈನಲ್ ಪಂದ್ಯದಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಧೋನಿ ಈ ಶ್ರೇಷ್ಠ ಇನ್ನಿಂಗ್ಸ್ ಆಡಿದ್ದರು. ಈ ಮೂಲಕ 28 ವರ್ಷಗಳ ಕಾಯುವಿಕೆಯ ನಂತರ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಎತ್ತಿಹಿಡಿಯಿತು.

2.183 vs ಶ್ರೀಲಂಕಾ

2.183 vs ಶ್ರೀಲಂಕಾ

ಎಂಎಸ್ ಧೋನಿ ತಾನೋರ್ವ ಭಯಾನಯ ಬ್ಯಾಟ್ಸ್ಮನ್‌ ಎಂದು ಸಾಭೀತುಪಡಿಸಿದ್ದು 2005ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ. ಈ ಪಂದ್ಯದಲ್ಲಿ ಧೋನಿ ತನ್ನ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಿದ್ದರು. ಜೈಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಸಂಗಕ್ಕರ ಶತಕದ ನೆರವಿನಿಂದ ಅಂದು 298 ರನ್‌ಗಳನ್ನು ಸಿಡಿಸಿತ್ತು. ಇದನ್ನು ಭಾರತ ಬೆನ್ನಟ್ಟಿತ್ತು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಧೋನಿ ಸಿಕ್ಸರ್‌ಗಳ ಸುರಿಮಳೆ ಸಿಡಿಸಿ ಭರ್ಜರಿ 183 ರನ್‌ಗಳೊಂದಿಗೆ ಭಾರತ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.

3.113vs ಪಾಕಿಸ್ತಾನ

3.113vs ಪಾಕಿಸ್ತಾನ

ಧೋನಿ ಶತಕದ ಹೊರತಾಗಿಯೂ ಪಂದ್ಯ ಸೋತ ಅಪರೂಪದ ಪಂದ್ಯವಿದು. ಪಾಕಿಸ್ತಾನದ ವಿರುದ್ಧ 2012ರಲ್ಲಿ ನಡೆದ ಈ ಈ ಪಂದ್ಯದಲ್ಲಿ ಭಾರತ 29 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ಕಠಿಣ ಪರಿಸ್ಥಿತಿಯಲ್ಲಿ ಧೋನಿ ತಾಳ್ಮೆಯ ಆಟವಾಡಿ ತಂಡದ ಮೊತ್ತವನ್ನು ಏರಿಸಿದರು. ಧೋನಿ 125 ಎಸೆತಗಳಲ್ಲಿ 113 ರನ್ ದಾಖಲಿಸಿದ್ದರು. ಅಂತಿಮವಾಗಿ ಈ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ ಆರುವಿಎಟ್ ಕಳೆದುಕೊಂಡು 227 ರನ್ ಸಿಡಿಸಿತ್ತು. ಆದರೆ ಈ ಮೊತ್ತ ಪಾಕಿಸ್ತಾನವನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಪಾಕ್ ಈ ಪಂದ್ಯವನ್ನು ಗೆದ್ದರೂ ಧೋನಿಯ ಅದ್ಭುತ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

4. 44*vs ಆಸ್ಟ್ರೇಲಿಯಾ

4. 44*vs ಆಸ್ಟ್ರೇಲಿಯಾ

2012ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಬೃಹತ್ ರನ್‌ ಗಳಿಸಿರಲಿಲ್ಲ. ಆದರೆ ಧೋನಿ ಗಳಿಸಿದ ರನ್ ಅಂದು ಭಾರತದ ಪಾಲ್ಗೊಂಡಿದ್ದ ಕಾಮನ್ವೆಲ್ತ್ ತ್ರಿಕೋನ ಸರಣಿಯಲ್ಲಿ ಜೀವಂತವಿರಲು ಕಾರಣವಾಗಿತ್ತು. ಅಂತಿಮ ಓವರ್‌ವಲ್ಲಿ ಭಾರತದ ಗೆಲುವಿಗೆ 13 ರನ್‌ಗಳ ಅಗತ್ಯವಿತ್ತು. ಕ್ಲಿಂಟ್ ವಿಕಿ ಎಸೆದ ಮೂರನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಗೆಲುವನ್ನು ಖಚಿತಡಿಸಿದರು.

5. 45*vs ಶ್ರೀಲಂಕಾ

5. 45*vs ಶ್ರೀಲಂಕಾ

ಕೆರೆಬಿಯನ್ ನಾಡಿನಲ್ಲಿ ಶ್ರೀಲಂಕಾ ವೆಸ್ಟ್ ಇಂಡೀಸ್ ತಂಡವನ್ನು ಒಳಗೊಂಡ ತ್ರಿಕೋನ ಸರಣಿಯದು. ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್‌ನಲ್ಲ ನಡೆದ ಈ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 201 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಇದನ್ನು ಬೆನ್ನತ್ತಿದ ಭಾರತ ಸುಲಭ ಗೆಲುವನ್ನು ಸಾಧಿಸುವತ್ತ ದಾಪುಗಾಲಿಕ್ಕಿತ್ತು. 32 ನೇ ಓವರ್‌ನ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 139 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು ಟೀಮ್ ಇಂಡಿಯಾ. ಆದರೆ ರೋಹಿತ್ ಶರ್ಮಾ ಔಟಾದ ಬಳಿಕ ಪಂದ್ಯದ ಗತಿಯೇ ಬದಲಾಗಿಬಿಟ್ಟಿತ್ತು. 182 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು ಭಾರತ. ಒಂದೆಡೆ ಧೋನಿ ಕ್ರೀಸ್‌ನಲ್ಲಿದ್ದರೆ ಮತ್ತೊಂದೆಡೆ ಅಂತಿಮ ಬ್ಯಾಟ್ಸ್‌ಮನ್ ಇಶಾಂತ್ ಶರ್ಮಾ ಕ್ರೀಸ್‌ನಲ್ಲಿದ್ದರು. ಶಮಿಂಡ ಎರಂಗ ಎಸೆತ ಅಂತಿಮ ಓವರ್‌ನಲ್ಲಿ ಭಾರತದ ಗೆಲುವಿಗೆ 15 ರನ್‌ಗಳ ಅವಶ್ಯಕತೆಯಿತ್ತು. ಆದರೆ ಧೊನಿ ಎಲ್ಲವನ್ನೂ ಸುಲಭವಾಗಿಸಿಬಿಟ್ಟಿದ್ದರು. ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸುವ ಮೂಲಕ ಆ ಪಂದ್ಯದಲ್ಲಿ ಭಾರತವನ್ನು ಗೆಲ್ಲಿಸಿದ್ದರು.

Story first published: Tuesday, July 7, 2020, 15:39 [IST]
Other articles published on Jul 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X