ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತನ್ನ ನಿವೃತ್ತಿಯ ನಿರ್ಧಾರವನ್ನು ತಾನೇ ನಿರ್ಧರಿಸುವ ಹಕ್ಕು ಧೋನಿ ಗಳಿಸಿಕೊಂಡಿದ್ದಾರೆ: ಗ್ಯಾರಿ ಕರ್ಸ್ಟನ್

Ms Dhoni Has Earned The Right To Leave: Gary Kirsten

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ತೆಗೆದುಕೊಂಡಿದ್ದಾರೆ ಎಂದು ಹಠಾತ್ ಆಗಿ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿ ಬಿಟ್ಟಿತ್ತು. ಕೆಲ ಅಭಿಮಾನಿಗಳು ಇದು ನಿಜವೆಂದು ನಂಬಿಕೊಂಡಿದ್ದರು. ಆದರೆ ಈ ಬಗ್ಗೆ ಬಳಿಕ ಧೋನಿ ಪತ್ನಿ ಸಾಕ್ಷಿ ಸಿಂಗ್ ಪ್ರತಿಕ್ರಿಯಿಸಿ ಸುದ್ದಿ ಸುಳ್ಳು ಎನ್ನುವುದನ್ನು ಖಚಿತಪಡಿಸಿದ್ದಾರೆ. ಜೊತೆಗೆ ಸುಳ್ಳು ಸುದ್ದಿ ಹರಿಬಿಟ್ಟವರ ವಿರುದ್ಧ ಸಾಕ್ಷಿ ಕೆಂಡ ಕಾರಿದರು.

ಈ ಮಧ್ಯೆ ಟೀಮ್ ಇಂಡಿಯಾದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಹೇಳಿಕೆಯನ್ನು ನೀಡಿದ್ದಾರೆ. ಅವರು ಧೋನಿ ನಿವೃತ್ತಿಯ ಬಗ್ಗೆ ಮಾತನಾಡಿದ್ದು, ಧೋನಿಗೆ ನಿವೃತ್ತಿ ತೆಗೆದುಕೊಳ್ಳುವ ಬಗ್ಗೆ ಯಾರೂ ಒತ್ತಡ ಹಾಕುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್‌ನ ಪದಾರ್ಪಣೆ ಮತ್ತು ವಿದಾಯ ಪಂದ್ಯ ಎರಡರಲ್ಲೂ ಶತಕ ಸಿಡಿಸಿದ ವಿಶೇಷ ಆಟಗಾರರುಟೆಸ್ಟ್ ಕ್ರಿಕೆಟ್‌ನ ಪದಾರ್ಪಣೆ ಮತ್ತು ವಿದಾಯ ಪಂದ್ಯ ಎರಡರಲ್ಲೂ ಶತಕ ಸಿಡಿಸಿದ ವಿಶೇಷ ಆಟಗಾರರು

ಧೋನಿ ಓರ್ವ ಶ್ರೇಷ್ಟ ಆಟಗಾರ. ಆತನ ಆಟ ಮತ್ತು ಗುಣಗಳಿಂದ ಆತ ತಾನು ಯಾವಾಗ ನಿವೃತ್ತಿಯನ್ನು ಹೊಂದಬೇಕು ಎಂದು ನಿರ್ಧರಿಸುವ ತೀರ್ಮಾನವನ್ನು ಅವರೇ ತೆಗೆದುಕೊಂಡಿದ್ದಾರೆ. ಹಾಗಾಗಿ ನಿವೃತ್ತಿಯ ವಿಚಾರದಲ್ಲಿ ಧೋನಿ ಏನು ಮಾಡಬೇಕು ಎಂದು ಯಾರೂ ಹೇಳುವುದು ಸರಿಯಲ್ಲ ಎಂದು ಗ್ಯಾರಿ ಕರ್ಸ್ಟನ್ ಹೇಳಿದ್ದಾರೆ.

ಟೀಂ ಇಂಡಿಯಾ ಪರ 90 ಟೆಸ್ಟ್‌, 350 ಏಕದಿನ ಮತ್ತು 98 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಧೋನಿ, ಮರಳಿ ಭಾರತ ತಂಡದ ಪರ ಆಡುವುದಿಲ್ಲವೆ? ಈ ಪ್ರಶ್ನೆಗೆ ಪತ್ರಿಕೆಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಭಾರತ ತಂಡದ ಮಾಜಿ ಕೋಚ್‌ ಗ್ಯಾರಿ ಕರ್ಸ್ಟನ್ ಉತ್ತರಿಸಿದ್ದಾರೆ.

ಆಸ್ಟ್ರೇಲಿಯಾಕ್ಕೆ ಟೀಮ್ ಇಂಡಿಯಾ ಪ್ರವಾಸ: ಸಂಪೂರ್ಣ ವೇಳಾಪಟ್ಟಿಆಸ್ಟ್ರೇಲಿಯಾಕ್ಕೆ ಟೀಮ್ ಇಂಡಿಯಾ ಪ್ರವಾಸ: ಸಂಪೂರ್ಣ ವೇಳಾಪಟ್ಟಿ

ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಧೋನಿ ಜೊತೆಗೆ ಸಾಕಷ್ಟು ಕಾಲ ಕಳೆದಿದ್ದಾರೆ. 2011ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಟೀಮ್ ಇಂಡಿಯಾದ ಕೋಚ್ ಆಗಿದ್ದವರು ಗ್ಯಾರಿ ಕರ್ಸ್ಟನ್. ಎಂಎಸ್‌ (ಧೋನಿ) ಅದ್ಭುತ ಆಟಗಾರ. ಬುದ್ಧವಂತಿಕೆ, ಶಾಂತ ಸ್ವಭಾವ, ಸಾಮರ್ಥ್ಯ, ವೇಗ ಮತ್ತು ಚುರುಕಿನಲ್ಲಿ ಎತ್ತಿದ ಕೈ. ಜೊತೆಗೆ ಮ್ಯಾಚ್‌ ವಿನ್ನರ್‌ ಕೂಡ. ಈ ಎಲ್ಲಾ ಗುಣಗಳಿಂದ ಅವರು ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರನಾಗಿ ಕಾಣಿಸುತ್ತಾರೆ ಎಂದು ಕಸ್ಟರ್ನ್ ಹೇಳಿದ್ದಾರೆ.

Story first published: Thursday, May 28, 2020, 20:07 [IST]
Other articles published on May 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X