ಭಾರತ vs ಬಾಂಗ್ಲಾ: ಡೇ-ನೈಟ್‌ ಟೆಸ್ಟ್‌ಗೆ ಎಂಎಸ್ ಧೋನಿ ಕಾಮೆಂಟೇಟರ್!

Dhoni is going to be a commentator during 2nd test match against Bangla

ಕೋಲ್ಕತ್ತಾ, ನವೆಂಬರ್ 5: ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ, 2019ರ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಸೋತು ಹೊರ ಬಿದ್ದಾಗಿನಿಂದಲೂ ದೇಸಿ ತಂಡದ ಪರ ಪಂದ್ಯಗಳನ್ನಾಡಿಲ್ಲ. ಆದರೆ ಧೋನಿ, ಕೋಲ್ಕತ್ತಾದಲ್ಲಿ ನಡೆಯಲಿರುವ ಬಾಂಗ್ಲಾ vs ಭಾರತ ನಡುವಿನ ಚೊಚ್ಚಲ ಡೇ-ನೈಟ್ಸ್‌ ಟೆಸ್ಟ್ ವೇಳೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಐಪಿಎಲ್‌ನಲ್ಲಿ ಇನ್ಮುಂದೆ ಬರಲಿದ್ದಾರೆ ಗೇಮ್ ಚೇಂಜರ್ 'ಪವರ್ ಪ್ಲೇಯರ್‌'!

ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ನವೆಂಬರ್ 22ರಂದು ಆರಂಭವಾಗಲಿರುವ ಭಾರತ-ಬಾಂಗ್ಲಾ ದ್ವಿತೀಯ ಟೆಸ್ಟ್, ಡೇ-ನೈಟ್ ಟೆಸ್ಟ್ ಆಗಿರಲಿದೆ. ಧೋನಿ ಈ ಪಂದ್ಯದ ವೇಳೆ ಹಾಜರಿರಲಿದ್ದಾರೆ, ಆದರೆ ಆಟಗಾರನಾಗಿ ಅಲ್ಲ ಬದಲಿಗೆ ಅತಿಥಿ ಕಾಮೆಂಟೇಟರ್ ಆಗಿ ಪಂದ್ಯಕ್ಕೆ ದನಿಗೂಡಿಸಲಿದ್ದಾರೆ.

ಶಾಹೀನ್ ಅಫ್ರಿದಿ ವಿರುದ್ಧ ವಿಡಿಯೋ ಕಾಲ್‌ನಲ್ಲಿ ಹಸ್ತಮೈಥುನ ಮಾಡಿದ ಆರೋಪ!

ವಿರಾಟ್ ಕೊಹ್ಲಿ ನಾಯಕತ್ವದಲ್ಲಿರುವ ಭಾರತ ತಂಡ, ಪ್ರವಾಸಿ ಬಾಂಗ್ಲಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿದೆ. ಎರಡನೇ ಟೆಸ್ಟ್‌ ವೇಳೆ ಧೋನಿಯನ್ನು ಕಾಮೆಂಟೇಟರ್ ಸೀಟಿನಲ್ಲಿ ಕೂರಿಸುವ ಆಲೋಚನೆ ಭಾರತದ ಕ್ರಿಕೆಟ್ ಪ್ರಚಾರಕ 'ಸ್ಟಾರ್ ನೆಟ್ವರ್ಕ್ಸ್'ನದ್ದು. ಹೀಗೆಂದು ಐಎಎನ್‌ಎಸ್ ವರದಿ ಮಾಡಿದೆ.

ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ 10 ವರ್ಷಗಳ ದಾಖಲೆ ಮುರಿದ ಶುಬ್‌ಮಾನ್ ಗಿಲ್

'ಸ್ಟಾರ್' ಈ ಪ್ರಸ್ತಾಪವನ್ನು ಬಿಸಿಸಿಐ ಅಧ್ಯಕ್ಷ, ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮುಂದಿಟ್ಟಿದೆ. ಐಎಎನ್‌ಎಸ್ ವರದಿ ಪ್ರಕಾರ, ಭಾರತದ ಮಾಜಿ ನಾಯಕರಾದ ಧೋನಿ ಮತ್ತು ಗಂಗೂಲಿ ಇಬ್ಬರೂ ಪಿಂಕ್‌ ಬಾಲ್‌ ಟೆಸ್ಟ್‌ನ ಮೊದಲೆರಡು ದಿನ, ಟೆಸ್ಟ್ ಇತಿಹಾಸದಲ್ಲಿನ ತಮ್ಮ ನೆಚ್ಚಿನ ಕ್ಷಣಗಳನ್ನು ಮೆಲುಕು ಹಾಕಲಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, November 5, 2019, 15:46 [IST]
Other articles published on Nov 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X