ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

PUBG ಬಿಟ್ಟು COD ಕಡೆ ವಾಲಿದ ಟೀಮ್ ಇಂಡಿಯಾ ನಾಯಕ ಧೋನಿ!

Ms Dhoni Has Shifted From Pubg Mobile To Cod Mobile

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪಬ್‌ಜಿ ಆಟದಲ್ಲಿ ನಿಸ್ಸೀಮ ಎಂಬುದು ಹೊಸ ಸುದ್ದಿಯಲ್ಲ. ವಿರಾಮದ ಸಂದರ್ಭದಲ್ಲಿ ಧೋನಿ ಪಬ್‌ಜಿ ಆಡುತ್ತಾ ಕಾಲಕಳೆಯುತ್ತಿದ್ದರು. ಆದರೆ ಈಗ ಮಹೇಂದ್ರ ಸಿಂಗ್ ಧೋನಿ ಪಬ್‌ಜಿಯಿಂದ ದೂರವಾಗಿ ಮತ್ತೊಂದು ವಿಡಿಯೋ ಗೇ,್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

ಯಸ್ ಧೋನಿ ಪಬ್‌ಜಿಯನ್ನು ಬಿಟ್ಟು ಅದೇ ಮಾದರಿಯ ಮತ್ತೊಂದು ವಿಡಿಯೋ ಗೇಮ್ ಕಾಲ್‌ ಆಫ್ ಡ್ಯೂಟಿ(COD)ಗೆ ಅಂಟಿಕೊಂಡಿದ್ದಾರಂತೆ. ಈ ವಿಚಾರವನ್ನು ಟೀಮ್ ಇಮಡಿಯಾದ ಮತ್ತೋರ್ವ ಆಟಗಾರ ದೀಪಕ್ ಚಾಹರ್ ತಿಳಿಸಿದ್ದಾರೆ.

'ಆಸಿಸ್ ಕ್ರಿಕೆಟಿಗರು ಕೊಹ್ಲಿಯನ್ನು ಕೆಣಕಲು ಭಯಪಡುತ್ತಿದ್ದಾರೆ, ಅದಕ್ಕೆ ಕಾರಣ...': ಕ್ಲಾರ್ಕ್'ಆಸಿಸ್ ಕ್ರಿಕೆಟಿಗರು ಕೊಹ್ಲಿಯನ್ನು ಕೆಣಕಲು ಭಯಪಡುತ್ತಿದ್ದಾರೆ, ಅದಕ್ಕೆ ಕಾರಣ...': ಕ್ಲಾರ್ಕ್

ಐಪಿಎಲ್ ಫ್ರಾಂಚೈಸಿಯ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ದೀಪಕ್ ಚಾಹರ್ ಈ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ನಾನು ಈಗ ಸಾಕಷ್ಟು ಸಮಯವನ್ನು ಪಬ್‌ಜಿ ಆಟದಲ್ಲಿ ಕಳೆಯುತ್ತಿದ್ದೇನೆ. ಯಾಕೆಂದರೆ ಈಗ ಕ್ವಾರಂಟೈನ್ ಸಮಯ. ಈ ಮೊದಲು ಧೋನಿ ಕೂಡ ಸಾಕಷ್ಟು ಸಮಯವನ್ನು ಪಬ್‌ಜಿ ಆಡುತ್ತಾ ಕಳೆಯುತ್ತಿದ್ದರು. ಆದರೆ ಈಗ ಧೋನಿ ಪಬ್‌ಜಿಯನ್ನು ತೊರೆದಿದ್ದಾರೆ ಎಂದು ತಿಳಿಸಿದ್ದಾರೆ.

ಧೋನಿ ಭಾಯಿ ಮೊದಲು ಸಾಕಷ್ಟು ಪಬ್‌ಜಿ ಆಡುತ್ತಿದ್ದರು. ಆದರೆ ಈಗ ಅವರು ಸಿಒಡಿ ಮೊಬೈಲ್‌ಗೆ ವರ್ಗಾವಣೆಯಾಗಿದ್ದಾರೆ. ಪಬ್‌ಜಿಯನ್ನು ಆಡಲು ಬಂದರೆ ಅವರು ಆಟವ ನ್ನು ಸಾಕಷ್ಟು ಮರೆತಿದ್ದಾರೆ. ಸಿಒಡಿ ಮೊಬೈಲ್‌ ಗೇಮ್‌ಅನ್ನು ಸಾಕಷ್ಟು ಆಡುತ್ತಿರುವುದರಿಂದ ಮತ್ತೆ ಪಬ್‌ಜಿಯನ್ನು ಆಡಲು ಕಷ್ಟಪಡುತ್ತಿದ್ದಾರೆ ಎಂದು ಚಾಹರ್ ಹೇಳಿದ್ದಾರೆ.

'ಕನಸು ಕಾಣುತ್ತಿರಿ' ಎಂದು ಮುಂಬೈ ಇಂಡಿಯನ್ಸ್‌ಗೆ ತಿರುಗೇಟು ನೀಡಿದ ಚಾಹಲ್ !'ಕನಸು ಕಾಣುತ್ತಿರಿ' ಎಂದು ಮುಂಬೈ ಇಂಡಿಯನ್ಸ್‌ಗೆ ತಿರುಗೇಟು ನೀಡಿದ ಚಾಹಲ್ !

ಟೀಮ್ ಇಂಡಿಯಾ ಕ್ರಿಕೆಟಿಗರ ಜೊತೆಗೆ ಮಾಹಿ ತಂಡ ಮಾಡಿಕೊಂಡು ಧೋನಿ ಮೊಬೈಲ್ ಮಲ್ಟಿ ಪ್ಲೇಯರ್ ಗೇಮ್‌ನಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹೊಸ ಸುದ್ದಿಯಲ್ಲ. ಟೀಮ್ ಇಂಡಿಯಾದ ಆಟಗಾರರಾದ ಯುಜುವೇಂದ್ರ ಚಾಹಲ್, ಮೊಹಮದ್ ಶಮಿ ಮತ್ತು ಕೇದಾರ್ ಜಾಧವ್ ಧೋನಿ ಜೊತೆಗೆ ಆಟದಲ್ಲಿ ಪಾಲ್ಗೊಳ್ಳುವ ಇತರ ಕ್ರಿಕೆಟಿಗರು.

Story first published: Tuesday, April 7, 2020, 21:53 [IST]
Other articles published on Apr 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X