ಗಂಗೂಲಿ ನೀಡಿದಷ್ಟು ಗುಣಮಟ್ಟದ ಆಟಗಾರರನ್ನು ಧೋನಿ ಕೊಹ್ಲಿಗೆ ನೀಡಲಿಲ್ಲ: ಗಂಭೀರ್

ಮಹೇಂದ್ರ ಸಿಂಗ್ ಧೋನಿ ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂಬ ಮಾತು ಕ್ರಿಕೆಟ್ ಪಂಡಿತರು ವ್ಯಕ್ತಪಡಿಸುತ್ತಾರೆ. ಅದಕ್ಕೆ ಪೂರಕವಾಗಿ ಧೋನಿ ಎರಡು ವಿಶ್ವಕಪ್ ಕಿರೀಟವನ್ನು ಭಾರತದ ಪಾಲಿಗೆ ಮುಡಿಸಿದ್ದಾರೆ. ಏಕದಿನ ಹಾಗೂ ಟಿ20 ವಿಶ್ವಕಪ್ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿಸುವಲ್ಲಿ ಧೋನಿ ಯಶಸ್ವಿಯಾಗಿದ್ದರು.

ಹೀಗಾಗಿ ಸೌರವ್ ಗಂಗೂಲಿ ನಾಯಕತ್ವದ ಜೊತೆಗೆ ಧೋನಿ ಕ್ಯಾಪ್ಟನ್ಸಿಯನ್ನು ಹೋಲಿಕೆ ಮಾಡಲಾಗುತ್ತದೆ. ಈ ಬಗ್ಗೆ ತನ್ನದೇ ರೀತಿಯಲ್ಲಿ ವಿಮರ್ಶೆ ಮಾಡಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಂಡಕ್ಕೆ ಯುವ ಆಟಗಾರರನ್ನು ಕೊಡುಗೆಯಾಗಿ ನೀಡುವ ವಿಚಾರದಲ್ಲಿ ಇಬ್ಬರೂ ನಾಯಕರನ್ನು ಹೋಲಿಕೆ ಮಾಡಿದ್ದಾರೆ.

ಕಮ್‌ಬ್ಯಾಕ್‌ ಮಾಡಲಿದ್ದಾರೆ 2009ರ ಇಂಡಿಯನ್ ಪ್ರೀಮಿಯರ್ ಲೀಗ್ ಹೀರೋ

ಗಂಗೂಲಿ ಹಾಗೂ ಧೋನಿ ಇಬ್ಬರೂ ನಾಯಕರೊಂದಿಗೆ ಆಡಿರುವ ಗಂಭೀರ್ ಈ ಬಗ್ಗೆ ಮಾತನಾಡಿದ್ದಾರೆ. ನಾಯಕನಾಗಿ ಸೌರವ್ ಗಂಗೂಲಿ ಭಾರತ ಕ್ರಿಕೆಟ್ ತಂಡಕ್ಕೆ ನೀಡಿದ ಉತ್ಕೃಷ್ಠ ಗುಣಮಟ್ಟದ ಆಟಗಾರರ ರೀತಿಯ ಕ್ರಿಕೆಟಿಗರನ್ನು ಧೋನಿ ತನ್ನ ನಾಯಕತ್ವದ ಅಂತ್ಯದಲ್ಲಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಗಂಗೂಲಿ ವಿಶ್ವ ಕ್ರಿಕೆಟನ್ನು ಹಿಮ್ಮೆಟ್ಟಿಸುವಂತಾ ಆಟಗಾರರನ್ನು ಬೆಳೆಸಿದರು ಎಂದು ಗಂಭೀರ್ ಹೇಳಿದ್ದಾರೆ.

ಧೋನಿ ತನ್ನ ನಾಯಕತ್ವ ಅಂತ್ಯದ ವೇಳೆಗೆ ಉತ್ಕೃಷ್ಠ ಗುಣಮಟ್ಟದ ಆಟಗಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿರಾಟ್ ಕೊಹ್ಲಿಗೆ ನೀಡಲಿಲ್ಲ. ಸ್ವತಃ ವಿರಾಟ್ ಕೊಹ್ಲಿಯನ್ನು ಹೊರತು ಪಡಿಸಿದರೆ ರೋಹಿತ್ ಶರ್ಮಾ ಹಾಗೂ ಜಸ್ಪ್ರಿತ್ ಬೂಮ್ರಾ ಶ್ರೇಷ್ಠ ಆಟಗಾರರಾಗಿದ್ದಾರೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ನೆಟ್‌ನಲ್ಲಿ ಅಭ್ಯಾಸ ನಡೆಸಿದ ಸುರೇಶ್ ರೈನಾ, ರಿಷಭ್ ಪಂತ್: ವೀಡಿಯೊ

ಆದರೆ ಸೌರವ್ ಗಂಗೂಲಿ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ವಿಜೇತ ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಹಾಗೂ ಆಶಿಶ್ ನೆಹ್ರಾರಂತಾ ಆಟಗಾರರನ್ನು ಭಾರತೀಯ ಕ್ರಿಕೆಟ್‌ಗೆ ನೀಡಿದ್ದಾರೆ ಎಂದು ಗೌತಮ್ ಗಂಭೀರ್ ಹೇಳಿಕೆಯನ್ನು ನೀಡಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, July 14, 2020, 13:38 [IST]
Other articles published on Jul 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X