ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಧಮಾಕಕ್ಕೆ 15ರ ಸಂಭ್ರಮ; ಮಾಹಿ ಹಾದಿಯ ಅಪೂರ್ವ ನೋಟ

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು ಇಂದಿಗೆ ಸರಿಯಾಗಿ 15 ವರ್ಷಗಳಾಗಿದೆ. 2004ರ ಡಿಸೆಂಬರ್ 23 ರಂದು ಮಹೇಂದ್ರ ಸಿಂಗ್ ಧೋನಿ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಸೌರವ್ ಗಂಗೂಲಿ ನಾಯಕತ್ವದಲ್ಲಿ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದರು.

ದಶಕಗಳ ಕಾಲ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ಧೋನಿ ಭಾರತಕ್ಕೆ ಟಿ20, ಏಕದಿನ, ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟಿರುವ ಸಾಧನೆ ಮಾಡಿದ್ದಾರೆ. ಐಪಿಎಲ್‌ನಲ್ಲೂ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮೂರು ಬಾರಿ ಚಾಂಪಿಯನ್ ಆಗಿದೆ. ಹೀಗಾಗಿ ಮಹೇಂದ್ರ ಸಿಂಗ್ ದೋನಿ ಯಶಸ್ವಿ ನಾಯಕ ಎಂದೆನಿಸಿದ್ದಾರೆ.

ಸದ್ಯ ಕ್ರಿಕೆಟ್‌ನಿಂದ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್‌ನಿಂದ ದೂರ ಇದ್ದಾರೆ. ವಿಶ್ವಕೊ್‌ನಲ್ಲಿ ಅನಿರೀಕ್ಷಿತ ರೀತಿಯಲ್ಲಿ ಟೀಮ್ ಇಂಡಿಯಾ ಹೊರ ಬಿದ್ದ ಬಳಿಕ ಯಾವುದೇ ಟೂರ್ನಿಯಲ್ಲೂ ಧೋನಿ ಆಡಿಲ್ಲ. ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಲಿದ್ದಾರೆ ಎಂಬ ಮಾತುಗಳು ಕೂಡ ಹರಿದಾಡುತ್ತಿವೆ.

ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ದಶಕದ ಟಾಪ್-5 ಬ್ಯಾಟ್ಸ್‌ಮನ್‌ಗಳು ಯಾರು!ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ದಶಕದ ಟಾಪ್-5 ಬ್ಯಾಟ್ಸ್‌ಮನ್‌ಗಳು ಯಾರು!

ಟೀಮ್ ಇಂಡಿಯಾವನ್ನು ದಶಕಗಳ ಕಾಲ ಮುನ್ನಡೆಸಿ, ತಂಡಕ್ಕಾಗಿ ಹದಿನೈದು ವರ್ಷ ಸೇವೆ ಸಲ್ಲಿಸಿರುವ ಧೋನಿಯ ಕೆಲ ಕುತೂಹಲಕಾರಿ ಮಾಹಿತಿಗಳು ನಿಮಗಾಗಿ;

ಮೊದಲ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಧೋನಿ;

ಮೊದಲ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಧೋನಿ;

ಧೋನಿ ಮೊದಲ ಪಂದ್ಯವನ್ನು ಹದಿನೈದು ವರ್ಷಗಳ ಹಿಂದೆ ಬಾಂಗ್ಲಾದೇಶದ ವಿರುದ್ಧ ಆಡಿದ್ದರು. ಆದರೆ ಈ ಪಂದ್ಯದಲ್ಲಿ ಧೋನಿ ಒಂದೇ ಒಂದು ರನ್ ಗಳಿಸದೆ ಔಟಾದರು. ರನ್‌ಗಾಗಿ ಓಡುವುದರಲ್ಲೇ ಖ್ಯಾತರಾದ ಧೋನಿ ಮೊದಲ ಪಂದ್ಯದಲ್ಲೇ ಶೂನ್ಯಕ್ಕೆ ಔಟಾಗಿದ್ದು ವಿಪರ್ಯಾಸ. ಈ ಪಂದ್ಯವನ್ನು ಭಾರತ 11 ರನ್‌ಗಳಿಂದ ಗೆದ್ದುಕೊಂಡಿತ್ತು.

ಪಾಕ್ ವಿರುದ್ಧ ವಿಶ್ವರೂಪ ತೋರಿಸಿದ ಧೋನಿ

ಪಾಕ್ ವಿರುದ್ಧ ವಿಶ್ವರೂಪ ತೋರಿಸಿದ ಧೋನಿ

ಮಹೇಂದ್ರ ಸಿಂಗ್ ಧೋನಿ ತಾನು ಏನು ಎಂದುದನ್ನು ಕ್ರಿಕೆಟ್‌ಲೋಕಕ್ಕೆ ಪರಿಚಯವಾಗಿದ್ದು 2005ರ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ. ನಾಯಕ ಸೌರವ್ ಗಂಗೂಲಿ ಈ ಸರಣಿಯಲ್ಲಿ ಧೋನಿಯಲ್ಲು 3ನೇ ಕ್ರಮಾಂಕದಲ್ಲಿ ಕಳುಹಿಸಿದ್ದರು. ಇದನ್ನು ಸಮರ್ಥವಾಗಿ ಬಳಸಿಕೊಂಡ ಧೋನಿ ಕೇವಲ 123 ಎಸೆತಗಳಲ್ಲಿ ಸ್ಪೋಟಕ 148ರನ್ ಚಚ್ಚಿದರು. ಬಳಿಕ ಧೋನಿ ಹಿಂದಿರುಗಲೇ ಇಲ್ಲ.

