ಲಂಡನ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ; ಎಂಎಸ್‌ಡಿ ಭಾರತದ ಐಕಾನ್ ಎಂದ ವಿಂಬಲ್ಡನ್

MS Dhoni turns 41 ಬ್ರಿಟನ್ ನಲ್ಲಿ ಧೋನಿ ಹುಟ್ಟು ಹಬ್ಬ !! | *Cricket | Oneindia Kannada

ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಎಂದೇ ಖ್ಯಾತಿಯನ್ನು ಪಡೆದಿರುವ ಎಂಎಸ್ ಧೋನಿ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಎಂಎಸ್ ಧೋನಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ಹುಟ್ಟುಹಬ್ಬವನ್ನು ತಮ್ಮ ಕುಟುಂಬ ಸದಸ್ಯನೋರ್ವನ ಹುಟ್ಟು ಹಬ್ಬದ ರೀತಿ ಆಚರಿಸಿ ಸಂಭ್ರಮಿಸುತ್ತಿದ್ದಾರೆ.

ಮುಂದಿನ ತಿಂಗಳು ನಡೆಯಲಿದೆ ಭಾರತ vs ಪಾಕಿಸ್ತಾನ ಪಂದ್ಯ; ಈ ಮಹತ್ವದ ಪಂದ್ಯದ ದಿನಾಂಕ ಔಟ್ಮುಂದಿನ ತಿಂಗಳು ನಡೆಯಲಿದೆ ಭಾರತ vs ಪಾಕಿಸ್ತಾನ ಪಂದ್ಯ; ಈ ಮಹತ್ವದ ಪಂದ್ಯದ ದಿನಾಂಕ ಔಟ್

ಇನ್ನು ಎಂ ಎಸ್ ಧೋನಿಗೆ ಅಪಾರವಾದ ಅಭಿಮಾನಿ ಬಳಗವಿದ್ದು, ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಎಂಎಸ್ ಧೋನಿ ಚಿತ್ರಗಳನ್ನು ಹಾಗೂ ವೀಡಿಯೋಗಳನ್ನು ಹಂಚಿಕೊಂಡು ಹಳೆಯ ಕ್ರಿಕೆಟ್ ನೆನಪುಗಳನ್ನು ಮೆಲುಕು ಹಾಕುತ್ತಾ ಹುಟ್ಟುಹಬ್ಬದ ದಿನದಂದು ಶುಭಾಶಯವನ್ನು ಕೋರುತ್ತಿದ್ದರೆ, ಇನ್ನೂ ಕೆಲ ಅಭಿಮಾನಿಗಳು ತಮ್ಮ ತಮ್ಮ ಊರುಗಳಲ್ಲಿ ಕೇಕ್ ಕತ್ತರಿಸಿ ಧೋನಿಯ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಮಾಡುತ್ತಿದ್ದಾರೆ.

ಸದ್ಯ ಎಂ ಎಸ್ ಧೋನಿ ಲಂಡನ್ ನಗರದಲ್ಲಿ ಬೀಡು ಬಿಟ್ಟಿದ್ದು, ಪತ್ನಿ ಸಾಕ್ಷಿ ಧೋನಿ ಮತ್ತು ಮಗಳು ಝಿವಾ ಧೋನಿ ಜೊತೆ ಪ್ರವಾಸದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಹೋಟೆಲ್ ಒಂದರಲ್ಲಿ ಎಂಎಸ್ ಧೋನಿ ಹುಟ್ಟುಹಬ್ಬವನ್ನು ಆಚರಿಸಲಾಗಿದ್ದು, ಸಾಕ್ಷಿ ಧೋನಿ ಮತ್ತು ಝಿವಾ ದೋನಿ ಸೇರಿದಂತೆ ಧೋನಿ ಸ್ನೇಹಿತರೂ ಸಹ ಈ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಹಾಜರಿದ್ದರು. ಧೋನಿ ಕೇಕ್ ಕತ್ತರಿಸುತ್ತಿರುವ ವಿಡಿಯೋವನ್ನು ಪತ್ನಿ ಸಾಕ್ಷಿ ಧೋನಿ ಅವರು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

