ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಟಿ20 ಕ್ರಿಕೆಟ್‌ ವಿಶ್ವ ದಾಖಲೆ ಬರೆದ ಸಿಎಸ್‌ಕೆ ನಾಯಕ ಎಂಎಸ್ ಧೋನಿ

MS Dhoni create world record as a captain with lead single T20 team in 200 matches

ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ನಾಯಕತ್ವ ವಹಿಸಿಕೊಂಡು ಇಂದಿಗೆ (ಏಪ್ರಿಲ್ 19) ಭರ್ತಿ 13 ವರ್ಷಗಳಾಗಿದೆ. ಈ ಸಂದರ್ಭದಲ್ಲಿ ಧೋನಿ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ಬರೊಬ್ಬರಿ 200ನೇ ಬಾರಿಗೆ ಮುನ್ನಡೆಸುತ್ತಿದ್ದಾರೆ. ಈ ಮೂಲಕ ನಾಯಕನಾಗಿಅತಿ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ಕ್ರಿಕೆಟಿಗ ಎನಿಸಿದ್ದಾರೆ ಧೋನಿ

ಏಪ್ರಿಲ್ 19 2008ರಂದು ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರಪ್ರಥಮ ಬಾರಿಗೆ ಐಪಿಎಲ್‌ನಲ್ಲಿ ಮುನ್ನಡೆಸಿದ್ದರು. ಅಂದು ಕಿಂಗ್ಸ್ ಇಲೆವೆನ್ ಪಂಜಾಬ್ ಚೆನ್ನೈಗೆ ಎದುರಾಳಿಯಾಗಿತ್ತು. ಈ ಪಂದ್ಯವನ್ನು ಚೆನ್ನೈ 33 ರನ್‌ಗಳ ಅಂತರದಿಂದ ಗೆದ್ದು ಬೀಗಿತ್ತು. ಅದಾಗಿ 13 ವರ್ಷಗಳ ನಂತರ ಇದೀಗ ಧೋನಿ ಅದೇ ತಂಡವನ್ನು 200ನೇ ಬಾರಿಗೆ ಮುನ್ನಡೆಸುತ್ತಿದ್ದಾರೆ. ಎರಡನೇ ಸ್ಥಾನದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಇದ್ದು ಕೊಹ್ಲಿ 128 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.

ಐಪಿಎಲ್: ಎಂಎಸ್ ಧೋನಿಗೆ ಗೌರವ ಸಲ್ಲಿಸಿದ ರಾಜಸ್ಥಾನ್ ರಾಯಲ್ಸ್ಐಪಿಎಲ್: ಎಂಎಸ್ ಧೋನಿಗೆ ಗೌರವ ಸಲ್ಲಿಸಿದ ರಾಜಸ್ಥಾನ್ ರಾಯಲ್ಸ್

ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ 200 ಪಂದ್ಯಗಳಲ್ಲಿ ಸದ್ಯ ಸ್ಥಗಿತವಾಗಿರುವ ಚಾಂಪಿಯನ್ಸ್ ಲೀಗ್ ಕೂಡ ಸೇರಿದೆ. ನಾಯಕನಾಗಿ ಮುನ್ನಡೆಸಿದ 199 ಪಂದ್ಯಗಳಲ್ಲಿ ಧೋನಿ 170 ಪಂದ್ಯಗಳನ್ನು ಗೆದ್ದಿದ್ದರೆ 77 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.

ಇನ್ನು ಒಟ್ಟಾರೆಯಾಗಿ ಧೋನಿ 286 ಟಿ20 ಪಂದ್ಯಗಳಲ್ಲಿ ನಾಯಕನಾಗಿ ಬೇರೆ ಬೇರೆ ತಂಡಗಳನ್ನು ಮುನ್ನಡೆಸಿದ್ದಾರೆ. ಇದರಲ್ಲಿ 72 ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರೆ ಉಳಿದ 16 ಪಂದ್ಯಗಳಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದಾರೆ.

ಕೊಹ್ಲಿ, ಗೈಲ್, ರೈನಾ ಅಲ್ಲ.. ಶ್ರೀಕಾಂತ್ ಪ್ರಕಾರ ಐಪಿಎಲ್‌ನ ಮೌಲ್ಯಯುತ ಆಟಗಾರ ಯಾರು ಗೊತ್ತಾ!ಕೊಹ್ಲಿ, ಗೈಲ್, ರೈನಾ ಅಲ್ಲ.. ಶ್ರೀಕಾಂತ್ ಪ್ರಕಾರ ಐಪಿಎಲ್‌ನ ಮೌಲ್ಯಯುತ ಆಟಗಾರ ಯಾರು ಗೊತ್ತಾ!

ಈ ಬಾರಿಯ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಎರಡು ಪಂದ್ಯಗಳಲ್ಲಿ ಒಂದು ಸೋಲು ಹಾಗೂ ಒಂದು ಗೆಲುವು ಸಾಧಿಸಿದೆ. ಈಗ ಮೂರನೇ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡುತ್ತಿದ್ದು ಗೆಲುವಿನ ನಿರೀಕ್ಷೆಯಲ್ಲಿದೆ.

Story first published: Tuesday, April 20, 2021, 8:36 [IST]
Other articles published on Apr 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X