ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಮಿಂಚಿನ ವೇಗದ ಸ್ಟಂಪಿಂಗ್‌ ಸೀಕ್ರೆಟ್ ಬಿಚ್ಚಿಟ್ಟ ಎಂಎಸ್ ಧೋನಿ

ಧೋನಿ ಸ್ಟೆಂಪ್ ಟೈಮಿಂಗ್.. 00.001 sec ಅಷ್ಟೆ..!
MS Dhoni credits tennis ball cricket for quick hands behind stumps

ಚೆನ್ನೈ, ಮೇ 2: ವಿಶ್ವ ಶ್ರೇಷ್ಠ ವಿಕೆಟ್ ಕೀಪರ್‌ಗಳಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮುಂಚೂಣಿಯಲ್ಲಿರುವವರು ಎಂಬುದಕ್ಕೆ ಬುಧವಾರದ (ಮೇ 1) ಐಪಿಎಲ್ ಪಂದ್ಯದಲ್ಲಿ ಮತ್ತೆ ಸಾಕ್ಷ್ಯ ಲಭಿಸಿತ್ತು. ಪಂದ್ಯದಲ್ಲಿ ಧೋನಿ ಅದ್ಭುತ ಕೈ ಚಳಕ ಪ್ರದರ್ಶಿಸಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರನ್ನು ಔಟ್ ಮಾಡಿದ್ದರು.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ತಾನು ಹೀಗೆ ವೇಗದ ಸ್ಟಂಪಿಂಗ್ ಮಾಡುವ ಕೌಶಲ್ಯ ಬೆಳೆದಿದ್ದು ಟೆನಿಸ್ ಬಾಲ್ ಕ್ರಿಕೆಟ್‌ನಿಂದ. ಹೀಗಾಗಿ ವೇಗದ ಸ್ಟಂಪಿಂಗ್ ಶ್ರೇಯಸ್ಸು ಅದಕ್ಕೇ ಸಲ್ಲುತ್ತದೆ ಎಂದು ಧೋನಿ ಹೇಳಿಕೊಂಡಿದ್ದಾರೆ. ಧೋನಿ ಅದ್ಭುತ ಕೈ ಚಳಕದಿಂದಾಗಿ ಬುಧವಾರ ನಡೆದ ಐಪಿಎಲ್ 50ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ 80 ರನ್ ಜಯ ಗಳಿಸಿತ್ತು.

2010ರ ವಿಶ್ವ ಚಾಂಪಿಯನ್‌ ಗೋಲ್‌ಕೀಪರ್‌ಗೆ ಹೃದಯಾಘಾತ, ಅಪಾಯದಿಂದ ಪಾರು2010ರ ವಿಶ್ವ ಚಾಂಪಿಯನ್‌ ಗೋಲ್‌ಕೀಪರ್‌ಗೆ ಹೃದಯಾಘಾತ, ಅಪಾಯದಿಂದ ಪಾರು

ಡೆಲ್ಲಿ ತಂಡದ ಗೆಲುವಿನ ಹೊಣೆ ಹೊತ್ತು ಆಡುತ್ತಿದ್ದ ನಾಯಕ ಶ್ರೇಯಸ್ ಐಯ್ಯರ್ (31 ಎಸೆತ, 44 ರನ್), ಕ್ರಿಸ್ ಮೋರಿಸ್ (೦) ಧೋನಿಯ ಮಿಂಚಿನ ವೇಗದ ಸ್ಟಂಪಿಂಗ್‌ಗೆ ಬಲಿಯಾಗಿದ್ದರು. ಈ ಸ್ಟಂಪ್ಡ್ ಔಟ್ ಮೇಲ್ನೋಟಕ್ಕೆ ಕಾಣಿಸದೆ, ಡಿಆರ್‌ಎಸ್‌ ಮೂಲಕ ಮಾತ್ರ ನಿರ್ಧರಿಸುವಷ್ಟು ಸೂಕ್ಷ್ಮ ರೀತಿಯದ್ದಾಗಿತ್ತು.

ಪಂದ್ಯದ ಬಳಿಕ ಮಾತನಾಡಿದ ಧೋನಿ, ''ನನಗನ್ನಿಸಿದಂತೆ, ಈ ಕೌಶಲ ಬೆಳೆದಿದ್ದು ಟೆನಿಸ್ ಬಾಲ್ ಕ್ರಿಕೆಟ್‌ನಿಂದ. ಆದರೆ ಹಾಗೆ ಸ್ಟಂಪಿಂಗ್ ಮಾಡಲು ಮೂಲದಿಂದ ಉನ್ನತ ಮಟ್ಟದವರೆಗಿನ ನಮ್ಮ ಕೌಶಲ ಬಳಸಿಕೊಳ್ಳಬೇಕು. ಆದರೂ ಮೂಲಗಳೇ ಹೆಚ್ಚು ಪ್ರಮುಖವಾದದು ಎಂಬುದು ನನ್ನನಿಸಿಕೆ' ಎಂದರು.

ಐಪಿಎಲ್ ದಾಖಲೆ: ಕೊಹ್ಲಿ, ಗೌತಮ್ ಗಂಭೀರ್ ಹಿಂದಿಕ್ಕಿದ ಸುರೇಶ್ ರೈನಾಐಪಿಎಲ್ ದಾಖಲೆ: ಕೊಹ್ಲಿ, ಗೌತಮ್ ಗಂಭೀರ್ ಹಿಂದಿಕ್ಕಿದ ಸುರೇಶ್ ರೈನಾ

'ಚೆಂಡನ್ನು ಗಮನಿಸಬೇಕು, ಅನಂತರ ಸ್ಟಂಪ್‌ಗೆ ಯತ್ನಿಸಬೇಕು. ಚೆಂಡಿನ ವೇರಿಯೇಷನ್ಸ್ ತಿಳಿದುಕೊಳ್ಳಬೇಕು. ಅದಕ್ಕಾಗಿ ನೀವು ಕೊಂಚ ಸಮಯ ವ್ಯಯಿಸಬೇಕಾಗುತ್ತದೆ. 20 ಓವರ್‌ ಬಳಿಕ (ಮೊದಲ ಇನ್ನಿಂಗ್ಸ್ ಮುಕ್ತಾಯದ ಬಳಿಕ) ಚೆಂಡು ಹೆಚ್ಚಿನ ಸಾರಿ ಸ್ವಿಂಗ್ ಆಗಲಾರಂಭಿಸುತ್ತದೆ. ಅದಕ್ಕೆ ತಯಾರಾಗಿರಬೇಕು' ಎಂದು ಧೋನಿ ವಿಕೆಟ್ ಕೀಪಿಂಗ್ ಗುಟ್ಟನ್ನು ಬಿಚ್ಚಿಟ್ಟರು.

Story first published: Thursday, May 2, 2019, 16:02 [IST]
Other articles published on May 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X