ಶುಭಕೋರಿದ ಸೆಲೆಬ್ರಿಟಿಗಳು, ಕ್ರಿಕೆಟಿಗರು

ಸಾಕ್ಷಿ ಧೋನಿ ಪೋಸ್ಟ್ ಮಾಡಿರುವ ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಹಲವಾರು ಸೆಲೆಬ್ರಿಟಿಗಳು ಹಾಗೂ ಕ್ರಿಕೆಟಿಗರು ಕಾಮೆಂಟ್ ಮಾಡುವ ಮೂಲಕ ಧೋನಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಬಾಲಿವುಡ್ ನಟ ರಣ್ವೀರ್ ಸಿಂಗ್ ಲವ್ ಯೂ ಮಹಿ, ಹುಟ್ಟುಹಬ್ಬದ ಶುಭಾಶಯಗಳು, ನಿಮಗೆ ಪ್ರೀತಿ ಮತ್ತು ಶಕ್ತಿ ಸಿಗಲಿ ಎಂದು ಕಾಮೆಂಟ್ ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಖಾತೆ ಕೂಡ ಈ ವಿಡಿಯೋಗೆ ಕಾಮೆಂಟ್ ಮಾಡಿದ್ದು ಹ್ಯಾಪಿ ಬರ್ತಡೇ ತಲಾ ಎಂದು ಬರೆದಿದೆ. ಇನ್ನು ಈ ವಿಡಿಯೋವನ್ನು ಕನ್ನಡಿಗ ಕೆಎಲ್ ರಾಹುಲ್ ಸೇರಿದಂತೆ ಟೀಮ್ ಇಂಡಿಯಾದ ಹಲವಾರು ಕ್ರಿಕೆಟಿಗರು ಲೈಕ್ ಮಾಡಿದ್ದಾರೆ.

ಐಕಾನ್ ಎಂದ ವಿಂಬಲ್ಡನ್

ಇನ್ನು ಹುಟ್ಟುಹಬ್ಬದ ಹಿಂದಿನ ದಿನ ಎಂಎಸ್ ಧೋನಿ ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಟಿತ ವಿಂಬಲ್ಡನ್ ಟೆನಿಸ್ ಟೂರ್ನಮೆಂಟ್ ಪಂದ್ಯವೊಂದನ್ನು ವೀಕ್ಷಿಸಿದ್ದಾರೆ. ಎಂಎಸ್ ಧೋನಿ ಗೆಳೆಯರೊಂದಿಗೆ ವಿಂಬಲ್ಡನ್ ವೀಕ್ಷಿಸುತ್ತಿರುವ ಚಿತ್ರವನ್ನು ವಿಂಬಲ್ಡನ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಭಾರತದ ಐಕಾನ್ ವಿಂಬಲ್ಡನ್ ಪಂದ್ಯ ವೀಕ್ಷಿಸುತ್ತಿದ್ದಾರೆ ಎಂದು ಬರೆದುಕೊಂಡಿತ್ತು.

41 ಅಡಿ ಕಟ್ ಔಟ್ ನಿಲ್ಲಿಸಿದ ಅಭಿಮಾನಿಗಳು

41 ಅಡಿ ಕಟ್ ಔಟ್ ನಿಲ್ಲಿಸಿದ ಅಭಿಮಾನಿಗಳು

ಧೋನಿ 41ನೇ ಹುಟ್ಟುಹಬ್ಬದ ಅಂಗವಾಗಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಅಭಿಮಾನಿಗಳು 41 ಅಡಿ ಎತ್ತರವಿರುವ ಎಂಎಸ್ ಧೋನಿ ಅವರ ಕಟೌಟ್ ಅನ್ನು ನಿಲ್ಲಿಸಿದ್ದಾರೆ. ಧೋನಿ ಟೀಮ್ ಇಂಡಿಯಾದ ಜೆರ್ಸಿ ತೊಟ್ಟು ಬ್ಯಾಟ್ ಬೀಸುತ್ತಿರುವ ಕಟ್ ಔಟ್ ನಿಲ್ಲಿಸಿರುವ ಅಭಿಮಾನಿಗಳು ಭಾರತದಲ್ಲಿ ಕ್ರಿಕೆಟಿಗನಿಗೆ ನಿಲ್ಲಿಸಲಾದ ಅತಿ ಎತ್ತರದ ಕಟ್ ಔಟ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, July 7, 2022, 11:14 [IST]
Other articles published on Jul 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X