ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೆಳೆಯನ ಹುಟ್ಟುಹಬ್ಬವನ್ನು 'ಕೈಲಾಸಪತಿ'ಯಲ್ಲಿ ಸಂಭ್ರಮಿಸಿದ ಧೋನಿ

M S Dhoni spotted spending his time with his childhood friends | Oneindia Kannada
MS Dhoni chills with friends at his farmhouse in Ranchi

ರಾಂಚಿ: ಒಂದು ಕಡೆ ಕ್ರಿಕೆಟ್‌ ಅಭಿಮಾನಿಗಳು, ಮಾಜಿ ಕ್ರಿಕೆಟ್ ಆಟಗಾರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಭವಿಷ್ಯದ ಕುರಿತಾಗಿ ಮಾತನಾಡುತ್ತಿದ್ದಾರೆ. ಧೋನಿ ಸೀಮಿತ ಅವಧಿ ಕ್ರಿಕೆಟ್‌ಗೂ ರಾಜೀನಾಮೆ ನೀಡಲಿ ಎಂಬ ಚರ್ಚೆಗಳು ನಡೆಯುತ್ತಿದೆ. ಧೋನಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರ ಇನ್ನಷ್ಟು ವರ್ಷ ಅಂಗಳದಲ್ಲಿ ರಂಜಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಚರ್ಚೆಯ ಕೇಂದ್ರಬಿಂದು ಧೋನಿ ಇದ್ಯಾವುದಕ್ಕೂ ತಲೆಯೇ ಕೆಡಿಸಿಕೊಳ್ಳುತ್ತಿಲ್ಲ. ಹಾಗಾದ್ರೆ ಧೋನಿ ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಅಂದ್ರೆ, ಬಾಲ್ಯದ ಗೆಳೆಯರ ಜೊತೆಗೆ ಕಾಲ ಕಳೆಯುತ್ತಿದ್ದಾರೆ.

ಶ್ರೀಲಂಕಾದಲ್ಲಿ ಇನ್ಮುಂದೆ ಮ್ಯಾಚ್‌ ಫಿಕ್ಸಿಂಗ್ ಕ್ರಿಮಿನಲ್ ಅಪರಾಧ!ಶ್ರೀಲಂಕಾದಲ್ಲಿ ಇನ್ಮುಂದೆ ಮ್ಯಾಚ್‌ ಫಿಕ್ಸಿಂಗ್ ಕ್ರಿಮಿನಲ್ ಅಪರಾಧ!

ಕ್ರಿಕೆಟ್‌ನಿಂದ ಸ್ವಲ್ಪ ದೂರ ಉಳಿದಿರುವ ಧೋನಿ ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ಪಂದ್ಯಕ್ಕೆ ವೀಕ್ಷಕರಾಗಿ ಬಂದು ಡ್ರೆಸಿಂಗ್ ರೂಮ್‌ನಲ್ಲಿ ಟೀಮ್‌ಮೇಟ್‌ ಜೊತೆ ಕಾಲ ಕಳೆದಿದ್ರು. ಈಗ ಬಾಲ್ಯದ ಗೆಳೆಯನೋರ್ವನ ಹುಟ್ಟುಹಬ್ಬದಲ್ಲಿ ಧೋನಿ ಪಾಲ್ಗೊಂಡಿದ್ದಾರೆ.

ಹೌದು ಮಾಜಿ ನಾಯಕ ಧೋನಿ ತಮ್ಮ ಬಾಲ್ಯದ ಗೆಳೆಯನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮದೇ ಫಾರ್ಮ್‌ಹೌಸ್‌ 'ಕೈಲಾಸಪತಿ'ಯಲ್ಲಿ ಧೋನಿ ಬಾಲ್ಯದ ಗೆಳೆಯ ಸೀಮಂತ್ ಲೋಹಾನಿ ಹುಟ್ಟುಹಬ್ವನ್ನು ತಮ್ಮ ಎಲ್ಲಾ ಬಾಲ್ಯದ ಗೆಳೆಯರೊಂದಿಗೆ ಸೇರಿಕೊಂಡು ಸಂಭ್ರಮಿಸಿದ್ದಾರೆ. ಮಾತ್ರವಲ್ಲ ರಾಂಚಿಯ ಹೆಮ್ಮೆಯ ಪುತ್ರ ರಾಂಚಿಯ ರಸ್ತೆಗಳಲ್ಲಿ ಬೈಕ್ ಓಡಿಸಿ ಗೆಳಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ.

ಹೀಗೆ ಧೋನಿ ತನ್ನ ಕ್ರಿಕೆಟ್ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಧೋನಿ ನಾನಿರೋದೆ ಹೀಗೆ ಅಂತಾ ಕೂಲಾಗಿ ಕಾಲಕಳೆಯುತ್ತಿದ್ದಾರೆ. ಧೋನಿ ಬೆನ್ನಿಗೆ ನಾಯಕ ಕೋಹ್ಲಿ ಸೇರಿದಂತೆ ಅನೇಕ ಕ್ರಿಕೆಟಿಗರು ನಿಂತಿದ್ದಾರೆ. ನೂತನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕ್ರಿಕೆಟ್‌ಗೆ ವಿದಾಯ ಹೇಳುವುದು ಧೋನಿಯ ವೈಯಕ್ತಿಕ ನಿರ್ಧಾರ ಅಂದ್ರೆ ಕೋಚ್ ರವಿ ಶಾಸ್ತ್ರಿ ಯಾವಾಗ ನಿವೃತ್ತಿಯಾಗಬೇಕೆಂದು ನಿರ್ಧರಿಸುವ ಹಕ್ಕನ್ನು ಪಡೆದಿದ್ದಾರೆ ಎಂಬ ಹೇಳಿಕೆ ನೀಡಿದ್ರು.

Story first published: Tuesday, November 12, 2019, 14:37 [IST]
Other articles published on Nov 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X