48ಇನ್ನಿಂಗ್ಸ್‌ಗಳಲ್ಲಿ ನಂಬರ್‌ 1 ಆದ ಧೋನಿ;

48ಇನ್ನಿಂಗ್ಸ್‌ಗಳಲ್ಲಿ ನಂಬರ್‌ 1 ಆದ ಧೋನಿ;

ಮೊದಲ ಪಂದ್ಯದಲ್ಲಿ ಧೋನಿ ಶೂನ್ಯಕ್ಕೆ ಔಟಾದರೂ ಬಳಿಕ ಶ್ರೇಷ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಮೊದಲ 48 ಇನ್ನಿಂಗ್ಸ್‌ಗಳಲ್ಲಿ ಧೋನಿ ಐಸಿಸಿ ಏಕದಿನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದರು. ಪದಾರ್ಪಣೆ ಬಳಿಕ ವೇಗವಾಗಿ ನಂಬರ್‌1 ಬ್ಯಾಟ್ಸ್‌ಮನ್‌ ಆಗಿದ್ದು ಇಲ್ಲಿಯವರೆಗೆಗಿನ ದಾಖಲೆಯಾಗಿಯೇ ಉಳಿದಿದೆ. ಜೊತೆಗೆ ಏಕದಿದಲ್ಲಿ ಅತಿ ಹೆಚ್ಚು ಸ್ಟಂಪಿಂಗ್ ಮಾಡಿದ ಹೆಗ್ಗಳಿಕೆಯೂ ಧೋನಿಗಿದೆ.

ಐಪಿಎಲ್ ಹರಾಜು; ದೊಡ್ಡ ಮೊತ್ತಕ್ಕೆ ಹರಾಜಾದ ಆಟಗಾರರು ಯಾರು?

ಐಸಿಸಿಯ ಎಲ್ಲಾ ಮೂರೂ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಧೋನಿ;

ಐಸಿಸಿಯ ಎಲ್ಲಾ ಮೂರೂ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಧೋನಿ;

ಮಹೇಂದ್ರ ಸಿಂಗ್ ಧೋನಿ ಮತ್ತೊಂದು ವಿಶಿಷ್ಠ ದಾಖಲೆಗೂ ಪಾತ್ರರಾಗಿದ್ದಾರೆ. ಐಸಿಸಿಯ ಮಹತ್ವದ ಮೂರೂ ಟ್ರೋಪಿಗಳನ್ನು ಗೆದ್ದ ಏಕೈಕ ನಾಯಕ ಎಂಬ ಕೇರ್ತಿ ಧೋನಿ ಹೆಸರಿನಲ್ಲಿದೆ. 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್, 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಜಯಿಸಿದೆ. ಮಾತ್ರವಲ್ಲ 3 ಬಾರಿ ಐಪಿಎಲ್ ಚಾಫಿಯನ್ ತಂಡದ ನಾಯಕರಾಗಿದ್ದರೆ, 2 ಬಾರಿ ಚಾಂಪಿಯನ್ಸ್ ಲೀಗ್ ಟಿ20ಯನ್ನು ಗೆದ್ದುಕೊಂಡ ನಾಯಕರಾಗಿದ್ದಾರೆ.

ಟೆಸ್ಟ್‌ನಲ್ಲೂ ಅಗ್ರಸ್ಥಾನಕ್ಕೆರಿದ ಟೀಮ್ ಇಂಡಿಯಾ;

ಟೆಸ್ಟ್‌ನಲ್ಲೂ ಅಗ್ರಸ್ಥಾನಕ್ಕೆರಿದ ಟೀಮ್ ಇಂಡಿಯಾ;

ಮಹೇಂದ್ರ ಸಿಂಗ್ ಧೋನಿ ಟೆಸ್ಟ್‌ ತಂಡದ ನಾಯಕರಾಗಿ ಆಯ್ಕೆಯಾದ ಒಂದೇ ವರ್ಷದಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಎರಡು ವರ್ಷಗಳ ಕಾಲ ಸಂಬರ್ 1 ಸ್ಥಾನದಲ್ಲಿ ಮುಂದುವರಿದಿತ್ತು. ಧೋನಿ ಟೀಮ್ ಇಂಡಿಯಾವನ್ನು 60 ಟೆಸ್ಟ್‌ಗಳಲ್ಲಿ ಮುನ್ನಡೆಸಿ, 27 ಟೆಸ್ಟ್‌ ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. 2014ರ ಡಿಸೆಂಬರ್‌ನಲ್ಲಿ ಧೋನಿ ಟೆಸ್ಟ್‌ನಿಂದ ನಿವೃತ್ತಿ ಪಡೆದರು.

Story first published: Monday, December 23, 2019, 14:46 [IST]
Other articles published on Dec 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X