ಯಾರು ಶ್ರೇಷ್ಠ ನಾಯಕ : ಸಮೀಕ್ಷೆಯಲ್ಲಿ ಧೋನಿ ಮತ್ತು ಗಂಗೂಲಿ ಮಧ್ಯೆ ಮೇಲುಗೈ ಯಾರಿಗೆ?

ಭಾರತದ ಶ್ರೇಷ್ಠ ನಾಯಕ ಯಾರು ಎಂಬ ಪ್ರಶ್ನೆಗೆ ಎರಡು ಉತ್ತರಗಳು ಬರುತ್ತದೆ. ಒಂದು ಸೌರವ್ ಗಂಗೂಲಿ ಇನ್ನೊಂದು ಮಹೇಂದ್ರ ಸಿಂಗ್ ಧೋನಿ. ಈ ಇಬ್ಬರು ನಾಯಕರಲ್ಲಿ ಯಾರು ಶ್ರೇಷ್ಠ ಎಂಬುದಕ್ಕಾಗಿ ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಸಮೀಕ್ಷೆಯನ್ನು ನಡೆಸಲಾಗಿತ್ತು. ಇದರ ಫಲಿತಾಂಶ ಪ್ರಕಟವಾಗಿದೆ.

ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಭಾರತದ ಶ್ರೇಷ್ಠ ನಾಯಕ ಯಾರು ಎಂಬ ಪ್ರಶ್ನೆಗೆ ಮಹೇಂದ್ರ ಸಿಂಗ್ ಧೋನಿ ಮಾಜಿ ನಾಯಕ ಸೌರವ್ ಗಂಗೂಲಿಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಮೀಕ್ಷೆ ಗ್ರೇಮ್ ಸ್ಮಿತ್, ಕುಮಾರ್ ಸಂಗಕ್ಕರ, ಗೌತಮ್ ಗಂಭೀರ್, ಇರ್ಫಾನ್ ಪಠಾಣ್ ಮತ್ತು ಕ್ರಿಸ್ ಶ್ರೀಕಾಂತ್ ಅವರನ್ನು ಒಳಗೊಂಡಿತ್ತು.

'2019ರ ವಿಶ್ವಕಪ್‌ ಸೂಪರ್ ಓವರ್‌ಗೂ ಮುನ್ನ ಸ್ಟೋಕ್ಸ್ ಸಿಗರೇಟ್ ಸುಟ್ಟಿದ್ದರು'

8 ಮಾನದಂಡಗಳಲ್ಲಿ ಆಯ್ಕೆ

8 ಮಾನದಂಡಗಳಲ್ಲಿ ಆಯ್ಕೆ

ಯಾರು ಶ್ರೇಷ್ಠ ನಾಯಕ ಎಂಬ ಸಮೀಕ್ಷೆಯಲ್ಲಿ ಉತ್ತರವನ್ನು ಕಂಡುಕೊಳ್ಳಲು ಕೆಲ ಮಾನದಂಡಗಳನ್ನು ಇಲ್ಲಿ ಅನುಸರಿಸಲಾಗಿತ್ತು. ಮುಖ್ಯವಾಗಿ ಎಂಟು ಮಾನದಂಡಗಳನ್ನು ಶ್ರೇಷ್ಠ ನಾಯಕನ ಆಯ್ಕೆಗೆ ಪರಿಗಣಿಸಲಾಗಿತ್ತು. ಇದರಲ್ಲಿ ಎಂಎಸ್ ಧೋನಿ ಮೇಲುಗೈ ಸಾಧಿಸಿದ್ದಾರೆ ಎಂದು ಇತ್ತೀಚಿನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಘೋಷಿಸಲಾಗಿದೆ.

ಖಾಸಗಿ ವಾಹಿನಿಯ ಸಮೀಕ್ಷೆ

ಖಾಸಗಿ ವಾಹಿನಿಯ ಸಮೀಕ್ಷೆ

ಭಾರತದ ಇಬ್ಬರು ಶ್ರೇಷ್ಠ ನಾಯಕರು ಇತ್ತೀಚೆಗೆ ತಮ್ಮ ಹುಟ್ಟುಹಬ್ವನ್ನು ಆಚರಿಸಿಕೊಂಡರು. ಧೋನಿ ಜುಲೈ 7ರಂದು ಹಾಗೂ ಸೌರವ್ ಗಂಗೂಲಿ ಜುಲೈ 8ರಂದು ತಮ್ಮ ಹುಟ್ಟುಹಬ್ಬ ಆಚರಿಸದರು. ಈ ಹಿನ್ನೆಲೆಯಲ್ಲಿ ಶ್ರೇಷ್ಠ ನಾಯಕ ಯಾರು ಎಂಬ ವಿಚಾರವಾಗಿ ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಸಮೀಕ್ಷೆ ನಡೆಸಲಾಗಿತ್ತು.

ಅರ್ಧ ಅಂಕದಲ್ಲಿ ಧೋನಿಗೆ ಮುನ್ನಡೆ

ಅರ್ಧ ಅಂಕದಲ್ಲಿ ಧೋನಿಗೆ ಮುನ್ನಡೆ

ನಾಯಕತ್ವದ ಸಂದರ್ಭದಲ್ಲಿ ಧೋನಿಯ ಬ್ಯಾಟಿಂಗ್‌ನಲ್ಲಿನ ಪ್ರದರ್ಶನ ಇಲ್ಲಿ ದೋನಿಯ ಮೇಲುಗೈಗೆ ಕಾರಣವಾಯಿತು. ಪ್ರತಿ ವಿಭಾಗದಲ್ಲಿ ಪ್ಯಾನೆಲ್ ಸದಸ್ಯರ ಮತಗಳಿಂದ ಸರಾಸರಿ ಅಂಕವನ್ನು ಲೆಕ್ಕಹಾಕಲಾಯಿತು. ಇದರಲ್ಲಿ ಪ್ರತಿ ವಿಭಾಗದ ಫಲಿತಾಂಶವನ್ನು ಒಟ್ಟುಗೂಡಿಸಿದ ನಂತರ ಧೋನಿ ಸೌರವ್ ಗಂಗೂಲಿಗಿಂತ ಕೇವಲ ಅರ್ಧ ಅಂಕಗಳಿಂದ ಮುನ್ನಡೆಯನ್ನು ಸಾಧಿಸಿದ್ದರು.

ಟೆಸ್ಟ್‌ನಲ್ಲಿ ಗಂಗೂಲಿ ಬೆಸ್ಟ್

ಟೆಸ್ಟ್‌ನಲ್ಲಿ ಗಂಗೂಲಿ ಬೆಸ್ಟ್

ಇನ್ನು ಇದೇ ಸಂದರ್ಭದಲ್ಲಿ ಸೌರವ್ ಗಂಗೂಲಿ ಟೆಸ್ಟ್‌ ಮಾದರಿಯಲ್ಲಿ ಧೋನಿಗಿಂತ ಉತ್ತಮ ನಾಯಕ ಎಂದು ತೀರ್ಪುಗಾರರಾದ ಕುಮಾರ ಸಂಗಕ್ಕರ ಹಾಗೂ ಗ್ರೇಮ್ ಸ್ಮಿತ್ ಅಭಿಪ್ರಾಯ ಪಟ್ಟರೆ ಸೀಮಿತ ಓವರ್‌ಗಳಲ್ಲಿ ಧೋನಿ ಅತ್ಯುತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, July 14, 2020, 19:49 [IST]
Other articles published on Jul 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X